Site icon Vistara News

Uttarakhand Trekking Tragedy: ಚಾರಣಿಗರ ಮೃತದೇಹಗಳು ಬೆಂಗಳೂರಿಗೆ, ಸಾವಿನ ಕಣಿವೆಯಿಂದ ಹಿಂದಿರುಗಿದವರ ನಿಟ್ಟುಸಿರು

uttarakhand trekking tragedy 2

ಬೆಂಗಳೂರು: ಉತ್ತರಾಖಂಡದ (Uttarakhand) ಸಹಸ್ತ್ರತಾಲ್‌ ಶಿಖರದ (Sahstra Tal Summit) ಬಳಿ ಹಿಮಬಿರುಗಾಳಿಗೆ (Blizzard) ಸಿಕ್ಕಿ ಮೃತಪಟ್ಟ (Trekking Tragedy) 9 ಮಂದಿ ಕರ್ನಾಟಕದ ಚಾರಣಿಗರ (Trekkers) ಮೃತದೇಹಗಳು ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kemepegowda internationa Airport) ಮೂಲಕ ಬೆಂಗಳೂರನ್ನು ತಲುಪಲಿವೆ. ಬದುಕುಳಿದ 13 ಇಂದು ಮುಂಜಾನೆ ಹಿಂದಿರುಗಿದರು.

ಉತ್ತರಾಖಂಡದ ಡೆಹ್ರಾಡೂನ್‌ನಿಂದ ದೇವನಹಳ್ಳಿಯ ಏರ್ಪೋರ್ಟ್‌ಗೆ ರಾತ್ರಿ 8:45ಕ್ಕೆ ಆಗಮಿಸಿದ 6E6136 ಇಂಡಿಗೋ ವಿಮಾನದಲ್ಲಿ 13 ಮಂದಿ ಚಾರಣಿಗರು ಬಂದಿಳಿದರು. ಕಾತರ ಹಾಗೂ ಆತಂಕಗಳಿಂದ ಅವರನ್ನು ಕಾಯುತ್ತಿದ್ದ ಸಂಬಂಧಿಕರು, ಸ್ನೇಹಿತರನ್ನು ಕೂಡಿಕೊಂಡರು. ತಮ್ಮ ಸಹಚಾರಣಿಗರನ್ನು ಕಣ್ಣ ಮುಂದೆಯೇ ಕಳೆದುಕೊಂಡ ದುರ್ಘಟನೆ ಹಾಗೂ ದುರ್ಭರ ಪರಿಸ್ಥಿತಿಯಲ್ಲಿ ಬದುಕುಳಿದ ಶಾಕ್‌ಗೆ ಒಳಗಾಗಿದ್ದ ಚಾರಣಿಗರು ಮೌನವಾಗಿ ಮನೆಗೆ ತೆರಳಿದ್ದು, ಯಾವುದೇ ಹೇಳಿಕೆ ನೀಡಲಿಲ್ಲ.

ಬೆಳಗ್ಗೆ 8:30ರ ಹೊತ್ತಿಗೆ ದೆಹಲಿಯಿಂದ ಬಂದು ಟರ್ಮಿನಲ್ 1ಕ್ಕೆ ತಲುಪಿದ ಇಂಡಿಗೋ 6E 6612 ವಿಮಾನದಲ್ಲಿ ಮೂವರ ಮೃತದೇಹಗಳು ಬಂದಿಳಿದಿವೆ. ಪದ್ಮಿನಿ ಹೆಗ್ಡೆ, ವೆಂಕಟೇಶ್ ಪ್ರಸಾದ್, ಆಶಾ ಸುಧಾಕರ್ ಮೃತದೇಹಗಳು ಮೊದಲ ವಿಮಾನದಲ್ಲಿ ಬಂದಿವೆ.

ಏರ್‌ಪೋರ್ಟ್ ಕಾರ್ಗೋ ಬಳಿ ಈ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಚಿವ ಕೃಷ್ಣ ಬೈರೇಗೌಡ ಹೇಳಿಕೆ ನೀಡಿದ್ದು, “ಈಗಾಗಲೇ ಮೂರು ಮೃತ ದೇಹಗಳು ಬಂದಿವೆ. ಅವುಗಳಿಗೆ ಗೌರವ ನೀಡಿ ಕುಟುಂಬಸ್ತರಿಗೆ ಹಸ್ತಾಂತರಿಸಲಾಗಿದೆ. ಮೃತ ದೇಹಗಳು ಬೆಂಗಳೂರಿಗೆ ತಲುಪಲು ಆಂಬ್ಯುಲೆನ್ಸ್ ವ್ಯವಸ್ಥೆ ಕೂಡ ಮಾಡಲಾಗಿದೆ. 1 ಗಂಟೆಯ ಒಳಗೆ ಎಲ್ಲಾ ಮೃತ ದೇಹಗಳು ಬರಲಿವೆ. ಮೃತದೇಹಗಳನ್ನು ಗೌರವಯುತವಾಗಿ ಕುಟುಂಬಸ್ತರಿಗೆ ಹಸ್ತಾಂತರಿಸಲಾಗುವುದು” ಎಂದು ತಿಳಿಸಿದ್ದಾರೆ.

ಮರಳಿ ಬೆಂಗಳೂರಿಗೆ ಬಂದವರು:

ಸೌಮ್ಯಾ ಕನಲೆ- 36 ವರ್ಷ
ವಿನಯ್ ಎಂಕೆ, 49 ವರ್ಷ
ಶಿವಜ್ಯೋತಿ- 46 ವರ್ಷ
ಸುಧಾಕರ್‌, 64 ವರ್ಷ
ಸ್ಮೃತಿ, 41 ವರ್ಷ
ಶೀನಾ ಲಕ್ಷ್ಮಿ, 48 ವರ್ಷ
ಮಧುಕಿರಣ್ ರೆಡ್ಡಿ- 52 ವರ್ಷ
ಜಯಪ್ರಕಾಶ್- 61 ವರ್ಷ
ಭರತ್- 53 ವರ್ಷ
ಅನಿಲ್ ಭಟ್ಟ್- 52 ವರ್ಷ
ವಿವೇಕ್ ಶ್ರೀಧರ್- 42 ವರ್ಷ
ರಿತಿಕ್ ಜಿಂದಾಲ್
ನವೀನ್ ಎ.

ಮೃತ ಚಾರಣಿಗರ ವಿವರಗಳು:

1) ಪದ್ಮಿನಿ ಹೆಗಡೆ
2) ವೆಂಕಟೇಶ್ ಪ್ರಸಾದ್
3) ಆಶಾ ಸುಧಾಕರ್
4) ಪದ್ಮನಾಭ್ ಕುಂದಾಪುರ ಕೃಷ್ಣಮೂರ್ತಿ
5) ಸಿಂಧು ವಾಕೆಕಲಂ
6) ಸುಜಾತ ಮುಂಗುರವಾಡಿ
7) ವಿನಾಯಕ್ ಮುಂಗುರವಾಡಿ
8) ಚಿತ್ರ ಪಾರ್ಟನಿಟ್
9) ಅನಿತಾ ರಂಗಪ್ಪ

ಇದನ್ನೂ ಓದಿ: Trekking Tragedy: ಉತ್ತರಾಖಂಡ ಚಾರಣ ದುರಂತದಲ್ಲಿ ಪಾರಾದ 13 ಚಾರಣಿಗರು ಬೆಂಗಳೂರಿಗೆ ವಾಪಸ್

Exit mobile version