Site icon Vistara News

Accidents: ಪ್ರತ್ಯೇಕ ಅಪಘಾತದಲ್ಲಿ ಇಬ್ಬರ ಸಾವು: ದೋಣಿ ಮುಳುಗಿ ಮೀನುಗಾರ, ವಿದ್ಯುತ್‌ ಕಂಬ ಬಿದ್ದು ರೈತ ಮೃತ್ಯು

accident deaths

accident deaths

ಕಾರವಾರ/ ಮಂಡ್ಯ: ಕೆಲಸ ಮಾಡುತ್ತಿದ್ದ ಸಂದರ್ಭ ನಡೆದ ಎರಡು ಪ್ರತ್ಯೇಕ ಅವಘಡಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಮೀನುಗಾರಿಕೆಗೆ ತೆರಳಿದ್ದ ವೇಳೆ ಪಾತಿ ದೋಣಿಯೊಂದು ಮುಳುಗಿದ ಪರಿಣಾಮ ಮೀನುಗಾರನೊಬ್ಬ ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ. ಮೀನುಗಾರಿಕೆಗೆ ತೆರಳಿದ್ದ ಲುಕ್ಕೇರಿ ಗ್ರಾಮದ ನಿವಾಸಿ 24 ವರ್ಷದ ವಿಘ್ನೇಶ್ವರ ಅಂಬಿಗ ಮೃತ ದುರ್ದೈವಿ. ವಿಘ್ನೇಶ್ವರ ಇಲ್ಲಿನ ಅಘನಾಶಿನಿ ನದಿಯಲ್ಲಿ ಮೀನುಗಾರಿಕೆಗೆಂದು ತೆರಳಿದ್ದರು. ಸಂಜೆ ಮೀನುಗಾರಿಕೆ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ನದಿಯಲ್ಲಿ ನೀರಿನ ಒಳಹರಿವಿನಿಂದಾಗಿ ಪಾತಿ ಮಗುಚಿ ಬಿದ್ದಿದೆ. ಪರಿಣಾಮ ವಿಘ್ನೇಶ್ವರ ಅಸ್ವಸ್ಥಗೊಂಡಿದ್ದು ಸಮೀಪದಲ್ಲಿದ್ದ ಬೇರೆ ದೋಣಿಯವರು ದೋಣಿ ಮಗುಚಿದ್ದನ್ನು ಗಮನಿಸಿ ವಿಘ್ನೇಶ್ವರನನ್ನು ಮೇಲಕ್ಕೆತ್ತಿದ್ದರು. ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಮೃತನ ಸಂಬಂಧಿ ವಾಮನ ಪರಮೇಶ್ವರ ಅಂಬಿಗ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಂಡ್ಯದಲ್ಲಿ ತಲೆ ಮೇಲೆ ವಿದ್ಯುತ್ ಕಂಬ ಬಿದ್ದು ರೈತರೊಬ್ಬರು ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚೆನ್ನಮ್ಮನ ಕೊಪ್ಪಲು ಗ್ರಾಮದಲ್ಲಿ ಘಟನೆ‌ ನಡೆದಿದೆ. ಗ್ರಾಮದ ರೈತ ಕರೀಗೌಡ (60) ಮೃತ ದುರ್ದೈವಿ. ಜಮೀನಿಗೆ ವಿದ್ಯುತ್ ಪರಿವರ್ತಕ ಅಳವಡಿಸಿಕೊಡುವುದಾಗಿ ರಾತ್ರಿ ವೇಳೆ ಇವರನ್ನು ಸೆಸ್ಕ್ ಸಿಬ್ಬಂದಿಗಳು ಕರೆದೊಯ್ದಿದ್ದರು. ಕತ್ತಲೆಯಲ್ಲಿ ಟಿಸಿ ಅಳವಡಿಸುತ್ತಿರುವಾಗ ತಲೆ ಮೇಲೆ ಕಬ್ಬಿಣದ ಕಂಬ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Killer BMTC: ಚಾಲಕನ ನಿಯಂತ್ರಣ ತಪ್ಪಿದ ಬಸ್‌ನಿಂದ ಸರಣಿ ಅಪಘಾತ, ಬೈಕ್‌ ಸವಾರ ಸಾವು

Exit mobile version