Site icon Vistara News

Crime | ಅಕ್ರಮವಾಗಿ ನಾಡಬಂದೂಕು ತಯಾರಿಸುತ್ತಿದ್ದ ಆರೋಪಿಯ ಬಂಧನ

Crime

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕು ಗೋಪಶಿಟ್ಟಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಾಡಬಂದೂಕು (Crime) ತಯಾರಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಮನೆಯೊಂದರ ಮೇಲೆ ದಾಳಿ ನಡೆಸಿದ್ದು, ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಬರ್ನವಾಡ ನಿವಾಸಿ ವಿನಾಯಕ ಆಚಾರಿ ಬಂಧಿತ.

ಬರ್ನವಾಡ ಗ್ರಾಮದ ಮನೆಯಲ್ಲಿ ಅಕ್ರಮವಾಗಿ ನಾಡಬಂದೂಕು ತಯಾರಿಸಿ ಮಾರಾಟ ಮಾಡುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಇದನ್ನಾಧರಿಸಿ ಜಿಲ್ಲಾ ವಿಶೇಷ ವಿಭಾಗದ ಪಿಎಸ್‌ಐ ಪ್ರೇಮನಗೌಡ ಪಾಟೀಲ್, ಚಿತ್ತಾಕುಲ ಠಾಣೆಯ ಪಿಎಸ್‌ಐ ವಿಶ್ವನಾಥ ಗಂಗೊಳ್ಳಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

ಈ ವೇಳೆ ಅಕ್ರಮವಾಗಿ ನಾಡಬಂದೂಕು ತಯಾರಿಸುತ್ತಿದ್ದುದು ಪತ್ತೆಯಾಗಿದೆ. ಆರೋಪಿಯಿಂದ ಒಂಟಿ ನಳಿಕೆಯ ಒಂದು ನಾಡಬಂದೂಕು, ತಯಾರಿಸಲು ಬಳಕೆ ಮಾಡಿದ ಕಟಿಂಗ್ ಮಷಿನ್ ಸೇರಿ ಹಲವು ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Hubballi News | ಪ್ರೀತಿ ನಾಟಕವಾಡಿ ಅಪ್ರಾಪ್ತೆಯ ಅತ್ಯಾಚಾರ: ಆರೋಪಿ ಬಂಧನ

Exit mobile version