ಉಡುಪಿ: ಉಡುಪಿಯಲ್ಲೊಂದು (Udupi News) ಅಮಾನವೀಯ ಘಟನೆ ನಡೆದಿದೆ. ಅಸಾಮಿಯೊಬ್ಬ ಸತ್ತು ಹೋದ ನಾಯಿಯ ಕೊರಳಿಗೆ ಸರಪಳಿ ಬಿಗಿದು ದ್ವಿಚಕ್ರ ವಾಹನಕ್ಕೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದಿರುವ ಘಟನೆ ನಡೆದಿದೆ.
ಕಾಪುವಿನ ಕೊಂಬಗುಡ್ಡೆಯ ನಿವಾಸಿ ಖಾದರ್ ಎಂಬಾತ ಸತ್ತಿರುವ ನಾಯಿಯ ಕೊರಳಿಗೆ ಸರಪಳಿ ಬಿಗಿದ್ದಿದ್ದಾನೆ. ಬಳಿಕ ಕೊಂಬಗುಡ್ಡೆಯಿಂದ ಶಿರ್ವ ಪೇಟೆಯವರೆಗೆ ಸುಮಾರು 5 ಕಿ.ಮೀ ದೂರದವರೆಗೆ ಎಳೆದುಕೊಂಡು ಹೋಗಿದ್ದಾನೆ. ಆದರೆ ಯಾಕಾಗಿ ಹೀಗೆ ಮಾಡಿದ್ದು? ನಾಯಿ ಸತ್ತಿದ್ದು ಹೇಗೆ? ಅದು ತಾನೇ ಸಾಕಿದ ಶ್ವಾನವಾ ಅಥವಾ ಬೀದಿ ನಾಯಿನಾ ಎಂಬುದು ತಿಳಿದು ಬಂದಿಲ್ಲ.
ಸದ್ಯ ಸ್ಥಳೀಯರಿಂದ ಈ ವಿಡಿಯೊ ವೈರಲ್ ಆದ ಬೆನ್ನಲ್ಲೆ ಶಿರ್ವ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಕಾಲು ತೊಳೆಯಲು ಹೋಗಿ ನದಿಗೆ ಜಾರಿ ಬಿದ್ದ ವ್ಯಕ್ತಿ
ರಭಸವಾಗಿ ಹರಿಯುತ್ತಿದ್ದ ಕೃಷ್ಣ ನದಿ ದಡಕ್ಕೆ ಕಾಲು ತೊಳೆಯಲು ಹೋಗಿದ್ದ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿದ್ದ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಬಳಿ ಕೃಷ್ಣ ನದಿಯಲ್ಲಿ ಘಟನೆ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆ ಸದ್ಯ ವಿಡಿಯೊ ವೈರಲ್ ಆಗುತ್ತಿದೆ.
ತಿಂಥಣಿ ಗ್ರಾಮದ ಕಾಸಿಂಸಾಬ್ ಎಂಬಾತ ಕಾಲು ಜಾರಿ ನದಿಗೆ ಬಿದ್ದವನು. ನೀರಿನ ಸೆಳೆತಕ್ಕೆ ಸಿಲುಕಿ ಕೊಂಚಿಕೊಂಡು ಹೋಗುತ್ತಿದ್ದವನನ್ನು ಕೂಡಲೇ ಕೂಡ್ಲೆ ಗ್ರಾಮದ ಅಂಬಿಗರು ತೆಪ್ಪದ ಮೂಲಕ ತೆರಳಿ ಕಾಸಿಂಸಾಬ್‌ನನ್ನು ರಕ್ಷಣೆ ಮಾಡಿದ್ದಾರೆ. ಅಂಬಿಗರ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ