Site icon Vistara News

Valentines day 2023 : ಉಡುಪಿಯಲ್ಲಿ ಗೋವುಗಳನ್ನು ಅಪ್ಪಿಕೊಂಡು, ಮುದ್ದಿಸಿ, ಪೂಜಿಸಿ ಪ್ರೇಮಿಗಳ ದಿನ ಆಚರಣೆ

Hugging cows valentines day

#image_title

ಉಡುಪಿ: ಫೆಬ್ರವರಿ ೧೪ರ ಪ್ರೇಮಿಗಳ ದಿನಾಚರಣೆಯನ್ನು (Valentines day 2023) ದೇವರ ಸಮಾನವಾದ ಗೋವುಗಳನ್ನು ಅಪ್ಪಿಕೊಂಡು ಆಚರಿಸಿ ಎಂದು ಪ್ರಾಣಿ ಕಲ್ಯಾಣ ಮಂಡಳಿ ಸಲಹೆ ನೀಡಿತ್ತು. ಇದನ್ನು ಕೇಂದ್ರ ಸರಕಾರ ಅನುಮೋದಿಸಿತ್ತು. ಮುಂದೆ ಆಕ್ಷೇಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಸೂಚನೆ ರೂಪದ ಸಲಹೆಯನ್ನು ಹಿಂಪಡೆಯಲಾಗಿತ್ತು. ಆದರೂ ಈ ಸಲಹೆಯನ್ನು ಕೆಲವು ಕಡೆ ಸ್ವೀಕರಿಸಿದ್ದಲ್ಲದೆ, ಇದೇ ಉತ್ತಮ ಪದ್ಧತಿ ಎಂಬಂತೆ ಆಚರಿಸಲು ಮುಂದಾಗಿದ್ದಾರೆ.

ಕೃಷ್ಣನ ನಾಡಾದ ಉಡುಪಿಯಲ್ಲಿ ಈ ಪ್ರೇಮಿಗಳ ದಿನವನ್ನು ಗೋ ಅಪ್ಪುಗೆಯ ಮೂಲಕ ಆಚರಿಸಲಾಯಿತು. ಮಣಿಪಾಲದ ಶಿವಪಾಡಿ ದೇವಸ್ಥಾನದಲ್ಲಿ ಗೋ ಆಲಿಂಗನದ ವಿಶಿಷ್ಟ ಆಚರಣೆ ಮೂಲಕ ವ್ಯಾಲೆಂಟೈನ್ಸ್ ಡೇಯನ್ನು ಸಂಭ್ರಮಿಸಲಾಯಿತು.

ಗೋವುಗಳಿಗೆ ಪ್ರೀತಿ ತೋರುವ ಮೂಲಕ ಪ್ರೇಮಿಗಳ ದಿನ ಆಚರಣೆ

ಮಣಿಪಾಲದ ಉಮಾಮಹೇಶ್ವರ ದೇವಸ್ಥಾನಕ್ಕೆ ಕೆಲವು ಗೋವು ಮತ್ತು ಕರುಗಳನ್ನು ಕರೆ ತರಲಾಗಿತ್ತು. ಅಲ್ಲಿ ಗೋ ಆಲಿಂಗನ ಮಾಡಿ ಬಳಿಕ ಗೋಪೂಜೆಯನ್ನು ನೆರವೇರಿಸಲಾಯಿತು.

ಇದೇ ಸಂಪ್ರದಾಯ ಮುಂದುವರಿಯಲಿ ಎಂದ ಭಕ್ತರು

ʻʻಪ್ರೇಮಿಗಳ ದಿನ ಒಂದು ಪಾಶ್ಚಾತ್ಯ ವಿಕೃತಿ. ಇದರ ಹಿನ್ನೆಲೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಭಾರತದಲ್ಲಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಚರಿಸುತ್ತಾರೆ. ಕೇಂದ್ರ ಸರಕಾರ ಗೋ ಆಲಿಂಗನ ದಿನ ಆಚರಿಸಲು ಚಿಂತನೆ ನಡೆಸಿತ್ತು. ಮುಂದಿನ ದಿನಗಳಲ್ಲಿ ಇದು ಅಧಿಕೃತವಾಗಿ ಪ್ರಾರಂಭವಾಗಲಿʼʼ ಎಂದು ಭಕ್ತರು ಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್ ತಾಯಿ ಸರಸ್ವತಿ ಬಾರಿತ್ತಾಯ ಕೂಡಾ ಭಾಗಿಯಾಗಿದ್ದರು. ದೇವಸ್ಥಾನದ ಮುಖ್ಯಸ್ಥ ಮಹೇಶ್ವರಿ ನೇತೃತ್ವದಲ್ಲಿ ಗೋ ಆಲಿಂಗನ ದಿನ ಆಚರಿಸಲಾಗಿದೆ.

ಇದನ್ನೂ ಓದಿ : Valentine Day: ಅನೈತಿಕತೆ ಹೆಚ್ಚಿಸುವ ಪಾಶ್ಚಾತ್ಯ ದಿನ ಬೇಕೋ, ನೈತಿಕತೆ ಹೆಚ್ಚಿಸುವ ಭಾರತೀಯ ದಿನ ಬೇಕೋ?

Exit mobile version