Site icon Vistara News

Self Harming : ಕಾಲೇಜಿನಿಂದ ಬಂದವಳೇ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ

Self Harming In Karwar

ಕಾರವಾರ: ಬಾವಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ. ಈ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಬೆಳಕೆಯ ಕಟಗೇರಿಯಲ್ಲಿ ನಡೆದಿದೆ. ದೀಕ್ಷಾ ನಾಯ್ಕ (22) ಮೃತ ದುರ್ದೈವಿ.

ದೀಕ್ಷಾ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು. ಎಂದಿನಂತೆ ಬೆಳಗ್ಗೆ ಕಾಲೇಜಿ ಹೋಗಿ ಮನೆಗೆ ಬಂದಿದ್ದಳು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳು ಕಾಣದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಕಡೆಗೆ ಅನುಮಾನಗೊಂಡು ಬಾವಿಯಲ್ಲಿ ನೋಡಿದಾಗ ಮೃತದೇಹವು ಪತ್ತೆಯಾಗಿದೆ.

ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀರಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Assault Case: ಸಿಸಿಬಿ ಪೊಲೀಸರ ಮೇಲೆ ಕಲ್ಲು, ದೊಣ್ಣೆಯಿಂದ ನೈಜೀರಿಯಾ ಪ್ರಜೆಗಳು ಅಟ್ಯಾಕ್‌

ಸಾಲಗಾರರ ಕಾಟ; ಹೆಂಡತಿ-ಮಕ್ಕಳಿಗೆ ವಿಷವಿಕ್ಕಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪಾಪಿ

ಮಂಡ್ಯ: ಐಪಿಎಲ್ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ (IPL‌ Betting) ಲಕ್ಷಾಂತರ ರೂಪಾಯಿ ಕಳೆದುಕೊಂಡ ವ್ಯಕ್ತಿಯೊಬ್ಬ ಸಾಲಗಾರರ ಕಾಟಕ್ಕೆ ಬೇಸತ್ತು, ಹೆಂಡತಿ, ಮಕ್ಕಳಿಗೆ ವಿಷ ನೀಡಿ (Self Harming) ಕೊಂದಿದ್ದಾನೆ. ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಂಡ್ಯದ ನಾಗಮಂಗಲ ಪಟ್ಟಣದಲ್ಲಿ ಘಟನೆ ನಡೆದಿದೆ.

ನರಸಿಂಹ ಎಂಬಾತ ಈ ಕೃತ್ಯವೆಸಗಿದ್ದಾನೆ. ಪತ್ನಿ ಕೀರ್ತನ (23) ಮಕ್ಕಳಾದ ಜಯಸಿಂಹ (4) ದೀಪಿಕಾ (1) ಮೃತ ದುರ್ದೈವಿ. ಅಸ್ವಸ್ಥನಾಗಿರುವ ನರಸಿಂಹನನ್ನು ನಾಗಮಂಗಲ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಐಪಿಎಲ್ ಕ್ರಿಕೆಟ್‌ ನೋಡುತ್ತಿದ್ದ ನರಸಿಂಹ ಬೆಟ್ಟಂಗ್‌ನ ಹಿಂದೆ ಬಿದ್ದಿದ್ದ. ಇದರಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿದ್ದ ಎಂದು ತಿಳಿದು ಬಂದಿದೆ. ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಳ್ಳುತ್ತಿದ್ದರೂ ಇವತ್ತಲ್ಲ ನಾಳೆ ಮರಳಿ ಬರುತ್ತದೆ ಎನ್ನುವ ಭರವಸೆಯೊಂದಿಗೆ ಮೇಲಿಂದ ಮೇಲೆ ಸಾಲ ಮಾಡಿ ಲಕ್ಷಾಂತರ ರೂ. ಕಳೆದುಕೊಂಡಿದ್ದ.

ಇದರಿಂದ ಮನನೊಂದ ನರಸಿಂಹ ಪತ್ನಿ ಹಾಗೂ ಪುಟ್ಟ ಮಕ್ಕಳಿಬ್ಬರಿಗೆ ವಿಷ ನೀಡಿ ಹತ್ಯೆ ಮಾಡಿದ್ದಾನೆ. ಅವರೆಲ್ಲೂ ಮೃತಪಟ್ಟ ಬಳಿಕ ತಾನೂ ವಿಷ ಸೇವಿಸಿದ್ದಾನೆ. ಸದ್ಯ ನಾಗಮಂಗಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Road Accident : ಸೈಕಲ್‌ಗೆ ಗುದ್ದಿದ ಕಾರು, ನರಳಾಡಿ ವ್ಯಕ್ತಿ ಸಾವು; ಹಿಟ್‌ ಆ್ಯಂಡ್‌ ರನ್‌ಗೆ ಬೈಕ್‌ ಸವಾರ ಬಲಿ

ರೈಲಿಗೆ ತಲೆ ಕೊಟ್ಟು ಮಣಿಪಾಲ್‌ ಆಸ್ಪತ್ರೆಯ ಸ್ಟಾಫ್ ನರ್ಸ್ ಸೂಸೈಡ್‌

ಬೆಂಗಳೂರು: ರೈಲಿಗೆ ಸಿಲುಕಿ ಯುವಕನೊಬ್ಬ ಆತ್ಮಹತ್ಯೆಗೆ (Student death) ಶರಣಾಗಿದ್ದಾರೆ. ಬೆಂಗಳೂರಿನ ದೀಪಾಂಜಲಿನಗರ ರೈಲ್ವೆ ಟ್ರಾಕ್ ಬಳಿ ಘಟನೆ ನಡೆದಿದೆ. ವಿಜಯಪುರ ಮೂಲದ ಚನ್ನಬಸು ಅಶೋಕ್ (22) ಮೃತ ದುರ್ದೈವಿ.

ಚನ್ನಬಸು ಅಶೋಕ್‌ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನ ತನ್ನ ಚಿಕ್ಕಮ್ಮನೊಟ್ಟಿಗೆ ವಾಸವಾಗಿದ್ದ. ಇಂದು ಗುರುವಾರ ಮನೆಯಿಂದ ಹೊರಟವನು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿಟಿ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version