ಬಳ್ಳಾರಿ: ಅದಿರು ಪೂರೈಕೆಯಲ್ಲಿನ ವಂಚನೆ ಪ್ರಕರಣದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಶಾಸಕ ಬಿ.ನಾಗೇಂದ್ರ ಸೇರಿ ಮೂವರಿಗೆ ಬಳ್ಳಾರಿ ಹಿರಿಯ ಪ್ರಧಾನ ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯ ಬಂಧನದ ನೋಟಿಸ್ ಜಾರಿ ಮಾಡಿದೆ.
ಕಬ್ಬಿಣದ ಅದಿರು ಪೂರೈಸುವುದಕ್ಕೆ ಕಂಪನಿಯೊಂದರಿಂದ 1.96 ಕೋಟಿ ರೂ.ಗಳ ಹಣವನ್ನು ನಾಗೇಂದ್ರ ಅವರ ಮಾಲೀಕತ್ವದ ಕಂಪನಿಗೆ ನೀಡಲಾಗಿತ್ತು. ಆದರೆ ಸಕಾಲದಲ್ಲಿ ಅದಿರು ಪೂರೈಕೆ ಮಾಡಿಲ್ಲ. ಅದಿರು ಖರೀದಿಗೆ ಹಣ ನೀಡಿದ ಕಂಪನಿಯ ಬೇರೆಯವರಿಗೆ ಮಾರಾಟವಾಗಿದೆ. ಅದಿರಿಗೆ ಹಣ ನೀಡಿದ ವಿಚಾರದ ಪತ್ರವನ್ನು ಹಸ್ತಾಂತರ ಮಾಡಿದ್ದರು. ಆದರೆ ಅದಿರು ಪೂರೈಕೆ ಮಾಡದೆ, ಅದಿರಿಗೆ ನೀಡಿರುವ ಹಣವನ್ನು ವಾಪಸ್ ನೀಡದ ಹಿನ್ನೆಲೆಯಲ್ಲಿ ನಾಗೇಂದ್ರ ಅವರ ಮಾಲಿಕ್ವತದ ಕಂಪನಿಯ ವಿರುದ್ಧ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಶಾಸಕ ನಾಗೇಂದ್ರ ಅವರಿಗೆ ಸಮನ್ಸ್ ಜಾರಿ ಮಾಡಿದರೂ ನ್ಯಾಯಾಲಯದ ಮುಂದೆ ಹಾಜರಾಗದ ಕಾರಣ ನ್ಯಾಯಾಧೀಶರು, ಶಾಸಕ ನಾಗೇಂದ್ರ, ಕಂಪನಿಯ ಅಧಿಕಾರಿ ಸೇರಿ ಮೂವರಿಗೆ ಬಂಧನದ ನೋಟಿಸ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ | ತರಕಾರಿ ಕಣಜಕ್ಕೆ ಪ್ರವಾಹದ ಭೀತಿ: ಕೆಂಧೂಳಿನ ನೀರಿನಲ್ಲಿ ಮುಳುಗಿದ ತರಕಾರಿ ಬೆಳೆ