ಲಂಡನ್: ಇಂಡಿಯಾ ಗ್ಲೋಬಲ್ ಫೋರಮ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಲಂಡನ್‌ಗೆ ತೆರಳಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ ನಿಯೋಗ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಶುಕ್ರವಾರ ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿತು.
ಭವಿಷ್ಯದಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನ ವಲಯದಲ್ಲಿ ಭಾರತದ ಮತ್ತು ಬ್ರಿಟನ್ ಸಹಯೋಗದ ಬಗ್ಗೆ ಬೋರಿಸ್ ಜಾನ್ಸನ್ ಅವರೊಂದಿಗೆ ಕೇಂದ್ರ ಸಚಿವರ ನಿಯೋಗ ಚರ್ಚೆ ನಡೆಸಿದೆ. ಈ ವೇಳೆ ಭಾರತ ಮತ್ತು ಬ್ರಿಟನ್ ಎರಡೂ ದೇಶಗಳು ನಾವೀನ್ಯತೆ ಆರ್ಥಿಕತೆಯನ್ನು ವಿಸ್ತರಿಸಲು ಬಯಸುತ್ತಿವೆ. ಡಿಜಿಟಲ್ ತಂತ್ರಜ್ಞಾನದ ಭವಿಷ್ಯವು ಭಾರತ ಮತ್ತು ಬ್ರಿಟನ್‌ನಂತಹ ಆರ್ಥಿಕತೆಯ ಯಶಸ್ಸಿನ ಮೇಲೆ ಅವಲಂಬಿತವಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಭಾರತದ ನಿಯೋಗದಲ್ಲಿ ಪ್ರಮುಖ ಯುನಿಕಾರ್ನ್ ಸ್ಟಾರ್ಟಪ್ ಕಂಪನಿಗಳಾದ ಪಾಲಿಗಾನ್ (Polygon), ಕೂ (Koo), ಬಿಲ್ಡರ್.ಎಐ (builder.ai), ನೈಕಾ (nyka), ಸೇಫೆಕ್ಸ್‌ಪೇ (safexpay) ಪ್ರತಿನಿಧಿಗಳು ಹಾಗೂ ಬಿಜೆಪಿ ಯುವ ನಾಯಕ ಮತ್ತು ಉದ್ಯಮಿ ಅನಿಲ್ ಶೆಟ್ಟಿ ಇದ್ದರು.
ಇದನ್ನೂ ಓದಿ | ಹೈದರಾಬಾದ್ ಬಳಿ 4,000 ಸ್ಟಾರ್ಟಪ್‌ಗಳಿಗೆ ಹೊಸ ಸೌಲಭ್ಯ ಕೇಂದ್ರ ಟಿ-ಹಬ್ 2.0 ಆರಂಭ