ಬೆಂಗಳೂರು: ತಮ್ಮನ್ನು ಅನದಾನಕ್ಕೆ ಒಳಪಡಿಸಬೇಕು ಎಂದು ಅನುದಾನರಹಿತ ಶಾಲಾ ಶಿಕ್ಷಕರು ( Un-Aided Teachers) ಸಿಎಂ ಬಸವರಾಜ ಬೊಮ್ಮಾಯಿ ಅವರೆದುರೇ ವಿಷ ಕುಡಿಯುವುದಾಗಿ ಬೆದರಿಕೆ ಹಾಕಿದರು ಹಾಗೂ ತಮ್ಮ ಅಳಲನ್ನು ತೋಡಿಕೊಂಡರು.
ವಿಧಾನಸೌಧಕ್ಕೆ ಸಿಎಂ ಆಗಮಿಸುವ ವೇಳೆಗೆ ನೆರೆದಿದ್ದ ಶಿಕ್ಷಕರು, ಖಾಯಂ ನೇಮಕಾತಿ ಮಾಡುವಂತೆ ಮನವಿ ಮಾಡಿದರು. ಕೆಲವು ಶಿಕ್ಷಕರನ್ನು ಭೇಟಿ ಮಾಡಲು ಪೊಲೀಸರು ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಕೆಲಕಾಲ ವಾಗ್ವಾದ ನಡೆಯಿತು.
ಸಿಎಂಗೆ ಮನವಿ ಸಲ್ಲಿಕೆ ನಂತರ ಮಾತನಾಡಿದ ಶಿಕ್ಷಕ ಪ್ರಭು, 1985 ರಿಂದ 95 ವರೆಗೆ ಸಾಲಿನಲ್ಲಿರುವವರಿಗೆ ಅನುದಾನ ಕೊಡಬೇಕಿತ್ತು. 2018 ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದಂತ ಸಂದರ್ಭದಲ್ಲಿ ಸರ್ಕಾರದ ಕಡಿತದಲ್ಲಿರುವ ಶಾಲೆಗಳನ್ನ ಮಾತ್ರ ಒಳಪಡಿಸಿದ್ರು. ನಮ್ಮ ಶಾಲೆಗಳು ಬಾಕಿ ಉಳಿದಿದ್ವು ಉಳಿದ 177 ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಿದ್ರು.
ಅನುದಾನಕ್ಕೆ ಒಳಪಡಿಸುವ ಸಂದರ್ಭದಲ್ಲಿ ಕೆಲವು ಸಂಸ್ಥೆಗಳನ್ನು ಅಂದರೆ ಕಮಿಷನರ್ ಆಪೀಸ್ ಬಿ ಇ ಓ ಆಪೀಸ್ ಈ ಹಂತದಲ್ಲಿರುವ ಕಡಿತಗಳನ್ನು ಬಿಟ್ರು. ನಂತರ ಸಿಎಂ ಬೊಮ್ಮಾಯಿ ಅವರು ಕುಮಾರಸ್ವಾಮಿ ಅವರ ಕಂಡಿಕೆಯನ್ನ ತರಿಸಿಕೊಂಡ್ರು. 1985-95 ವರೆಗಿನ ಕಡತಗಳನ್ನ ಪರಿಶೀಲನೆ ಮಾಡಿ ಕೊಡುತ್ತೇವೆ ಎಂದು 2022ರ ಮಾರ್ಚ 31 ರಂದು ಹೇಳಿದ್ರು.
ಕಳೆದ ಅಧಿವೇಶನದಲ್ಲಿಯೂ ಎಮ್ ಎಲ್ ಎ ಗಳು ಎಮ್ ಎಲ್ ಸಿ ಗಳನ್ನು ಬಿಸಿನಾಗೇಶ್ ಅವರ ಮೂಲಕ ಭೇಟಿ ಮಾಡಿದಿವು. ಆ ಸಂದರ್ಭದಲ್ಲಿ ನಮ್ಮ ಬೇಡಿಕೆ ಹೇಳಿದ್ದೆವು, ಶುಕ್ರವಾರ ನಿರ್ಣಯ ಹೇಳ್ತಿವಿ ಅಂದ್ರು ಹೇಳಲಿಲ್ಲ. ನಂತರ ನಮ್ಮ ಕಡತಗಳನ್ನ ಶಿಕ್ಷಣ ಇಲಾಖೆಗೆ ಮರಳಿ ಕಳಿಸಿದ್ದಾರೆ.
ಕಾರಣ ಏನು ಅಂದ್ರೆ ಕುಮಾರಸ್ವಾಮಿ ಅವರ ಕಂಡಿಕೆಯನ್ನ ಪರಿಗಣಿಸಿ ಇವುಗಳನ್ನು ವೇತನರಹಿತದಲ್ಲಿ ಒಳಪಡಿಸುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು. ಈ ಪೈಲ್ ಈಗ ಮುಖ್ಯಮಂತ್ರಿ ಅವರ ಬಳಿ ಬಂದಿದೆ. ಅದನ್ನ ಪರಿಶೀಲನೆ ಮಾಡಿ ವೇತನಕ್ಕೆ ಸೇರಿಸಬೇಕು.
576 ಶಿಕ್ಷಕರು ಭವಿಷ್ಯವಿದೆ, ಇದನ್ನ ಸರ್ಕಾರ ಮಾಡಿಕೊಡಬೇಕು. ಚುನಾವಣಾ ನೀತಿ ಜಾರಿ ಒಳಗಡೆನೆ ಇದನ್ನ ಮಾಡಿಕೊಡಬೇಕು. ಇಲ್ಲಾ ಅಂದ್ರೆ ನಾವು ನಮ್ಮ ಊರಿಗೆ ಹೋಗುವುದಿಲ್ಲ. ಸಿಎಂ ಮುಂದೆನೆ ವಿಷ ಕುಡಿಯುತ್ತೇವೆ ಎಂದು ಅಳಲು ತೋಡಿಕೊಂಡರು.