ಕಾರವಾರ : ರಾಷ್ಟ್ರೀಯ ಹೆದ್ದಾರಿ (National High Way) ದಾಟುತ್ತಿದ್ದ ವೇಳೆ ಸ್ಕೂಟಿಗೆ ಬಸ್ ಡಿಕ್ಕಿಯಾಗಿ (Bus hits Scooty) ತಾಯಿ ಮತ್ತು ಮಗಳು (Mother and daughter dead) ದಾರುಣವಾಗಿ ಮೃತಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ (Uttara Kannada News) ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಮಂಕಿ ಗ್ರಾಮದ ಬಳಿ ಘಟನೆ (Road Accident) ನಡೆದಿದೆ.
ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದ ಮಾವಳ್ಳಿ ನಿವಾಸಿಗಳಾದ ಸವಿತಾ ಆಚಾರಿ(40) ಮತ್ತು ಮಗಳು ಅಂಕಿತಾ ಆಚಾರಿ(17) ಮೃತ ದುರ್ದೈವಿಗಳು.
ಸವಿತಾ ಮತ್ತು ಅಂಕಿತಾ ಅವರು ಸ್ಕೂಟಿಯಲ್ಲಿ ಸಾಗುತ್ತಿದ್ದರು. ಮಂಕಿ ಬಳಿ ಅವರು ಹೆದ್ದಾರಿಯನ್ನು ದಾಟುತ್ತಿದ್ದಾಗ ಮಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಏಕಾಏಕಿಯಾಗಿ ನುಗ್ಗಿ ಬಂದಿದೆ.
ವೇಗವಾಗಿ ಬಂದ ಬಸ್ ಒಮ್ಮಿಂದೊಮ್ಮೆಗೇ ಬ್ರೇಕ್ ಹಾಕಿ ಸ್ಕೂಟಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಪ್ರಯತ್ನ ನಡೆಸಿದ್ದಾನೆ. ಹೀಗೆ ಮಾಡುವಾಗ ಬಸ್ ರಸ್ತೆ ಮಧ್ಯದ ಡಿವೈಡರ್ ಹತ್ತಿ ದೂರ ಹೋಗಿ ನಿಂತಿದೆ.
ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : Kidnap Case : ಸಮುದ್ರದಲ್ಲೇ ಮೀನುಗಾರರ ಮೇಲೆ ದಾಳಿ ಮಾಡಿ ಕಿಡ್ನಾಪ್; ಕೊನೆಗೂ ರಕ್ಷಣೆ
ಗೆಳೆಯರ ಜತೆ ಪಾರ್ಟಿಗೆ ಹೋಗಿದ್ದ ಯುವಕ ಸುಟ್ಟ ಸ್ಥಿತಿಯಲ್ಲಿ ಪತ್ತೆ
ರಾಯಚೂರು: ಗೆಳೆಯರ ಜೊತೆ ಪಾರ್ಟಿಗೆ ತೆರಳಿದ್ದ ಯುವಕ ಶವವಾಗಿ ಪತ್ತೆಯಾದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿಯಲ್ಲಿ ನಡೆದಿದೆ.
ನೀರಮಾನ್ವಿ ಬಳಿಯ ಮಿಟ್ಟಿ ಕ್ಯಾಂಪ್ ಗ್ರಾಮದ ಹೊಲದಲ್ಲಿ ಸುರೇಶ್ ನಾಯಕ್ (20) ಎಂಬ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಆತನ ಶವವನ್ನು ಪೆಟ್ರೋಲ್ ಹಾಕಿ ಸುಡಲಾಗಿದೆ.
ಸುರೇಶ್ ಮೂರು ದಿನಗಳ ಹಿಂದೆ ಸ್ನೇಹಿತರ ಜೊತೆ ತೆರಳಿದ್ದ. ಸ್ನೇಹಿತರ ಜೊತೆ ಪಾರ್ಟಿ ಮಾಡೋದಾಗಿ ಹೇಳಿ ಹೋಗಿದ್ದ ಸುರೇಶ್ ಮನೆಗೆ ಬಾರದೆ ನಿಗೂಢವಾಗಿ ನಾಪತ್ತೆಯಾಗಿದ್ದ. ಇದೀಗ ಮೂರು ದಿನಗಳ ಸುರೇಶ್ ಹೊಲದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಮಾನ್ವಿ ಪಟ್ಟಣದ ಸ್ಥಳೀಯ ನಿವಾಸಿ ಆಗಿರೋ ಮೃತ ಸುರೇಶ್ ಬೆಂಗಳೂರಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ. ಇತ್ತಿಚೆಗೆ ಜಾತ್ರೆಯ ಸಲುವಾಗಿ ಊರಿಗೆ ಬಂದಿದ್ದ. ಇದೀಗ ಆತನನ್ನು ಕರೆದುಕೊಂಡು ಹೋಗಿರುವ ಸ್ನೇಹಿತರು ನಾಪತ್ತೆಯಾಗಿದ್ದಾರೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ಸುರೇಶ್ ಶವಕಂಡು ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಮಾನ್ವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.