Site icon Vistara News

Blackmail | ಹೊನ್ನಾವರದ ಉದ್ಯಮಿಗೆ ಬ್ಲ್ಯಾಕ್‌ಮೇಲ್‌: ಮಾನ ತೆಗೀತೇವೆ ಎಂದವರಿಗೆ ಈಗ ಪೊಲೀಸ್‌ ಸಮ್ಮಾನ!

Blackmail

ಕಾರವಾರ: ಹಣಕ್ಕಾಗಿ ಪೀಡಿಸಿ ಬ್ಲ್ಯಾಕ್‌ಮೇಲ್‌ (Blackmail) ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಕೋಡಿ ಗ್ರಾಮದ ಪರಮೇಶ್ವರ ಉಪ್ಪಾರ, ಉದ್ಯಮ ನಗರದ ಸುನೀಲ್ ಮೇಸ್ತಾ ಎಂಬುವರೀಗ ಜೈಲು ಪಾಲಾಗಿದ್ದಾರೆ.

ಪಟ್ಟಣದ ಉದ್ಯಮಿ ಪುರುಷೋತ್ತಮ ಪ್ರಭು ಎಂಬುವರ ಮಾನ ಹರಾಜು ಹಾಕುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಗಳು, 50 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪ್ರಭು ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ | Viral video: ಟೋಲ್ ಗೇಟ್‌ನಲ್ಲಿ ಗ್ರೇಟ್‌ ಖಲಿ ದಾಂಧಲೆ, ಐಡಿ ಕೇಳಿದ ಸಿಬ್ಬಂದಿಯ ಕೆನ್ನೆಗೆ ಹೊಡೆದ ದೈತ್ಯ

ಆರೋಪಿತರಿಂದ ಟಾಟಾ ಕಂಪನಿಯ ಹೊಸ ಪಂಚ್ ಕಾರು, ಹೋಂಡಾ ಕಂಪನಿಯ ಸ್ಕೂಟಿ ಮತ್ತು 3 ಮೊಬೈಲ್ ಫೋನ್ ಸೇರಿದಂತೆ ಹಲವು ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೊನ್ನಾವರ ಪೊಲೀಸರು ತಿಳಿಸಿದ್ದಾರೆ.

Exit mobile version