ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲ ಕ್ಷೇತ್ರದಲ್ಲಿ ಏಕಕಾಲದಲ್ಲಿ ನೂರು ವೀಣಾವಾದಕರಿಂದ ವೀಣೆವಾದನ ಮಾಡಿರುವುದು ಗಮನ ಸೆಳೆದಿದೆ.
ಉಚ್ಚಿಲ ಮಹಾಲಕ್ಷ್ಮೀ ದೇವಾಲಯದಲ್ಲಿ ಇದೇ ಮೊದಲ ಬಾರಿಗೆ ಉಚ್ಚಿಲ ದಸರಾ ಆಯೋಜನೆ ಮಾಡಲಾಗಿದೆ. ನವರಾತ್ರಿ ಹಿನ್ನೆಲೆಯಲ್ಲಿ ಶುಕ್ರವಾರ ಶತವೀಣಾವಲ್ಲರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ವಾನ್ ಪವನ ಬಿ ಆಚಾರ್ ತಂಡದ ನೂರು ಕಲಾವಿದರಿಂದ ವೀಣಾವಾದನ ಮಾಡಲಾಯಿತು. ಒಂದು ಗಂಟೆಗಳ ಕಾಲ ನಡೆದ ವೀಣಾವಾದನ ನೋಡುಗರ ಕಣ್ಮನ ಸೆಳೆಯಿತು.
ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ಕರುಣೆಯೇ ಎದೆಯೊಳಗೆ ತುಂಬಿಕೊಂಡ ಮಮತಾಮಯಿ ಮಾತೆ ಕೌಸಲ್ಯಾದೇವಿ