Site icon Vistara News

Ganja seized | ಗಾಂಜಾ ಮಾರಾಟಕ್ಕೆ ಯತ್ನ: 1.25 ಲಕ್ಷ ಮೌಲ್ಯದ ಗಾಂಜಾ ವಶ, ಮೂವರ ಸೆರೆ

Ganja seized

ಕುಮಟಾ : ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಮಾಲು (Ganja seized) ಸಹಿತ ಮೂವರನ್ನು ವಶಕ್ಕೆ ಪಡೆದ ಘಟನೆ ಕುಮಟಾದಲ್ಲಿ ನಡೆದಿದೆ.

ಶಿರಸಿಯ ಶಾಂತಿನಗರ ನಿವಾಸಿ ವಿನಾಯಕ ಕರ್ನಿಂಗ್ (39), ಗಣೇಶನಗರ ನಿವಾಸಿ ನಿಖಿಲ್ ಅಂಬಿಗ (26) ಹಾಗೂ ಭಟ್ಕಳದ ಮದೀನಾ ಕಾಲೋನಿ ನಿವಾಸಿ ಸಮಿ ಅಬ್ಬಾಸ್ ಮಲ್ಪಾ (40) ಬಂಧಿತ ಆರೋಪಿಗಳು.

ಪೊಲೀಸರು ಬಂಧಿತರಿಂದ ಸುಮಾರು 1 ಲಕ್ಷ 25 ಸಾವಿರ ರೂಪಾಯಿ ಮೌಲ್ಯದ 4 ಕೆಜಿ 76 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪಟ್ಟಣದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಸ್ಕೂಟಿಯ ಮೇಲೆ ಕುಳಿತು ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಕುಮಟಾ ತಹಸೀಲ್ದಾರ್ ವಿವೇಕ ಶೇಣ್ವಿ ಸಮ್ಮುಖದಲ್ಲಿ ಪೊಲೀಸರು ದಾಳಿ ನಡೆಸಿದ್ದು ಈ ವೇಳೆ ಗಾಂಜಾ ಸಹಿತ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳಲ್ಲಿ ಶಿರಸಿಯ ವಿನಾಯಕ ಹಾಗೂ ನಿಖಿಲ್ ಈ ಹಿಂದೆ ಕೊಲೆ, ದರೋಡೆ, ಕಳ್ಳತನ, ಮಾದಕವಸ್ತು ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ಬಂಧಿತರಾಗಿದ್ದವರು. ಕುಮಟಾ ಸಿಪಿಐ ತಿಮ್ಮಪ್ಪ ನಾಯ್ಕ ನೇತೃತ್ವದಲ್ಲಿ ಪಿಎಸ್‌ಐ ರವಿ ಗುಡ್ಡಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅಕ್ರಮ ಗಾಂಜಾ ಸಾಗಾಟದಾರರನ್ನು ಸೆರೆಹಿಡಿದಿದ್ದು, ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ದಕ್ಷಿಣ ಭಾರತದ ಕಬ್ಬು ಬೆಳೆಗಾರರಿಗೆ ಸಹಾಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ

Exit mobile version