ಬನವಾಸಿ: ಶಾಲಾ ಕೊಠಡಿಗಳ ಬೀಗ ಒಡೆದು ಪೀಠೋಪಕರಣ ಹಾಗೂ ಇತರೆ ಕಲಿಕಾ ಸಾಮಾಗ್ರಿಗಳನ್ನು ಯಾರೋ ಕಿಡಿಗೇಡಿಗಳು ಹಾನಿಯುಂಟು ಮಾಡಿರುವ ಘಟನೆ ಬನವಾಸಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ (Banavasi News) ಜರುಗಿದೆ.
ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಡಿಗೇಡಿಗಳು ಬೀಗ ಹೊಡೆದು ಶಾಲಾ ಪೀಠೋಪಕರಣ ಹಾಗೂ ಇನ್ನಿತರ ವಸ್ತುಗಳನ್ನು ಧ್ವಂಸ ಮಾಡಿ ಶಾಲಾ ಅಭಿವೃದ್ಧಿಗಾಗಿ ಸಂಗ್ರಹಿಸಿದ್ದ ಅಲ್ಪ ಮೊತ್ತವನ್ನು ಕಳವು ಮಾಡಿದ್ದಾರೆ ಎಂದು ಪ್ರಭಾರಿ ಮುಖ್ಯೋಪಾಧ್ಯಾಯ ನರಸಿಂಹ ಹರಿಕಾಂತ್ರ, ಬನವಾಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: Uttara Kannada News: ನಮ್ಮಲ್ಲಿರುವ ಕೌಶಲ್ಯಗಳನ್ನು ಅರಿತುಕೊಳ್ಳಬೇಕು; ಡಾ. ಆರ್.ಡಿ. ಜನಾರ್ಧನ
ಜಿಲ್ಲೆಯಾದ್ಯಾಂತ ನಿರಂತರ ಮಳೆಯಾಗುತ್ತಿರುವ ಕಾರಣ ಶಾಲಾ ಕಾಲೇಜುಗಳಿಗೆ ಕಳೆದ ಐದು ದಿನಗಳಿಂದ ರಜೆ ನೀಡಲಾಗಿತ್ತು. ಈ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಶಾಲಾ ಕೊಠಡಿ ಹಾಗೂ ಮುಖ್ಯೋಪಾಧ್ಯಾಯರ ಕೊಠಡಿಯ ಕೀಲಿ ಹೊಡೆದು ಅಲ್ಲಿನ ಪೀಠೋಪಕರಣ ಹಾಗೂ ಶಾಲಾ ಕಲಿಕಾ ಸಾಮಾಗ್ರಿಗಳನ್ನು ಹಾನಿಮಾಡಿದ್ದಾರೆ. ಅಲ್ಲದೇ ಶಾಲೆಯ ಕಪ್ಪು ಹಲಗೆಯ ಮೇಲೆ ಅಶ್ಲೀಲ ಚಿತ್ರಗಳನ್ನು ಬಿಡಿಸಿ, ಶಾಲಾ ಆವರಣದಲ್ಲಿ ಮಲಮೂತ್ರ ಮಾಡಿ ವಿಕೃತಿ ತೋರಿದ್ದಾರೆ. ಸೋಮವಾರ ಎಂದಿನಂತೆ ಶಾಲೆಗೆ ಆಗಮಿಸಿದ ಶಿಕ್ಷಕರು ಈ ಎಲ್ಲ ಕೃತ್ಯಗಳನ್ನು ಕಂಡು ಬೆಚ್ಚಿ ಬಿದ್ದು, ಬನವಾಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: Karnataka Rain : ನಿರಂತರ ಮಳೆಗೆ ಮೈಸೂರಿನ ಒಲಂಪಿಯಾ ಚಿತ್ರಮಂದಿರದ ಗೋಡೆ ಕುಸಿತ; ನಾಲ್ವರು ಗಂಭೀರ
ಬನವಾಸಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.