ಕಾರವಾರ: ಯುವತಿಯರ ಫೋಟೋಗಳನ್ನು ನಗ್ನವಾಗಿ ಎಡಿಟ್ (physical Abuse) ಮಾಡಿ, ಅತ್ಯಾಚಾರವೆಸಗುತ್ತಿದ್ದ ಕಾಮುಕರ ಗ್ಯಾಂಗ್‌ನ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗೆ ಸಹಕರಿಸುತ್ತಿದ್ದ ತಾಯಿ ಪರಾರಿ ಆಗಿದ್ದಾಳೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅರ್ಜುನ್ ಅಲಿಯಾಸ್ ಅರುಣ ಗೌಡ ಮಳಲಿ ಹಾಗೂ ಈತನ ಸಂಬಂಧಿ ಬಾಲಚಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ದುಷ್ಟರ ಗ್ಯಾಂಗ್ ಯುವತಿಯರನ್ನು ಕಂಡರೆ ಸಾಕು ತಮ್ಮ ಮಾತಿನ ಮೋಡಿಯಿಂದಲೇ ಅವರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದರು. ಮೋಹಕ್ಕೆ ಸಿಲುಕಿದ ಯುವತಿಯರ ಜತೆಗೆ ಪ್ರೀತಿಯ ನಾಟಕವಾಡುತ್ತಿದ್ದರು. ಬಳಿಕ ಪ್ರೀತಿಯ ನೆಪದಲ್ಲಿ ಫೋಟೋ ತೆಗೆಸಿಕೊಂಡು ಅವುಗಳನ್ನು ಅಶ್ಲೀಲವಾಗಿ ಎಡಿಟ್ ಮಾಡುತ್ತಿದ್ದರು. ಅಶ್ಲೀಲ ಫೋಟೋಗಳನ್ನು ತೋರಿಸಿ ಬೆದರಿಸಿ ಯುವತಿಯರನ್ನು ಅತ್ಯಾಚಾರವೆಸಗುತ್ತಿದ್ದರು.
ಅರ್ಜುನ್ ವಿರುದ್ಧ ಶಿರಸಿ, ಬನವಾಸಿ, ಕುಂದಾಪುರ ಸೇರಿ ವಿವಿಧೆಡೆ ಯುವತಿಯರಿಗೆ ಬ್ಲ್ಯಾಕ್‌ಮೇಲ್ ಹಾಗೂ ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಆರೋಪಿ ಅರ್ಜುನ್‌ನನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಕಲ್ಲು, ಹೆಂಚು ತೂರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈತನಿಗೆ ಸಾಥ್ ನೀಡುತ್ತಿದ್ದ ಬಾಲಚಂದ್ರ ಬಂಧನದ ಭೀತಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೂವರು ಪೊಲೀಸರ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಆರೋಪಿ ಅರ್ಜುನ್ ವಿರುದ್ಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗನ ಕೃತ್ಯಕ್ಕೆ ತಾಯಿಯೇ ಸಾಥ್!
ಅತ್ಯಾಚಾರಿ ಆರೋಪಿ ಅರ್ಜುನ್‌ನಿಗೆ ತಾಯಿಯೇ ಸಾಥ್ ನೀಡುತ್ತಿದ್ದಳು ಎಂದು ಬಹಿರಂಗವಾಗಿದೆ. ಪೊಲೀಸರು ಬಂಧಿಸಲು ಬಂದಾಗ ಘಟನಾ ಸ್ಥಳದಿಂದ ಪರಾರಿ ಆಗಿದ್ದಾಳೆ ಎನ್ನಲಾಗಿದೆ. ಇನ್ನೂ ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಕರಾವಳಿ ಮೂಲದ ಸುಂದರ ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಯುವತಿಯರ ಜತೆಗೆ ಚಾಟಿಂಗ್ ಮಾಡುತ್ತಾ ಪಟಾಯಿಸುತ್ತಿದ್ದ.
ಈತನೊಂದಿಗೆ ಚಾಟಿಂಗ್ ಸಿಲುಕಿದರೆ ಮುಗಿದೆ ಹೋಯಿತು. ಆತ್ಮೀಯತೆಯನ್ನು ಬೆಳೆಸಿಕೊಂಡು ಪ್ರೀತಿಯ ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ನಂತರ ಹೊರಗೆ ಸುತ್ತಾಡಲು ಕರೆದುಕೊಂಡು ಹೋಗಿ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ. ಮಾತ್ರವಲ್ಲ ಆತನೊಂದಿಗೆ ಇದ್ದಾಗಲೇ ಖಾಸಗಿ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ. ಇದಾದ ಕೆಲ ದಿನಗಳೇ ತನ್ನ ನಿಜವಾದ ಮುಖವನ್ನು ತೋರಿಸುತ್ತಿದ್ದ.
ಈತನನ್ನು ನಂಬಿದ ಯುವತಿಯರಿಗೆ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೆದರಿಸುತ್ತಿದ್ದ. ಬೆದರಿಸಿ ಪದೆ ಪದೇ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದ. ಹೀಗೆ ಅರ್ಜುನ್‌ಗೌಡನ ಕಾಮಚೇಷ್ಟೆಗೆ ಸಂಬಂಧಿಕ ಬಾಲಚಂದ್ರಗೌಡ ಎಂಬಾತನು ಸಾಥ್ ನೀಡುತ್ತಿದ್ದ. ಕೆಲವರಿಂದ ಹಣ ವಸೂಲಿ ಮಾಡುತ್ತಿದ್ದ ಕಾರಣಕ್ಕೆ ತಾಯಿ ನಾಗವೇಣಿ ಲಕ್ಷ್ಮಣಗೌಡ ಕೂಡ ಸಾಥ್ ನೀಡುತ್ತಿದ್ದಳು..
ಕರಾವಳಿಯಲ್ಲಿ ಇಂತಹ ಪ್ರಕರಣಗಳು ದಾಖಲಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಬಂಧಿಸಲು ಹೋದಾಗ ತಪ್ಪಿಸಿಕೊಳ್ಳಲು ಹಲ್ಲೆ ಮಾಡಿದ್ದಾರೆ. ಆರೋಪಿ ಅರ್ಜುನ್‌ನನ್ನು ಬಂಧಿಸಿದರೆ, ಇತ್ತ ತಪ್ಪಿಸಿಕೊಂಡು ಓಡಿ ಹೋದ ಬಾಲಚಂದ್ರ ಇಲಿ ಪಾಷಾಣ ಸೇವಿಸಿ, ಆಸ್ಪತ್ರೆಗೆ ದಾಖಲಾಗಿದ್ದಾನೆ. ಇತ್ತ ಮಗನ ಆಟಕ್ಕೆ ಸಹಾಯ ಮಾಡಿದ್ದ ತಾಯಿ ನಾಗವೇಣಿ ಪರಾರಿ ಆಗಿದ್ದಾಳೆ. ಈ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ