Site icon Vistara News

Assault Case: ಯುವತಿಯ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ!

young womans lover was stabbed in the neck by an ex lover

ಕಾರವಾರ: ತಾನು ಪ್ರೀತಿಸುತ್ತಿದ್ದ ಯುವತಿ ತನ್ನ ಪ್ರೀತಿ ನಿರಾಕರಿಸಿ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿರುವುದಕ್ಕೆ ಕೋಪಗೊಂಡ ಮಾಜಿ ಪ್ರಿಯಕರ ಹಾಲಿ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದು ಹಲ್ಲೆ (Assault Case) ಮಾಡಿರುವ ಘಟನೆ ಕುಮಟಾ ಪಟ್ಟಣ ಮಣಕಿ ಮೈದಾನದಲ್ಲಿ ನಡೆದಿದೆ.

ಆರೋಪಿ ರಾಜೇಶ ಅಂಬಿಗ.

ಸಂತೋಷ ಅಂಬಿಗ ಎಂಬಾತನೆ ಚಾಕು ಇರಿತಕ್ಕೆ ಒಳಗಾದ ಯುವಕನಾಗಿದ್ದು, ರಾಜೇಶ ಅಂಬಿಗ ಎಂಬಾತ ಹಲ್ಲೆ ಮಾಡಿದ ಆರೋಪಿಯಾಗಿದ್ದಾನೆ. ರಾಜೇಶ ಅಂಬಿಗ ಯುವತಿಯೋರ್ವಳನ್ನು ಪ್ರೀತಿ ಮಾಡುತ್ತಿದ್ದು, ಇಬ್ಬರೂ ಚೆನ್ನಾಗಿಯೇ ಇದ್ದರು ಎನ್ನಲಾಗಿದೆ. ಕಳೆದ ‌ಒಂದು ವರ್ಷದಿಂದ ರಾಜೇಶನ ನಡವಳಿಕೆ ಸರಿಯಿಲ್ಲದ ಕಾರಣ ಆಕೆ ರಾಜೇಶ ಪ್ರೀತಿಯನ್ನು ನಿರಾಕರಣೆ ಮಾಡಿದ್ದಳು ಎನ್ನಲಾಗಿದೆ. ನಂತರದಲ್ಲಿ ಇದೀಗ ಹಲ್ಲೆಗೆ ಒಳಗಾದ ಸಂತೋಷ ಅಂಬಿಗ ಈ ಹಿಂದೆ ರಾಜೇಶ ಪ್ರೀತಿ ಮಾಡುತ್ತಿದ್ದ ಯುವತಿಯನ್ನ ಪ್ರೀತಿ ಮಾಡಲು ಆರಂಭಿಸಿ ವಿವಾಹ ಕೂಡ ನಿಶ್ಚಯವಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: Murder Case: ನಟಿ, ಕಾಂಗ್ರೆಸ್ ನಾಯಕಿ ವಿದ್ಯಾ ಹತ್ಯೆ ಆರೋಪಿ ಪತಿಯ ಬಂಧನ

ಇದೇ ವಿಚಾರಕ್ಕೆ ಸಿಟ್ಟಾದ ರಾಜೇಶ ಅಂಬಿಗ ಬುಧವಾರ ಸಂತೋಷ ಅಂಬಿಗನಿಗೆ ಪೋನ್ ಮಾಡಿ ಮಾತನಾಡಬೇಕೆಂದು ಒಬ್ಬನನ್ನೇ ಮಣಕಿ ಮೈದಾನಕ್ಕೆ ಕರೆಸಿಕೊಂಡಿದ್ದಾನೆ. ಆದರೆ ಸಂತೋಷ ಬರುವಾಗ ತನ್ನ ಜತೆ ಒಂದಿಬ್ಬರು ಸ್ನೇಹಿತರನ್ನ ಕರೆದುಕೊಂಡು ಬಂದಿದ್ದು, ಈ ವೇಳೆ ರಾಜೇಶ, ಸಂತೋಷನ ಕಣ್ಣಿಗೆ ಖಾರದ ಪುಡಿ ಎರಚಿ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ‌ ಎಂದು ತಿಳಿದುಬಂದಿದೆ‌. ಘಟನೆಯಿಂದ ಸಂತೋಷ ಅಂಬಿಗ ಗಂಭೀರವಾಗಿ ಗಾಯಗೊಂಡಿದ್ದು, ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version