ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ (Unaccounted asset) ಆರೋಪದಡಿ ನಿವೃತ್ತ ನ್ಯಾಯಾಧೀಶ ಹಾಗೂ ಅವರ ಕುಟುಂಬದ ಮೂವರಿಗೆ ಸಿಬಿಐ ವಿಶೇಷ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ. ನವದೆಹಲಿಯ ಆದಾಯ ತೆರಿಗೆ ಮೇಲ್ಮನವಿ ನ್ಯಾಯ ಮಂಡಳಿಯ ನಿವೃತ್ತ ನ್ಯಾಯಾಧೀಶ ಜೆ.ಇ. ವೀರಭದ್ರಪ್ಪ ಅವರೇ ಶಿಕ್ಷೆಗೆ ಒಳಗಾದವರು.
ಆರೋಪಿ ವೀರಭದ್ರಪ್ಪ ಅವರ ವಿರುದ್ಧ 2013ರಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಬೆಂಗಳೂರಿನ ಸಿಬಿಐ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು 2014ರಲ್ಲಿ ಆರೋಪಿ ಮತ್ತು ಕುಟುಂಬ ಸದಸ್ಯರು ಅಕ್ರಮ ಆಸ್ತಿ ಗಳಿಕೆ ಬಗ್ಗೆ ಉಲ್ಲೇಖಿಸಿ ಆರೋಪಪಟ್ಟಿ ಸಲ್ಲಿಸಿದ್ದರು.
ವೀರಭದ್ರಪ್ಪ ಅವರು 2002ರಿಂದ 2013ರವರೆಗೆ ಬೆಂಗಳೂರು, ಮುಂಬಯಿ ಹಾಗೂ ನವ ದೆಹಲಿ ವಿಭಾಗದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಸದಸ್ಯರು ಹಾಗೂ ಉಪಾಧ್ಯಕ್ಷ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. ಆ ವೇಳೆ ಹಲವು ಕಡೆ ಕೃಷಿ ಭೂಮಿ, ನಿವೇಶನ, ಮನೆ ಹಾಗೂ ಇತರೆ ಸ್ಥಿರ ಹಾಗೂ ಚರ ಆಸ್ತಿ ಸಂಪಾದಿಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ 34ನೇ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಚ್.ಮೋಹನ್ ಅವರ ನ್ಯಾಯಪೀಠ ನಿವೃತ್ತ ನ್ಯಾಯಧೀಶ ಜೆ.ಇ. ವೀರಭದ್ರಪ್ಪ ಹಾಗೂ ಅವ್ರ ಕುಟುಂಬದ ಇಬ್ಬರು ಸದಸ್ಯರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ 1.5 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ಅಷ್ಟೇ ಅಲ್ಲದೇ ಆರೋಪಿಗಳ ೧.೨೫ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಿಬಿಐ ವಿಶೇಷ ನ್ಯಾಯಾಲಯದ ಆದೇಶಿದೆ.
ಈ ಪ್ರಕರಣದಲ್ಲಿ ಸಿಬಿಐ ಪರ ಹಿರಿಯ ಸರಕಾರಿ ಅಭಿಯೋಜಕರಾಗಿ ಶಿವಾನಂದ ಪೆರ್ಲ ವಾದ ಮಂಡಿಸಿದ್ದರು. ಮತ್ತೊಂದೆಡೆ ಜೈಲು ಶಿಕ್ಷೆ ಪ್ರಮಾಣ ಎರಡು ವರ್ಷ ವಿಧಿಸಿರುವ ಹಿನ್ನೆಲೆ ಶಿಕ್ಷೆಗೆ ಗುರಿಯಾಗಿರೋ ಆರೋಪಿಗಳು ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲವಕಾಶವಿದೆ.
ಇದನ್ನೂ ಓದಿ : High court : 20 ವರ್ಷದಿಂದ ಅಕ್ರಮವಾಗಿ ಭಾರತದಲ್ಲಿದ್ದ ಮಾತ್ರಕ್ಕೆ ಬಾಂಗ್ಲಾದೇಶದ ಪ್ರಜೆ ಭಾರತೀಯ ಆಗುವುದಿಲ್ಲ ಎಂದ ಕೋರ್ಟ್