Site icon Vistara News

ಕಾಸರಕೋಡು ಕಡಲಲ್ಲಿ ಕಂಡು ಬಂದ ವಿಸ್ಮಯ!

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಾಸರಕೋಡಿನಲ್ಲಿ ಬೆರಗು ಮೂಡಿಸುಂತಹ ಘಟನೆ ನಡೆದಿದೆ. ಟೊಂಕ ಕಡಲತೀರದ ಉದ್ದೇಶಿತ ವಾಣಿಜ್ಯ ಬಂದರು ಪ್ರದೇಶದ ಸಮೀಪ ಕಡಲಾಮೆಯೊಂದು ಇಟ್ಟ ಮೊಟ್ಟೆಗಳಿಂದ 55 ಮರಿಗಳು ಜನಿಸಿವೆ. ಇದು ಅಪರೂಪದ ರಿಡ್ಲೆ ಜಾತಿಯ ಕಡಲಾಮೆ ಎಂದು ಗುರುತಿಸಲಾಗಿದೆ.

https://vistaranews.com/wp-content/uploads/2022/04/WhatsApp-Video-2022-04-23-at-2.04.08-PM.mp4

ಕಳೆದ 45 ದಿನಗಳ ಹಿಂದೆ ಕಡಲಾಮೆ ಮೊಟ್ಟೆಗಳಿಟ್ಟಿರುವ ಸ್ಥಳವನ್ನು ಮೀನುಗಾರರು ಗುರುತಿಸಿದ್ದರು. ಈ ವಿಷಯವನ್ನು ಅರಣ್ಯ ಇಲಾಖೆ ಸಿಬ್ಬಂದಿಯ ಗಮನಕ್ಕೂ ತರಲಾಗಿತ್ತು. ಬಳಿಕ ಅದೇ ಸ್ಥಳದಲ್ಲಿ ಪಂಜರ ನಿರ್ಮಿಸಿ ಈ ಮೊಟ್ಟಗಳ ಸಂರಕ್ಷಣೆ ಕ್ರಮ ಕೈಗೊಂಡಿದ್ದರು. ಈಗ ಈ ಅಪರೂಪದ ರಿಡ್ಲೆ ಜಾತಿಯ ಕಡಲಾಮೆ 55 ಮರಿಗಳು ಜನಿಸಿದ್ದು, ಸ್ಥಳೀಯ ಅರಣ್ಯ ಸಿಬ್ಬಂದಿ ಮರಿಗಳನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಬಿಟ್ಟಿದ್ದಾರೆ.

ಇದನ್ಮೂ ಓದಿ: ಸದ್ಗುರು Save Soil ಅಭಿಯಾನ: ಸರ್ಬಿಯಾದಿಂದ ಸಂದೇಶ

Exit mobile version