Site icon Vistara News

Road Accident: ರಸ್ತೆ ವಿಭಜಕಕ್ಕೆ ಬೈಕ್‌ ಡಿಕ್ಕಿ, ಕರಾಟೆ ಪಟು ಸಾವು; ಡೆಂಗ್ಯೂ ಜ್ವರಕ್ಕೆ ಯುವಕ ಬಲಿ

mysore accident death

ಮೈಸೂರು: ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ (Road Accident) ಕರಾಟೆ ಪಟುವೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರು (mysore news) ಸಮೀಪ ನಡೆದಿದೆ.

ಕಿರಣ್ ರಾಜ್ (22) ಮೃತ ದುರ್ದೈವಿ. ನಂಜನಗೂಡು ತಾಲೂಕಿನ ನೇರಳೆ ಗ್ರಾಮದ ನಿವಾಸಿಯಾದ ಇವರು ಸ್ನೇಹಿತನಿಗೆ ಬೈಕ್ ನೀಡಲು ಮೈಸೂರಿಗೆ ಹೊರಟಿದ್ದರು. ಮೈಸೂರು ಸಮೀಪದ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ. ರಸ್ತೆ ವಿಭಜಕಕ್ಕೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಎಗರಿ ರಸ್ತೆಗೆ ಬಿದ್ದಿರುವ ಕಿರಣ್‌ ರಾಜ್‌, ತೀವ್ರ ಗಾಯಗಳೊಂದಿಗೆ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೆಂಗ್ಯೂ ಜ್ವರಕ್ಕೆ ಯುವಕ ಬಲಿ

ಕಾರವಾರ: ಡೆಂಗ್ಯೂ ಜ್ವರಕ್ಕೆ (Dengue fever) ಉತ್ತರಕನ್ನಡ ಜಿಲ್ಲೆಯಲ್ಲಿ (Uttara Kannada news) ಮೊದಲ ಬಲಿ ಸಂಭವಿಸಿದೆ. ಪ್ರಜ್ವಲ್ ಗೋವಿಂದ ಖಾರ್ವಿ (24) ಡೆಂಗ್ಯೂಗೆ ಬಲಿಯಾದ ಯುವಕ. ಭಟ್ಕಳ ತಾಲ್ಲೂಕಿನ ತಲಗೋಡು ನಿವಾಸಿಯಾದ ಪ್ರಜ್ವಲ್, ಸಾಗರಶ್ರೀ ಬೋಟ್‌ನಲ್ಲಿ ಮೀನುಗಾರನಾಗಿ ಕೆಲಸ ಮಾಡುತ್ತಿದ್ದರು.

ಒಂದು ವಾರದಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಪ್ರಜ್ವಲ್‌, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಭಟ್ಕಳದ ಇನ್ನೂ ಇಬ್ಬರು ಮೀನುಗಾರರಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಹೀಗಾಗಿ ಭಟ್ಕಳ ಬಂದರಿನಲ್ಲಿ ಡೆಂಗ್ಯೂ ಆತಂಕ ಹೆಚ್ಚಾಗಿದೆ.

ಸಿಡಿಮದ್ದು ತಾಲೀಮು ವೇಳೆ ಗಾಯ

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಸಿಡಿಮದ್ದು ತಾಲೀಮು ವೇಳೆ ಅವಘಡ ಸಂಭವಿಸಿದ್ದು, ಸಿಡಿಮದ್ದು ಸಿಡಿದು ಸಿಬ್ಬಂದಿಗೆ ಸುಟ್ಟ ಗಾಯವಾಗಿದೆ. ನಿನ್ನೆ ಪುಷ್ಪಾರ್ಚನೆ ರಿಹರ್ಸಲ್ ವೇಳೆ ಘಟನೆ ನಡೆದಿದೆ.

ನಿನ್ನೆ ಸಂಜೆ ಅರಮನೆ ಆವರಣದಲ್ಲಿ ಜಂಬೂ ಸವಾರಿಗೆ ಪುಷ್ಪಾರ್ಚನೆ ರಿಹರ್ಸಲ್ ಸಂದರ್ಭ ಹೀಗಾಗಿದೆ. ಈ ವೇಳೆ ರಾಷ್ಟ್ರಗೀತೆ ನುಡಿಸಿ 21 ಸುತ್ತು ಕುಶಾಲತೋಪು ಸಿಡಿಸಲಾಗಿತ್ತು. ಕುಶಾಲತೋಪು ಸಿಡಿದು ಸಿಬ್ಬಂದಿಗೆ ಗಾಯವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Road Accident: ಬೈಕ್‌-ಕಾರು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರ ಸಾವು, ಮತ್ತೊಬ್ಬರಿಗೆ ಗಾಯ

Exit mobile version