Site icon Vistara News

Tourist Rescued : ಕುಡ್ಲೇ ಬೀಚಲ್ಲಿ ಅಪಾಯಕ್ಕೆ ಸಿಲುಕಿದ ಯುವಕನ ರಕ್ಷಣೆ; ವಿದೇಶಿ ಗೆಳತಿ ಜತೆ ಬಂದಿದ್ದ

Tourist rescued gokarna Kudle beach

ಕಾರವಾರ: ಉತ್ತರ ಕನ್ನಡ ಜಿಲ್ಲೆಯ (Uttara Kannada News) ಪ್ರತಿಷ್ಠಿತ ಪುಣ್ಯ ಕ್ಷೇತ್ರ ಗೋಕರ್ಣ (Gokarna kshetra) ಸಮೀಪದ ಕುಡ್ಲೇ ಬೀಚ್‌ನಲ್ಲಿ (Kudle Beach) ಸಮುದ್ರದ ಅಲೆಗಳಿಗೆ ಸಿಲುಕಿ ಅಪಾಯದಲ್ಲಿದ್ದ ಪ್ರವಾಸಿಗನೊಬ್ಬನನ್ನು (Tourist Rescued) ಜೀವರಕ್ಷಕ ತಂಡ (Life Guard team) ರಕ್ಷಣೆ ಮಾಡಿದೆ.

ಕುಮಟಾ ತಾಲ್ಲೂಕಿನ ಗೋಕರ್ಣಕ್ಕೆ ಬಂದಿದ್ದ ಅಸ್ಸಾಂ ಮೂಲದ ಅಭಿಷೇಕ್ ನಾಥ್(26) ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಲೆಗಳಿಗೆ ಸಿಲುಕಿದ್ದರು. ಅಭಿಷೇಕ್‌ ವಿದೇಶಿ ಗೆಳತಿಯೊಂದಿಗೆ ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಅಭಿಷೇಕ್‌ ಅಪಾಯದಲ್ಲಿ ಸಿಲುಕಿದ್ದನ್ನು ಗಮನಿಸಿದ ಗೆಳತಿ ಜೋರಾಗಿ ಬೊಬ್ಬೆ ಹೊಡೆಯಲು ಆರಂಭಿಸಿದರು. ಆಗ ಲೈಫ್‌ ಗಾರ್ಡ್‌ ಸಿಬ್ಬಂದಿ ಕೂಡಲೇ ಪ್ರವಾಸಿಗನ ರಕ್ಷಣೆಗೆ ಜೆಟ್‌ಸ್ಕೀ ಬೋಟ್‌ನೊಂದಿಗೆ ಧಾವಿಸಿದರು.

Young man drowns in Gadag‌ and in gokarna beach Young womens are safe

ಲೈಫ್‌ಗಾರ್ಡ್ ಮಂಜುನಾಥ ಹರಿಕಂತ್ರ, ನವೀನ್ ಅಂಬಿಗ ಮತ್ತು ತಂಡ ನೀರಿಗೆ ಇಳಿದು ಅಭಿಷೇಕ್‌ ನಾಥ್‌ ಅವರನ್ನು ರಕ್ಷಣೆ ಮಾಡಿತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಪ್ರವಾಸಿಗ ಮತ್ತು ಆತನ ಗೆಳತಿ ಜೀವ ರಕ್ಷಕ ತಂಡಕ್ಕೆ ಕೃತಜ್ಞತೆ ಸಲ್ಲಿಸಿತು. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ : Train Derails: ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್‌ ರೈಲು; ರಕ್ಷಣಾ ಕಾರ್ಯಾಚರಣೆ

ಸಮುದ್ರದ ಸುಳಿಗೆ ಸಿಲುಕಿಕೊಂಡ ಯುವತಿಯರು ಪಾರು

ಕಾರವಾರ: ಕಳೆದ ಮಾರ್ಚ್‌ 10ರಂದು ಸಮುದ್ರದ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಮೂವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೇ ಬೀಚ್‌ನಲ್ಲಿ ಘಟನೆ ನಡೆದಿದೆ. ಸ್ಮಿತಾ(23), ನಿಹಾರಿಕಾ(22), ಪವಿತ್ರಾ(22) ರಕ್ಷಣೆಗೊಳಗಾದ ಪ್ರವಾಸಿಗರು.

Young man drowns in Gadag‌ and in gokarna beach Young womens are safe

ಬೆಂಗಳೂರಿನ ಜಯನಗರ ನಿವಾಸಿಗಳಾದ ಈ ಮೂವರು ಸಮುದ್ರದಲ್ಲಿ ಈಜಾಡಲು ತೆರಳಿದ್ದರು. ಈ ವೇಳೆ ಅಲೆಗಳಿಗೆ ಸಿಲುಕಿ ಸಮುದ್ರದಲ್ಲಿ ಮುಳುಗುತ್ತಿದ್ದರು. ಇದನ್ನೂ ಗಮನಿಸಿದ ಲೈಫ್‌ಗಾರ್ಡ್ ಸಿಬ್ಬಂದಿ ನವೀನ್ ಅಂಬಿಗ, ಮಂಜುನಾಥ ಹರಿಕಂತ್ರ ಎಂಬುವವರು ರಕ್ಷಣೆ ಮಾಡಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version