ಯಲ್ಲಾಪುರ: ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿರುವುದರಿಂದಾಗಿ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಮಯದಲ್ಲಿ ಉತ್ತರ ಕನ್ನಡದ ಮುಂಡಗೋಡದಲ್ಲಿ ದ್ವಿಚಕ್ರ ವಾಹನದಲ್ಲಿಯೇ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಯಲ್ಲಾಪುರದ ಅಬಕಾರಿ ಅಧಿಕಾರಿಗಳು ಮದ್ಯವನ್ನು (Yellapur News) ವಶಪಡಿಸಿಕೊಂಡಿದ್ದಾರೆ.
ಮುಂಡಗೋಡು ಪಟ್ಟಣದಿಂದ 2 ಕಿ.ಮೀ. ಅಂತರದಲ್ಲಿ ಹಿಬ್ಬಳಿ ರಸ್ತೆಯಲ್ಲಿ ವಿಧಾನಸಭೆ ಚುನಾವಣೆ ನಿಮಿತ್ತ ತಪಾಸಣೆ ನಡೆಸುತ್ತಿರುವಾಗ ಬಾಚಣಿಕಿ ಗ್ರಾಮದ ಪಕೀರಯ್ಯಾ ತಿಪ್ಪಯ್ಯಾ ಹಿರೇಮಠ ಎಂಬುವವರು ಬೈಕನ್ನು ನಿಲ್ಲಿಸಲಾಗಿದೆ. ಆ ವೇಳೆ ಅವರು ಬೈಕ್‌ನಲ್ಲಿ ಅಕ್ರಮವಾಗಿ 21.330 ಲೀ. ಮದ್ಯ ಸಾಗಾಣಿಕೆ ಮಾಡುತ್ತಿರುವುದನ್ನು ತಿಳಿದುಬಂದಿದೆ.
ಇದನ್ನೂ ಓದಿ: Yellapur News : ಯಲ್ಲಾಪುರದ ಭರತನಾಟ್ಯ ಕಲಾವಿದೆ ಶಮಾ ಭಾಗ್ವತ್‌ಗೆ ರಾಜ್ಯ ಮಟ್ಟದ ಹವ್ಯಕ ಪಲ್ಲವ ಪುರಸ್ಕಾರ
ತಕ್ಷಣವೇ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಅವರನ್ನು ಬಂದಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಪ್ತಿಪಡಿಸಿದ ಮದ್ಯ ಮತ್ತು ವಾಹನದ ಮೌಲ್ಯ 78,240 ರೂಪಾಯಿ ಎಂದು ಅಂದಾಜಿಸಲಾಗಿದೆ. ಅಬಕಾರಿ ಉಪ ಅಧೀಕ್ಷಕ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಅಬಕಾರಿ ಉಪ ನಿರೀಕ್ಷಕ ಮಂಜುನಾಥ ಜೋಗಳೇಕರ, ಸಿಬ್ಬಂದಿ ದ್ರುವರಾಜ ಬ್ಯಾಹಟ್ಟಿ, ಸಿ.ಪಿ.ರಾಠೋಡ, ಮಹಾಂತೇಶ ಹೊಣ್ಣೂರ, ಪ್ರಸನ್ನ ನೇತ್ರಕರ ತಪಾಸಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.