Site icon Vistara News

Karnataka Election Results: ಜಯದ ಹಿನ್ನೆಲೆ ಕಾಂಗ್ರೆಸ್‌ಗೆ ಮೋದಿ ಅಭಿನಂದನೆ; ಕರ್ನಾಟಕದ ಜನತೆಗೂ ಧನ್ಯವಾದ

Karnataka Election Results: PM Narendra Modi Congratulates Congress For Winning

Karnataka Election Results: PM Narendra Modi Congratulates Congress For Winning

ನವದೆಹಲಿ: ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಿ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್‌ ಮುಂದಾಗಿದೆ. ಕರ್ನಾಟಕದಲ್ಲಿ (Karnataka Election Results) ಕಳೆದ ಕೆಲವು ದಶಕಗಳಲ್ಲಿಯೇ ಕಂಡು ಕೇಳರಿಯದ ಯಶಸ್ಸನ್ನು ಕಾಂಗ್ರೆಸ್‌ ಪಡೆದಿದೆ. ಬಿಜೆಪಿ ಅಬ್ಬರದ ಪ್ರಚಾರ, ರಣತಂತ್ರ, ಕೇಂದ್ರ ನಾಯಕರ ರ‍್ಯಾಲಿ, ಸಮಾವೇಶ, ರೋಡ್‌ ಶೋ ಹೊರತಾಗಿಯೂ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆಯುತ್ತಿದೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆಯೇ, ಕನ್ನಡ ನಾಡಿನ ಜತೆಗೆ ಧನ್ಯವಾದ ತಿಳಿಸಿದ್ದಾರೆ.

ನರೇಂದ್ರ ಮೋದಿ ಟ್ವೀಟ್

“ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ಗೆ ಅಭಿನಂದನೆಗಳು. ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್‌ ಸಫಲವಾಗಲಿ ಎಂಬುದಾಗಿ ಆಶಿಸುತ್ತೇನೆ” ಎಂದು ಟ್ವೀಟ್‌ ಮಾಡಿದ್ದಾರೆ. ಹಾಗೆಯೇ, “ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಬಿಜೆಪಿ ಕಾರ್ಯಕರ್ತರ ಶ್ರಮವನ್ನೂ ನಾನು ಮೆಚ್ಚಲೇಬೇಕು. ಕರ್ನಾಟಕದ ಏಳಿಗೆಗೆ ನಾವು ಶ್ರಮಿಸುತ್ತಲೇ ಇರುತ್ತೇವೆ” ಎಂದಿದ್ದಾರೆ.

ಇದನ್ನೂ ಓದಿ: Karnataka Election Results: ಪ್ರಾಬಲ್ಯದ ವಿರುದ್ಧ ಜನಶಕ್ತಿ ಗೆದ್ದಿದೆ; ಫಲಿತಾಂಶದ ಬಳಿಕ ರಾಹುಲ್‌ ಗಾಂಧಿ ಹೇಳಿದ್ದಿಷ್ಟು

ಮೋದಿ ಭರ್ಜರಿ ರೋಡ್‌ ಶೋ ನಡೆಸಿದ್ದರು

ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಲು ಸಾಲು ಸಮಾವೇಶ, ರ‍್ಯಾಲಿ ಹಾಗೂ ರೋಡ್‌ ಶೋ ಕೈಗೊಂಡಿದ್ದರು. ರಾಜ್ಯದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರ ದಂಡೇ ಪ್ರಚಾರ ಕೈಗೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು 19 ಸಮಾವೇಶ, 6 ರೋಡ್‌ ಶೋ, ಅಮಿತ್‌ ಶಾ 16 ರ‍್ಯಾಲಿ, 15 ರೋಡ್‌ ಶೋ, ಯೋಗಿ ಆದಿತ್ಯನಾಥ್‌ 9 ಸಮಾವೇಶ, 3 ರೋಡ್‌ ನಡೆಸಿದ್ದರು. ಅಷ್ಟೇ ಅಲ್ಲ, ಜೆ.ಪಿ.ನಡ್ಡಾ, ರಾಜನಾಥ್‌ ಸಿಂಗ್‌ ಸೇರಿ ಹಲವು ನಾಯಕರು ಸಮಾವೇಶ, ರೋಡ್‌ ಶೋ ಕೈಗೊಂಡಿದ್ದರು.

Exit mobile version