Site icon Vistara News

Uttara Kannada News: ಖತರ್ನಾಕ್ ಕಳ್ಳಿಯರ ಬಂಧನ; 6 ಲಕ್ಷ ರೂ ಮೌಲ್ಯದ 100 ಗ್ರಾಂ ಚಿನ್ನಾಭರಣ ವಶ

Arrest of inter district thieves 100 grams of gold jewelery worth Rs 6 lakh seized

ಮುಂಡಗೋಡ: ಅಂತರ ಜಿಲ್ಲಾ ಕಳ್ಳಿಯರನ್ನು (Inter District Thieves) ಮುಂಡಗೋಡ ಠಾಣೆಯ ಪೊಲೀಸರು ಬಂಧಿಸಿ, ಆರೋಪಿತರಿಂದ 6 ಲಕ್ಷ ರೂ ಬೆಲೆಬಾಳುವ 100 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿರುವ ಘಟನೆ (Uttara Kannada News) ಜರುಗಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹನುಮಂತನಗರದ ಶಾಂತಿ ವೆಂಕಟರಮಣ ಕಲ್ಲವಡ್ಡರ (31) ಮತ್ತು ಮೀನಾಕ್ಷಿ ಪರಮೇಶ ಕಲ್ಲವಡ್ಡರ ಬಂಧಿತ ಆರೋಪಿಗಳಾಗಿದ್ದಾರೆ.

2022 ಮೇ 16 ರಂದು ತಾಲೂಕಿನ ಚಿಗಳ್ಳಿ ಗ್ರಾಮದ ಕುಮಾರಿ ಶೃತಿ ಅರಳಿಕಟ್ಟಿ ಎಂಬ ಯುವತಿ ಎಸ್‌ಬಿಐ ಬ್ಯಾಂಕಿನಿಂದ 49,000 ರೂ ಡ್ರಾ ಮಾಡಿ ತನ್ನ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಂಡು ಪಟ್ಟಣದ ನ್ಯಾಯಾಲಯದ ಹತ್ತಿರ ಇರುವ ಝರಾಕ್ಸ್‌ ಅಂಗಡಿಯಲ್ಲಿ ಹಣ ನೋಡಿದಾಗ ಹಣ ಇರಲಿಲ್ಲ. ಯಾರೋ ಕಳ್ಳರು ಹಿಂದಿನಿಂದ ಬ್ಯಾಗ್‌ನಲ್ಲಿದ್ದ ಪರ್ಸ್‌ಅನ್ನು ಕಳ್ಳತನ ಮಾಡಿಕೊಂಡ ಹೊಗಿದ್ದರ ಬಗ್ಗೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: Road Accident : ಚಿಕ್ಕಲ್ಲೂರು ಜಾತ್ರೆಗೆ ತೆರಳುವಾಗ ಭೀಕರ ಅಪಘಾತ; ಚಾಲಕ ಸಾವು, ಮತ್ತಿಬ್ಬರು ಗಂಭೀರ

ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಂಡಿದ್ದ ಪೊಲೀಸರು ಜನವರಿ 24 ರಂದು ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ 20 ಸಾವಿರ ರೂ ಜಪ್ತಿಮಾಡಲಾಗಿದೆ. ಇದಲ್ಲದೆ ಕಳೆದ ಎರಡು ತಿಂಗಳ ಹಿಂದೆ ಶಿರಸಿಯ ಹಳೆ ಬಸ್‌ನಿಲ್ದಾಣ ಹಾಗೂ ನಿಲೇಕಣಿ ಬಸನಿಲ್ದಾಣಗಳಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಸುಮಾರು 6 ಲಕ್ಷ ರೂ ಬೆಲೆಬಾಳುವ 100 ಗ್ರಾಂ ಬಂಗಾರವನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: Bus Accident : ಅಡ್ಡ ಬಂದ ಬೈಕ್‌ ತಪ್ಪಿಸಲು ಹೋಗಿ ಪಲ್ಟಿ ಹೊಡೆದ ಬಸ್‌; ಹೊತ್ತಿ ಉರಿದ ಸ್ಕೂಟರ್‌

ಜಿಲ್ಲಾ‌ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಗದೀಶ ನಾಯ್ಕ, ಡಿವೈಎಸ್ಪಿ ಗಣೇಶ ಕೆ ಎಲ್ ಮಾರ್ಗದರ್ಶನದಲ್ಲಿ ಸಿಪಿಐ ಬಿ.ಎಸ್‌. ಲೋಕಾಪುರ ನೇತೃತ್ವದಲ್ಲಿ ಪಿಎಸ್ಐಗಳಾದ ಪರಶುರಾಮ ಎಂ ಮತ್ತು ಹನಮಂತ ಕುಡಗುಂಚಿ, ಸಿಬ್ಬಂದಿಗಳಾದ ಗಂಗಾಧರ ಹೊಂಗಲ, ಗೀತಾ ಕಲಘಟಗಿ, ಗಣಪತಿ ಹೊನ್ನಳ್ಳಿ, ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬಡಗೇರ, ಮಹಾಂತೇಶ ಮುಧೋಳ, ತಿರುಪತಿ, ಜ್ಯೋತಿ ಬನವಾಸಿ, ಪುಷ್ಪಾ , ಶಾಲಿನಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ‌ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಶ್ಲಾಘಿಸಿ, ಅಭಿನಂದಿಸಿದ್ದಾರೆ.

Exit mobile version