Site icon Vistara News

Valentines day 2023 : ಇದು ಬ್ಲ್ಯಾಕ್‌ ಡೇ; ವ್ಯಾಲೆಂಟೈನ್ಸ್‌ ಡೇ ವಿರುದ್ಧ ಹಿಂದೂ ಸಂಘಟನೆಗಳಿಂದ ಕಾಲೇಜುಗಳಲ್ಲಿ ಅಭಿಯಾನ

Valentines day

#image_title

ಬೆಂಗಳೂರು: ಪ್ರೇಮಿಗಳ ದಿನಾಚರಣೆ (Valentines day 2023) ವಿರುದ್ಧ ಹಿಂದೂ ಸಂಘಟನೆಗಳಿಂದ ಮಂಗಳವಾರ ಜಾಗೃತಿ ಅಭಿಯಾನ ನಡೆಯಿತು. ʻʻವ್ಯಾಲೆಂಟೆನ್ಸ್ ಡೇ ಬೇಡವೇ ಬೇಡ, ಇಂದು ನಮಗೆ ಬ್ಲ್ಯಾಕ್ ಡೇʼʼ ಎಂದು ಸಂಘಟನೆಗಳ ಸದಸ್ಯರು ಕಾಲೇಜುಗಳಲ್ಲಿ ಅಭಿಯಾನ ನಡೆಸಿದರು.

ಹಿಂದೂ ಜನ ಜಾಗೃತಿ ಸಂಘಟನೆಯ ಸದಸ್ಯರು, ನಗರದ ಅನೇಕ ಕಾಲೇಜಿಗಳಿಗೆ ಭೇಟಿ ನೀಡಿ ಭಿತ್ತಿ ಪತ್ರ ಹಂಚುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರಲ್ಲದೆ, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಆಡಳಿತ ಮಂಡಳಿಗಳಿಗೆ ವ್ಯಾಲೆಂಟೆನ್ಸ್ ಡೇಗೆ ಅವಕಾಶ ನೀಡದಂತೆ ಮನವಿ ಮಾಡಿದರು.

ವಿದ್ಯಾರ್ಥಿಗಳಿಗೆ ಪ್ರೇಮಿಗಳ ದಿನಾಚರಣೆ ವಿರುದ್ಧ ಜಾಗೃತಿ

ಇದು ಪುಲ್ವಾಮಾ ದಾಳಿ ದಿನ, ಸಂಭ್ರಮಿಸುವುದು ಬೇಡ

ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿ ಮೋಹನ್ ಗೌಡ ಅವರು, ʻವ್ಯಾಲೆಂಟೈನ್ಸ್ ಡೇ ನಮ್ಮ ಸಂಸ್ಕೃತಿ ಅಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯನ್ನ ನಾವು ವಿರೋಧಿಸಬೇಕಿದೆ. ರೋಮನ್ ಕ್ಯಾಥೋಲಿಕ್ ಚರ್ಚ್ ಈ ದಿನವನ್ನು ಕ್ಯಾಲೆಂಡರ್‌ನಿಂದ ತೆಗೆದಿದೆ. ಆದರೆ ನಮ್ಮಲ್ಲಿ ಇನ್ನೂ ಹಲವರು ಈ ದಿನವನ್ನು ಇನ್ನೂ ಆಚರಣೆ ಮಾಡುತ್ತಾ ಇದ್ದಾರೆʼʼ ಎಂದರು.

ʻʻಈ ದಿನ ನಮಗೆ ಬ್ಲ್ಯಾಕ್ ಡೇ. ೨೦೧೯ರ ಫೆ. ೧೪ರಂದು ಪುಲ್ವಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ನಮ್ಮ ೪೦ ಸೈನಿಕರು ಹುತಾತ್ಮರಾದ ದಿನ. ಇಂತಹ ದಿನವನ್ನು ಸಂಭ್ರಮವಾಗಿ ಆಚರಿಸುವುದು ಸರಿಯಲ್ಲ. ಹೀಗಾಗಿ ಕೇವಲ ಕಾಲೇಜುಗಳು ಮಾತ್ರ ಅಲ್ಲ ಸಾರ್ವಜನಿಕ ಸ್ಥಳಗಳಲ್ಲೂ ಜಾಗೃತಿ ಮೂಡಿಸಲಿದ್ದೇವೆʼʼ ಎಂದರು.

ಉಡುಪಿಯಲ್ಲಿ ಗೋವುಗಳನ್ನು ಅಪ್ಪಿಕೊಂಡು, ಮುದ್ದಿಸಿ, ಪೂಜಿಸಿ ಪ್ರೇಮಿಗಳ ದಿನ ಆಚರಣೆ

ಉಡುಪಿ: ಫೆಬ್ರವರಿ ೧೪ರ ಪ್ರೇಮಿಗಳ ದಿನಾಚರಣೆಯನ್ನು (Valentines day 2023) ದೇವರ ಸಮಾನವಾದ ಗೋವುಗಳನ್ನು ಅಪ್ಪಿಕೊಂಡು ಆಚರಿಸಿ ಎಂದು ಪ್ರಾಣಿ ಕಲ್ಯಾಣ ಮಂಡಳಿ ಸಲಹೆ ನೀಡಿತ್ತು. ಇದನ್ನು ಕೇಂದ್ರ ಸರಕಾರ ಅನುಮೋದಿಸಿತ್ತು. ಮುಂದೆ ಆಕ್ಷೇಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಸೂಚನೆ ರೂಪದ ಸಲಹೆಯನ್ನು ಹಿಂಪಡೆಯಲಾಗಿತ್ತು. ಆದರೂ ಈ ಸಲಹೆಯನ್ನು ಕೆಲವು ಕಡೆ ಸ್ವೀಕರಿಸಿದ್ದಲ್ಲದೆ, ಇದೇ ಉತ್ತಮ ಪದ್ಧತಿ ಎಂಬಂತೆ ಆಚರಿಸಲು ಮುಂದಾಗಿದ್ದಾರೆ.

ಕೃಷ್ಣನ ನಾಡಾದ ಉಡುಪಿಯಲ್ಲಿ ಈ ಪ್ರೇಮಿಗಳ ದಿನವನ್ನು ಗೋ ಅಪ್ಪುಗೆಯ ಮೂಲಕ ಆಚರಿಸಲಾಯಿತು. ಮಣಿಪಾಲದ ಶಿವಪಾಡಿ ದೇವಸ್ಥಾನದಲ್ಲಿ ಗೋ ಆಲಿಂಗನದ ವಿಶಿಷ್ಟ ಆಚರಣೆ ಮೂಲಕ ವ್ಯಾಲೆಂಟೈನ್ಸ್ ಡೇಯನ್ನು ಸಂಭ್ರಮಿಸಲಾಯಿತು.

ಗೋವುಗಳಿಗೆ ಪ್ರೀತಿ ತೋರುವ ಮೂಲಕ ಪ್ರೇಮಿಗಳ ದಿನ ಆಚರಣೆ

ಮಣಿಪಾಲದ ಉಮಾಮಹೇಶ್ವರ ದೇವಸ್ಥಾನಕ್ಕೆ ಕೆಲವು ಗೋವು ಮತ್ತು ಕರುಗಳನ್ನು ಕರೆ ತರಲಾಗಿತ್ತು. ಅಲ್ಲಿ ಗೋ ಆಲಿಂಗನ ಮಾಡಿ ಬಳಿಕ ಗೋಪೂಜೆಯನ್ನು ನೆರವೇರಿಸಲಾಯಿತು.

ಇದನ್ನೂ ಓದಿ : Valentine’s Day: ಪ್ರೇಮಿಗಳ ದಿನಾಚರಣೆಗೆ ವಿರೋಧ; ಶ್ವಾನಗಳಿಗೆ ಬಟ್ಟೆ ತೊಡಿಸಿ, ಹಾರ ಹಾಕಿ ಮದುವೆ ಮಾಡಿಸಿದ ಹಿಂದು ಸಂಘಟನೆ

Exit mobile version