ಹುಬ್ಬಳ್ಳಿ: ಧಾರವಾಡ ಕೃಷಿ ವಿವಿ ಬಳಿ ಶನಿವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣವೇ ತಮ್ಮ ಬೆಂಗಾವಲು ವಾಹನ ಮತ್ತು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಮಾನವೀಯತೆ ಮೆರೆದಿದ್ದಾರೆ.
ಆಗಿದ್ದೇನು?
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶನಿವಾರ ಮಧ್ಯಾಹ್ನ ಬೆಳಗಾವಿಗೆ ಹೊರಟಿದ್ದು, ಇದೇ ವೇಳೆ ಮಾರ್ಗ ಮಧ್ಯೆ ಕಾರೊಂದರ ಅಪಘಾತ ಕಂಡಿದೆ. ತಕ್ಷಣ ಸಚಿವರು ತಮ್ಮ ವಾಹನ ನಿಲ್ಲಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಸ್ಪಂದಿಸಿದ್ದಾರೆ.
ಇದನ್ನೂ ಓದಿ: Karnataka Weather : ಭಾರಿ ಮಳೆಗೆ ಕೆರೆಯಂತಾದ ರಸ್ತೆಗಳು; ಮುಳುಗಡೆಯಾದ ವಾಹನಗಳು
ಧಾರವಾಡದ ಕೃಷಿ ವಿವಿ ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಹಣ್ಣಿನ ಅಂಗಡಿಗೆ ನುಗ್ಗಿದೆ. ಪರಿಣಾಮ ಗ್ರಾಹಕನೊಬ್ಬ ಮೃತಪಟ್ಟಿದ್ದು, ಮೂವರು ತೀವ್ರ ಗಾಯಗೊಂಡಿದ್ದರು.
ಅದೇ ಮಾರ್ಗದಲ್ಲಿ ಬೆಂಗಾವಲು ವಾಹನದೊಂದಿಗೆ ಸಂಚರಿಸುತ್ತಿದ್ದ ಸಚಿವ ಪ್ರಲ್ಹಾದ್ ಜೋಶಿ ಅವರು ಅಪಘಾತದ ದೃಶ್ಯ ಕಂಡು ವಾಹನ ನಿಲ್ಲಿಸಿ ನರಳುತ್ತಿದ್ದ ಗಾಯಾಳುಗಳನ್ನು ಉಪಚರಿಸಿದ್ದಲ್ಲದೇ, ತಮ್ಮ ಬೆಂಗಾವಲು ವಾಹನ ಹಾಗೂ 108 ಆಂಬ್ಯುಲೆನ್ಸ್ ತರಿಸಿ ತಕ್ಷಣ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ: World Milk Day: ಹಾಲಿಗೊಂದು ದಿನವೇ ಬೇಕೆಂದಿಲ್ಲ, ವರ್ಷವಿಡೀ ಆಚರಿಸಬಹುದು!
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸ್ವತಃ ಸಚಿವರೇ ಕೈಜೋಡಿಸಿ, ಗಾಯಾಳುಗಳಿಗೆ ಧೈರ್ಯ ತುಂಬಿದರು. ಸಚಿವರ ಸಮಯ ಪ್ರಜ್ಞೆಗೆ ಸ್ಥಳೀಯರಿಂದ ಮೆಚ್ಚುಗೆ ಸಹ ವ್ಯಕ್ತವಾಯಿತು.