Site icon Vistara News

ಆಸ್ತಿ ವಿಚಾರಕ್ಕೆ ಜಗಳ; ರಾಡ್‌ನಿಂದ ತಲೆಗೆ ಹೊಡೆದು ಅಣ್ಣನನ್ನೇ ಕೊಲೆಗೈದ ಸಹೋದರರು

Accident

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅರೆಯಂಗಡಿಯ ತೊಟ್ಟಿಲಗುಂಡಿಯಲ್ಲಿ ಆಸ್ತಿ ವಿಚಾರಕ್ಕೆ ತಮ್ಮಂದಿರೇ ಅಣ್ಣನ ತಲೆಗೆ ರಾಡ್‌ನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾರೆ.

ಹನುಮಂತ ಹೊನ್ನಪ್ಪ ನಾಯ್ಕ್ (54) ಮೃತ ವ್ಯಕ್ತಿ. ಘಟನೆಯಲ್ಲಿ ಮೃತನ ಸೋದರ ಮಾವ ಮಾರುತಿ ನಾಯ್ಕ(70)ಗೆ ಗಂಭೀರ ಗಾಯಗಳಾಗಿವೆ. ತಮ್ಮಂದಿರಾದ ವಿನಾಯಕ ನಾಯ್ಕ, ಚಿದಾನಂದ ನಾಯ್ಕ ಕೊಲೆ‌ ಆರೋಪಿಗಳು. ಈ ಹಿಂದೆಯೂ ಸಹೋದರರ ನಡುವೆ ಅಡಕೆ, ಆಸ್ತಿ ವಿಚಾರದಲ್ಲಿ ಅಣ್ಣ ತಮ್ಮಂದಿರಿಗೆ ಗಲಾಟೆಗಳು ನಡೆದಿದ್ದವು. ಶುಕ್ರವಾರ ಮತ್ತೊಮ್ಮೆ ಜಗಳವಾದಾಗ ಸಹೋದರರು ಹಲ್ಲೆ ಮಾಡಿದ್ದರಿಂದ ಕಾರಣ ಹನುಮಂತ ಹೊನ್ನಪ್ಪ ನಾಯ್ಕ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ | Drowned | ಶಿರಸಿಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

Exit mobile version