Site icon Vistara News

ಉಡುಪಿಯಲ್ಲಿ ಸಾವರ್ಕರ್‌ಗೆ ಪುಷ್ಪಾರ್ಚನೆ ಮಾಡಿದ ಗಾಂಧೀಜಿ !: ಹಿಂದುಗಳಿಂದಲೇ ಬ್ಯಾನರ್‌ ತೆರವು

savarkar flex udupi 1

ಉಡುಪಿ: ರಾಜ್ಯದ ವಿವಿಧೆಡೆ ಸಾವರ್ಕರ್‌ ಫ್ಲೆಕ್ಸ್‌, ಟಿಪ್ಪು ಫ್ಲೆಕ್ಸ್‌ ವಿವಾದ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದರೆ ಉಡುಪಿಯಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರೇ ಸಾವರ್ಕರ್‌ ಫ್ಲೆಕ್ಸ್‌ ತೆರವು ಮಾಡಿದ್ದಾರೆ.

75ನೇ ಸ್ವಾತಂತ್ರ್ಯ ಸಂಭ್ರಮದ ನಿಮಿತ್ತ ಉಡುಪಿಯ ಬ್ರಹ್ಮಗಿರಿ ವೃತ್ತದಲ್ಲಿ ಬೃಹತ್‌ ಗಾತ್ರದ ಫ್ಲೆಕ್ಸ್‌ ಅಳವಡಿಸಲಾಗಿತ್ತು. ಸಾವರ್ಕರ್‌ ಜತೆಗೆ ಸುಭಾಷ್‌ಚಂದ್ರ ಬೋಸ್‌ ಭಾವಚಿತ್ರವಿದ್ದ ಫ್ಲೆಕ್ಸ್ ಅನ್ನು 15 ದಿನ ಅಳವಡಿಸಲು ಪೊಲೀಸರಿಂದ ಅನುಮತಿಯನ್ನೂ ಪಡೆಯಲಾಗಿತ್ತು.

ಆದರೆ ಉಡುಪಿಯಲ್ಲಿ ಅಷ್ಠಮಿ ಸಂಭ್ರಮ ನಡೆಯುತ್ತಿದೆ. ಈ ಸಮಯದಲ್ಲಿ ಪೊಲೀಸರಿಗೆ ಈ ಪೋಸ್ಟರ್‌ ಕಾಯುವ ಕಾರ್ಯವೂ ಹೊರೆಯಾಗುತ್ತದೆ. ಪೊಲೀಸರಿಗೆ ಸಹಕಾರ ನೀಡುವ ಉದ್ದೇಶದಿಂದ ಹಿಂದು ಮಹಾಸಭಾ, ಹಿಂದು ಜಾಗರಣ ವೇದಿಕೆ ಸೇರಿ ಅನೇಖ ಸಂಘಟನೆಗಳ ಮುಖಂಡರು ಆಗಮಿಸಿ ಫ್ಲೆಕ್ಸ್‌ ತೆರವುಗೊಳಿಸಿದ್ದಾರೆ.

ಫ್ಲೆಕ್ಸ್‌ ತೆರವುಗೊಳಿಸುವ ಮುನ್ನ ಪುಷ್ಪಾರ್ಚನೆ.

ಫ್ಲೆಕ್ಸ್‌ಗೆ ಪ್ರಾರಂಭದಲ್ಲಿ ಹೂಗಳಿಂದ ಅರ್ಚನೆ ಮಾಡಲಾಯಿತು. ಗಾಂಧೀಜಿ ವೇಷಧಾರಿಯೊಬ್ಬರೂ ಇದರಲ್ಲಿ ಭಾಗವಹಿಸಿ, ಸಾವರ್ಕರ್‌ ಭಾವಚಿತ್ರಕ್ಕೆ ಪುಷ್ಪಾರಚನೆ ಮಾಡಿದರು. ನಂತರ ಚಂಡೆ ಮೆರವಣಿಗೆಯಲ್ಲಿ ಬ್ರಹ್ಮಗಿರಿ ವೃತ್ತದಿಂದ ಹುತಾತ್ಮ ಸ್ಮಾರಕದವರೆಗೆ ಫ್ಲೆಕ್ಸ್‌ ಅನ್ನು ಕೊಂಡೊಯ್ದು ಸಮಾಪ್ತಿಗೊಳಿಸಲಾಯಿತು.

ಪೊಲೀಸರಿಗೆ ಸಹಕಾರ ನೀಡಲು ಈ ಕಾರ್ಯ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ವೃತ್ತದಲ್ಲಿ ಸಾವರ್ಕರ್‌ ಪ್ರತಿಮೆ ಸ್ಥಾಪನೆ ಮಾಡಲು ಜಿಲ್ಲಾಡಳಿತಕ್ಕೆ ಮನವಿ ಮಾಡಲಿದ್ದೇವೆ ಎಂದು ಸಂಘಟನೆಗಳ ಮುಖಂಡರು ತಿಳಿಸಿದರು.

ಇದನ್ನೂ ಓದಿ | Flex Controversy | ತುಮಕೂರಿನಲ್ಲಿ ಮತ್ತೆ ಸಾವರ್ಕರ್‌ ಚಿತ್ರವಿರುವ ಫ್ಲೆಕ್ಸ್‌ ಅಳವಡಿಸಿದ ಹಿಂದೂ ಕಾರ್ಯಕರ್ತರು

Exit mobile version