Site icon Vistara News

Udupi Gang War : ಉಡುಪಿಯಲ್ಲಿ ನಿಲ್ಲದ ಗ್ಯಾಂಗ್ ವಾರ್; ಇಬ್ಬರು ಪುಂಡರು ಅಂದರ್‌

Udupi Gang War

ಉಡುಪಿ: ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್ ವಾರ್ (Udupi Gang War) ನಡೆದಿದ್ದು, ಯುವಕನೊಬ್ಬ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಉಡುಪಿಯ ಪುತ್ತೂರಿನಲ್ಲಿ ಜೂನ್ 15ರ ರಾತ್ರಿ ಘಟನೆ ನಡೆದಿದೆ.

ಚರಣ್‌ ಎಂಬಾತ ಸೆಲೂನ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಶಬರಿ ಎಂಬಾತನಿಗೆ ಚರಣ್‌ ಬೈದಿದ್ದ. ಈ ವಿಚಾರಕ್ಕೆ ಮಾತುಕತೆಗೆಂದು ಪ್ರವೀಣ್‌ ಎಂಬಾತ ಉಡುಪಿ ನಗರದ ಪುತ್ತೂರಿ‌ನ ಬಿರಿಯಾನಿ ಪಾಯಿಂಟ್‌ ಬಳಿ ಚರಣ್‌ನನ್ನು ಕರೆದಿದ್ದ. ಇತ್ತ ಚರಣ್‌ ತನ್ನ ಮೂವರು ಸ್ನೇಹಿತರ ಜತೆಗೂಡಿ ಆಗಮಿಸಿದ್ದ.

ಚರಣ್‌ ಬರುತ್ತಿದ್ದಂತೆ ಪ್ರವೀಣ್‌ ಗ್ಯಾಂಗ್‌ ಏಕಾಏಕಿ ತಲವಾರ್‌ ಬೀಸಿ ಕೊಲೆಗೆ ಯತ್ನಿಸಿದ್ದಾರೆ. ಈ ವೇಳೆ ದಾಳಿಯಿಂದ ತಪ್ಪಿಸಿಕೊಳ್ಳಲು ಚರಣ್ ಮತ್ತು ಸಂಗಡಿಗರು ಬೈಕ್ ಬಿಟ್ಟು ಓಡಿದ್ದಾರೆ. ಇತ್ತ ಚರಣ್ ಸಿಗದಿದ್ದಕ್ಕೆ ಆತನ ಬೈಕ್‌ ಅನ್ನು ಜಖಂಗೊಳಿಸಿದ್ದಾರೆ. ತಮ್ಮ ಕೃತ್ಯವನ್ನು ವಿಡಿಯೋ ಮಾಡಿಕೊಂಡು ಪುಂಡರು ಅಟ್ಟಹಾಸ ಮೆರೆದಿದ್ದಾರೆ.

ಉಡುಪಿಯಲ್ಲಿ ಹೆಚ್ಚುತ್ತಿರುವ ಗ್ಯಾಂಗ್ ವಾರ್ ಪ್ರಕರಣಕ್ಕೆ ಉಡುಪಿ ಜನತೆ ಭಯಭೀತರಾಗಿದ್ದಾರೆ. ಒಂದೇ ತಿಂಗಳ ಅಂತರದಲ್ಲಿ ಮೂರು ಗ್ಯಾಂಗ್ ವಾರ್ ಪ್ರಕರಣ ದಾಖಲಾಗಿದೆ.

ಕೃತ್ಯದ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಅರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಅಭಿ, ಪ್ರವೀಣ್ ಕಟಪಾಡಿ, ದೇಶರಾಜ್ ಬಂಧಿತ ಆರೋಪಿಗಳಾಗಿದ್ದಾರೆ. ಸದ್ಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Udupi Gang War: ಉಡುಪಿ ಗ್ಯಾಂಗ್ ವಾರ್ ಪ್ರಕರಣ; ಮತ್ತೆ ಮೂವರು ಆರೋಪಿಗಳ ಬಂಧನ

ಸ್ಮಶಾನಕ್ಕೆ ಕರೆದೊಯ್ದು ಸ್ನೇಹಿತನನ್ನೇ ಕೊಂದು ಹಾಕಿದ ಮಿತ್ರದ್ರೋಹಿ

ಶಿವಮೊಗ್ಗ: ಕುಡಿದ ಮತ್ತಿನಲ್ಲಿ ಯುವಕನೊಬ್ಬ ತನ್ನ ಸ್ನೇಹಿತನನ್ನೇ ಬರ್ಬರವಾಗಿ ಕೊಂದು (Murder Case) ಹಾಕಿದ್ದಾನೆ. ಶಿವಮೊಗ್ಗ ನಗರದ ಆಯನೂರು ಗೇಟ್ ಬಳಿ ಸೋಮವಾರ ತಡರಾತ್ರಿ ಘಟನೆ ನಡೆದಿದೆ. ಶಿವಮೊಗ್ಗದ ಜೆಪಿ ನಗರದ ನಿವಾಸಿ ರಾಜುನಾಯ್ಕ(30) ಕೊಲೆಯಾದವನು. ವಿಕ್ರಮ್ ಕೊಲೆ ಆರೋಪಿ ಆಗಿದ್ದಾನೆ.

ಕಳೆದ ಎರಡ್ಮೂರು ದಿನದಿಂದ ರಾಜುನಾಯ್ಕ ಹಾಗೂ ವಿಕ್ರಮ್‌ ನಡುವೆ ಕಲಹ ಇತ್ತು. ನಿನ್ನೆ ಸೋಮವಾರ ರಾತ್ರಿ ಎಣ್ಣೆ ಕುಡಿಯೋಣ ಬಾ ಎಂದು ವಿಕ್ರಮ್‌ ರಾಜುನಾಯ್ಕ್‌ನನ್ನು ಕರೆದುಕೊಂಡು ಹೋಗಿದ್ದ. ಎಣ್ಣೆ ಕುಡಿಸುವ ನೆಪದಲ್ಲಿ ಸ್ಮಶಾನಕ್ಕೆ ಕರೆದುಕೊಂಡು ಹೋಗಿ ತಲೆ ಮೇಲೆ ಕಲ್ಲು ಎತ್ತಿ ಕೊಲೆ ಮಾಡಲಾಗಿದೆ.

ಸದ್ಯ ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version