Site icon Vistara News

Road Accident : ಬೈಕ್‌‌ಗೆ ನಗರಸಭೆ ವಾಹನ ಬಡಿದು ಶಿಕ್ಷಕಿ ಸಾವು

Road Accident in karwar

ಕಾರವಾರ: ಬೈಕ್‌‌ಗೆ ನಗರಸಭೆ ವಾಹನ ಬಡಿದು ಶಿಕ್ಷಕಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಿರ್ಜಾನಕರ್ ಪೆಟ್ರೋಲ್ ಬಂಕ್ ಬಳಿ (Road Accident) ನಡೆದಿದೆ. ವಿಜಯಾ ಮಾಸ್ತೆಪ್ಪ ಭೋವಿ (40) ಮೃತ ದುರ್ದೈವಿ.

ವಿಜಯಾ ಅವರು ತಾಲ್ಲೂಕಿನ ಬಂಡಲದ ಬಡಗಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದರು. ಪತಿ ಜತೆಗೆ ವಿಜಯಾ ಅವರು ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕ್‌ಗೆ ನಗರಸಭೆಯ ತ್ಯಾಜ್ಯ ತುಂಬುವ ಟ್ರಕ್ ಬಡಿದಿದೆ. ಈ ವೇಳೆ ಕೆಳಗೆ ಬಿದ್ದ ಶಿಕ್ಷಕಿ ವಿಜಯಾ ಅವರ ತಲೆ ಮೇಲೆ ಟ್ರಕ್ ಹತ್ತಿದೆ. ಪರಿಣಾಮ ಶಿಕ್ಷಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ವಿಜಯಾ ಪತಿಗೂ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಶಿರಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case: ಅತ್ತಿಗೆಯನ್ನು ಮನೆ ಬಿಡಿಸಿದವನು ಅಣ್ಣನನ್ನೂ ದೊಣ್ಣೆಯಲ್ಲಿ ಹೊಡೆದು ಕೊಂದ

Road Accident: ಸವಾರನ ಮೇಲೆ ಹರಿದ ಖಾಸಗಿ ಬಸ್‌; ಹಂಪ್‌ನಲ್ಲಿ ಸ್ಕೂಟರ್‌ ಪಲ್ಟಿಯಾಗಿ ಯುವಕ ಸಾವು

ಬೆಂಗಳೂರು: ಖಾಸಗಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ (Road Accident) ಮೃತಪಟ್ಟಿದ್ದಾರೆ. ತುಮಕೂರು ರಸ್ತೆಯ ರಾಕ್ ಲೈನ್ ಮಾಲ್ ಮುಂಭಾಗ ಈ ಅಪಘಾತ ನಡೆದಿದೆ. ಯೋಗೇಶ್ (21) ಮೃತಪಟ್ಟ ಬೈಕ್ ಸವಾರನಾಗಿದ್ದಾನೆ.

ಖಾಸಗಿ ಬಸ್‌ ತುಮಕೂರು ಕಡೆಯಿಂದ ಬೆಂಗಳೂರು ಮಾರ್ಗವಾಗಿ ಬರುತ್ತಿತ್ತು. ಈ ವೇಳೆ ಮುಂದೆ ಹೋಗುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಬಸ್‌ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಬೈಕ್ ಸವಾರ ಯೋಗೇಶ್‌ ಮೇಲೆ ಬಸ್‌ ಹರಿದಿದೆ. ಯೋಗೇಶ್‌ ತಲೆಗೆ ಗಂಭೀರ ಗಾಯವಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೀಣ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪೀಣ್ಯ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Physical Abuse : ದಾರಿಯುದ್ದಕ್ಕೂ ಪುಂಡರ ಚೇಸಿಂಗ್‌; ಕಾರಿನಲ್ಲಿದ್ದ ಯುವತಿಯರನ್ನು ಸುತ್ತುವರಿದು ಟಾರ್ಚರ್‌

ಸ್ವಯಂ ಅಪಘಾತಕ್ಕೆ ಯುವಕ ಬಲಿ

ಬೈಕ್‌ ಅಪಘಾತದಲ್ಲಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ರಾಜಸ್ಥಾನ ಮೂಲದ ಅರ್ಜುನ್‌ ಎಂಬಾತ ಅರಕೆರೆಯಲ್ಲಿ ವಾಸವಿದ್ದ. ರಾಜಸ್ಥಾನಕ್ಕೆ ಹೋಗಲೆಂದು ಟಿಕೆಟ್ ಬುಕ್ ಮಾಡಲು ಬಿಡಿಎ ಕಾಂಪ್ಲೆಕ್ಸ್ ಬಳಿ ತೆರಳುತ್ತಿದ್ದ. ಹೊಂಡಾ ಆ್ಯಕ್ಟಿವಾದಲ್ಲಿ ಹಂಪ್ ದಾಟುವಾಗ ಬೈಕ್‌ನಿಂದ ಕೆಳಗೆ ಬಿದ್ದಿದ್ದಾನೆ.

ಕಡಿಮೆ ಗುಣಮಟ್ಟದ ಹೆಲ್ಮೆಟ್ ಬಳಸಿದ್ದರಿಂದ ತಲೆಗೆ ಬಲವಾದ ಪೆಟ್ಟಾಗಿತ್ತು. ತೀವ್ರ ರಕ್ತಸ್ರಾವವಾಗಿ ಅರ್ಜುನ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನ ಜಯನಗರ 7 ನೇ ಬ್ಲಾಕ್ ಬಳಿ ಸೋಮವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ. ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version