ಕಾರವಾರ: ಇನ್‌ಸ್ಟಾಗ್ರಾಮ್‌ನಲ್ಲಿ (instagram) ಪರಿಚಯ ಬೆಳೆಸಿದ ಸ್ನೇಹಿತನ ಕಿರುಕುಳದಿಂದ (blackmail case) ಬೇಸತ್ತು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ (Self harm) ಘಟನೆ ಭಟ್ಕಳದಲ್ಲಿ ನಡೆದಿದೆ.
ಉತ್ತರಕನ್ನಡ (Uttara kannada news) ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳದ ಹಾಡವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ನೇತ್ರಾ ಗೋವಾಳಿ(24) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಇನ್‌ಸ್ಟಾಗ್ರಾಮ್‌ನಲ್ಲಿ ಸ್ನೇಹಿತನಾಗಿದ್ದ ಗೋವರ್ಧನ್ ಮೊಗೇರ್ ಎಂಬಾತ ಈಕೆಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಕಳೆದೊಂದು ವರ್ಷದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಗೋವರ್ಧನ್ ಈಕೆಗೆ ಪರಿಚಯವಾಗಿದ್ದ. ನೇತ್ರಾಳೊಂದಿಗೆ ಆತ್ಮೀಯವಾಗಿ ಸ್ನೇಹ ಬೆಳೆಸಿದ್ದ ಈತ ಬಳಿಕ ಪ್ರೀತಿಸುವಂತೆ ಕಿರುಕುಳ ನೀಡಲು ಆರಂಭಿಸಿದ್ದ. ಪ್ರೀತಿಗೆ ಒಪ್ಪದಿದ್ದಾಗ, ತಾನು ಖರ್ಚು ಮಾಡಿದ್ದ ಹಣ ನೀಡುವಂತೆ ಪೀಡಿಸಲು ಆರಂಭಿಸಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ನಿನ್ನ ಅಶ್ಲೀಲ ಪೋಟೋಗಳನ್ನು ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದ.
ಈ ಕಿರುಕುಳದಿಂದ ಬೇಸತ್ತ ನೇತ್ರಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಗಳ ಸಾವಿಗೆ ಗೋವರ್ಧನ್ ಕಾರಣ ಎಂದು ನೇತ್ರಾ ತಂದೆಯಿಂದ ಗೋವರ್ಧನ್ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಕಾರವಾರ: ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಭಟ್ಕಳದ ಮುರ್ಡೇಶ್ವರ ಕಡಲತೀರದಲ್ಲಿ ರಕ್ಷಿಸಲಾಗಿದೆ.
ಹಾಸನ ಮೂಲದ ಮನೋಜ್(24), ಮಂಡ್ಯ ಮೂಲದ ದಿಲೀಪ್(28) ರಕ್ಷಣೆಗೊಳಗಾದ ಪ್ರವಾಸಿಗರು. ಹಾಸನದಿಂದ 7 ಮಂದಿ ಕುಟುಂಬಸ್ಥರೊಂದಿಗೆ ಬಂದಿದ್ದ ಮನೋಜ್ ನೀರಲ್ಲಿ ಈಜುತ್ತಿದ್ದ ವೇಳೆ ಅಲೆಗಳಿಗೆ ಸಿಕ್ಕು ಮುಳುಗುತ್ತಿದ್ದಾಗ ಅವರನ್ನು ರಕ್ಷಿಸಲಾಗಿದೆ.
ಮಂಡ್ಯದಿಂದ ಸ್ನೇಹಿತರೊಂದಿಗೆ ಬಂದಿದ್ದ ದಿಲೀಪ್ ಗೌಡ ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಲೆಗಳಿಗೆ ಸಿಕ್ಕು ಅಸ್ವಸ್ಥರಾಗಿದ್ದರು. ಅವರನ್ನು ರಕ್ಷಿಸಿ, ಗಂಭೀರಗೊಂಡಿದ್ದ ದಿಲೀಪ್‌ರನ್ನು ಮುರ್ಡೇಶ್ವರದ ಆರ್‌ಎನ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲೈಫ್‌ಗಾರ್ಡ್ ಸಿಬ್ಬಂದಿ ಚಂದ್ರಶೇಖರ, ಜಯರಾಂ, ಹನುಮಂತ್‌ರಿಂದ ಪ್ರವಾಸಿಗರ ರಕ್ಷಣಾ ಕಾರ್ಯ ನಡೆದಿದೆ.
ಇದನ್ನೂ ಓದಿ: Tiger Nail: ಹುಲಿ ಉಗುರು ಡಾಲರ್ ಹಾಕಿದ್ದ ಪ್ರಸಿದ್ಧ ದೇವಾಲಯದ ಇಬ್ಬರು ಅರ್ಚಕರು ವಶಕ್ಕೆ