Site icon Vistara News

National Flag: ತ್ರಿವರ್ಣ ಧ್ವಜದ ಅಶೋಕ ಚಕ್ರ ಜಾಗದಲ್ಲಿ ಮದೀನಾ ಗುಂಬಜ್‌ ಚಿತ್ರ ಹಾಕಿದವ ಅರೆಸ್ಟ್

National flag india

ಶಿರಸಿ: ದೇಶದ ಸಾರ್ವಭೌಮತೆ ಮತ್ತು ಅಸ್ಮಿತೆಯ ಸಂಕೇತವಾದ ರಾಷ್ಟ್ರಧ್ವಜವನ್ನು (National flag) ಅಪಮಾನಿಸಿದ ಘಟನೆಯೊಂದು (Insulting National flag) ಶಿರಸಿಯಲ್ಲಿ ನಡೆದಿದ್ದು ಈ ಸಂಬಂಧ ಉಮರ್‌ ಫಾರೂಖ್‌ ಎಂಬಾತನನ್ನು ಬಂಧಿಸಲಾಗಿದೆ (one person arrested in Sirsi).

ಈದ್‌ ಮಿಲಾದ್‌ ಹಬ್ಬದ (Eid milad festival) ಸಂದರ್ಭದಲ್ಲಿ ಮನೆ ಮೇಲೆ ಕಟ್ಟಿದ ರಾಷ್ಟ್ರಧ್ವಜವನ್ನು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶಿರಸಿಯ ರಾಮನ ಬೈಲ್ ನ ಉಮರ್ ಫಾರೂಖ್ (38) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಸ್ಲಿಮರ ಪವಿತ್ರ ಮತ್ತು ಸಂಭ್ರಮದ ಹಬ್ಬವಾಗಿರುವ ಈದ್‌ ಮಿಲಾದ್‌ ವೇಳೆ ಈತ ತನ್ನ ಮನೆಯ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿ ದೇಶಾಭಿಮಾನವನ್ನೇನೋ ಮೆರೆದಿದ್ದಾರೆ. ಆದರೆ, ಅದನ್ನು ವಿರೂಪಗೊಳಿಸಿ ಸಿಕ್ಕಿಬಿದ್ದಿದ್ದಾನೆ.

ತನ್ನ ಮನೆ ಮೇಲೆ ಹಾರಿಸಿ ತ್ರಿವರ್ಣ ದ್ವಜದಲ್ಲಿ ಅಶೋಕ ಚಕ್ರ ಇರುವ ಜಾಗದಲ್ಲಿ ಮದೀನಾ ಗುಂಬಜ್ ಚಿತ್ರ ಹಾಕಿದ್ದು ಬೀಟ್‌ನಲ್ಲಿದ್ದ ಪೊಲೀಸರ ಕಣ್ಣಿಗೆ ಬಿದ್ದಿತ್ತು. ಅವರು ಅದನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ರಾಷ್ಟ್ರದ್ವಜ ಅಪಮಾನ ತಡೆಗಟ್ಟುವ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಶಿರಸಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕ ಯತ್ನಾಳ್ ಬ್ಯಾನರ್ ಹರಿದ ಪ್ರಕರಣ: ಮೂವರ ಸೆರೆ

ವಿಜಯಪುರದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಭಾವಚಿತ್ರವಿದ್ದ ಬ್ಯಾನರ್‌ನ್ನು ಹರಿದು ಅಶಾಂತಿಗೆ ಕಾರಣರಾದ ಮೂವರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿಗಳೇ ಆದ ಯಾಸೀನ್, ಮಹಮ್ಮದ್, ಸೋಯಲ್ ಬಂಧಿತ ಆರೋಪಿಗಳು.

ಈದ್ ಮಿಲಾದ್ ದಿನ ನಗರದ ಶಿವಾಜಿ ವೃತ್ತದಲ್ಲಿ ಈ ಘಟನೆ ನಡೆದಿತ್ತು. 30 ಅಡಿ ಎತ್ತರದ ಶಾಸಕ ಬಸನಗೌಡ ಯತ್ನಾಳ್ ಕಟೌಟ್‌ನ್ನು ಕಿಡಿಗೇಡಿಗಳು ಹರಿದು ಹಾಕಿದ್ದರು. ಅವರು ಕಟೌಟ್‌ ಹರಿಯುವ ದೃಶ್ಯಗಳ ವಿಡಿಯೋ ವೈರಲ್ ಆಗಿತ್ತು.

ಈ ಬಗ್ಗೆ ಶಾಸಕರ ಬೆಂಬಲಿಗ ರಾಘವ ಅಣ್ಣಿಗೇರಿ ಅವರು ಗಾಂಧಿಚೌಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ವಿಡಿಯೊ ಆಧರಿಸಿ ಮೂವರನ್ನು ವಿಚಾರಣೆ ನಡೆಸಿ ಬಂಧಿಸಿದ್ದಾರೆ.

Exit mobile version