ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ಮಾನೀರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಎರಡು ಟೆಂಪೋಗಳು(407) ಮುಖಾಮುಖಿ ಡಿಕ್ಕಿಯಾಗಿ(Accident) ಚಾಲಕ, ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ಬಳಿಕ ರಸ್ತೆ ಪಕ್ಕಕ್ಕೆ ಉರುಳಿದ ಟೆಂಪೋದಲ್ಲಿನ ಚಾಲಕ, ಕ್ಲೀನರ್ ಅನ್ನು ಸ್ಥಳೀಯರು ರಕ್ಷಣೆ ಮಾಡಿ, ಚಿಕೆತ್ಸೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆದ್ದಾರಿಯಲ್ಲಿ ಅಪಘಾತವಾಗಿದ್ದರಿಂದ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು. ಬಳಿಕ ಪೊಲೀಸರು ಕ್ರೇನ್ ಸಹಾಯದಿಂದ ವಾಹನಗಳ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇದನ್ನೂ ಓದಿ | Bike Accident | ಬೈಕ್-ಕಾರು ನಡುವೆ ಅಪಘಾತ; ಸಾಗರದ ಬ್ಯಾಕೋಡು ಬ್ಯಾಂಕ್ ಉದ್ಯೋಗಿ ಸಾವು