Site icon Vistara News

Pralhad Joshi: ಸಿಎಂಗೆ ಸಲ್ಲಿಸಿದ ರೈತರ ಮನವಿ ಪತ್ರ ಕಸದ ಬುಟ್ಟಿಗೆ: ಪ್ರಲ್ಹಾದ್‌ ಜೋಶಿ ಟೀಕೆ

19744 Crore rupees Reserve for Green Hydrogen Mission says Minister Pralhad Joshi Information

ಹುಬ್ಬಳ್ಳಿ: ಸಿಎಂಗೆ ರೈತರು ಕೊಟ್ಟ ಮನವಿ ಪತ್ರಗಳು ಕಸದ ಬುಟ್ಟಿ ಸೇರುತ್ತಿವೆ ಎಂದರೆ ಅಪಾಯಕಾರಿ ಬೆಳವಣಿಗೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 10ರಂದು ಚಾಮರಾಜನಗರದಲ್ಲಿ ಅಭಿನಂದನಾ ಸಮಾರಂಭಕ್ಕೆ ತೆರಳಿದಾಗ ಅಲ್ಲಿನ ರೈತರು ಜ್ವಲಂತ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರೆ, ಅವೆಲ್ಲ ಕಸದ ಬುಟ್ಟಿ ಸೇರಿವೆ ಎಂಬ ಬಗ್ಗೆ ವರದಿಯಾಗಿದೆ. ನಿಜಕ್ಕೂ ಇದು ರೈತ ಸಮೂಹದ ಶೋಷಣೆ ಧೋರಣೆಯನ್ನು ತೋರುತ್ತದೆ ಎಂದು ಜೋಶಿ ಆರೋಪಿಸಿದ್ದಾರೆ.

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

ನಾಡಿನ ಸಮಸ್ತ ರೈತರ ಪರವಾಗಿ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗೆ ನೀಡಿದ್ದ ಮನವಿ ಪತ್ರ ಈಗ ಕಸದ ಬುಟ್ಟಿ ಸೇರಿರುವುದು ಸಿದ್ದರಾಮಯ್ಯನವರ ನಿರ್ಲಕ್ಷ್ಯದ ಪರಮಾವಧಿಯನ್ನು ಬಿಂಬಿಸುತ್ತದೆ ಎಂದು ಸಚಿವರು ದೂರಿದ್ದಾರೆ.

ಕಾಂಗ್ರೆಸ್‌ಗೆ ನಿಜವಾಗಿ ಯಾರ ಬಗ್ಗೆಯೂ ಕಾಳಜಿ ಇಲ್ಲ. ಹಾಗಾಗಿ ದೇಶಾದ್ಯಂತ ಕಾಂಗ್ರೆಸ್ ಬಲ ಕ್ಷೀಣಿಸಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಸಹ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಂದಿನ ಬೆಲೆ ಚೆಕ್‌ ಮಾಡಿ

ರೈತರೂ ಸೇರಿದಂತೆ ನಾಡಿನ ಜನರ ಬೇಕು ಬೇಡಗಳಿಗೆ ಸ್ಪಂದಿಸದೆ ಸಾಲು ಸಾಲು ಹಗರಣಗಳಲ್ಲಿ ತೊಡಗಿರುವ ಕಾಂಗ್ರೆಸ್ ಅಧಿಕಾರದಲ್ಲಿರುವುದು ನಾಡಿಗೆ ಅಪಾಯಕಾರಿ. ಮುಖ್ಯಮಂತ್ರಿ ಈಗಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಟ್ವೀಟ್ ಮಾಡಿದ್ದಾರೆ.

Exit mobile version