ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಅಯೋಧ್ಯಾ ರಾಮ ಮಂದಿರದ (Ayodhya Rama Mandira) ಗರ್ಭಗುಡಿಗೆ ಬಿಡಬಾರದಿತ್ತು ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ (Former CM Veerappa Moily) ಅವರು ವಿವಾದಕ್ಕೆ ಒಳಗಾಗಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ನಿಜವಾದ ಬ್ರಾಹ್ಮಣರು-ಸ್ವಾಮೀಜಿಗಳು ಆಗಿದ್ದರೆ ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಮತ್ತು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಗರ್ಭಗುಡಿಗೆ ಬಿಡಬಾರದಿತ್ತು ಎಂದು ಹೇಳಿದರು.
ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡದ ವೇಳೆ ಅಂದಿನ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ರಾಜಧರ್ಮ, ಕಾನೂನು ಪರಿಪಾಲನೆ ಮಾಡಲಿಲ್ಲ. ಅಂತಹ ನರೇಂದ್ರ ಮೋದಿಯವರಿಂದ ರಾಮಲಲ್ಲಾ ಪ್ರತಿಷ್ಠಾಪನೆ ಮಾಡಿಸಿದ್ದು ಎಷ್ಟು ಸರಿ..? ಅವರಿಂದ ದೇವಾಲಯಕ್ಕೆ ಎಷ್ಟು ಪಾವಿತ್ರತ್ಯತೆ ಬರಲಿದೆ ಎಂದು ವೀರಪ್ಪ ಮೊಯ್ಲಿ ಹೇಳಿದರು.
ಇದನ್ನೂ ಓದಿ: Rama Mandir : ಜೈ ಶ್ರೀರಾಮ್ ಘೋಷಣೆಯಲ್ಲಿ ತಪ್ಪೇನಿದೆ; ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಕಾಂಗ್ರೆಸ್
ಮೋದಿ ಉಪವಾಸದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮೊಯ್ಲಿ
ಇವೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು 11 ದಿನಗಳ ಕಾಲ ಕಠಿಣ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ ಎಂಬ ಬಗ್ಗೆಯೂ ಸಂಶಯ ವ್ಯಕ್ತಪಡಿಸಿದರು. ವೈದ್ಯರ ಪ್ರಕಾರ ಮೋದಿ ಹೇಳಿಕೊಂಡ ರೀತಿಯಲ್ಲಿ ಉಪವಾಸ ಮಾಡಿದರೆ ಎರಡು ದಿನವೂ ಓಡಾಡಲಾರ. ಹಾಗಿರುವಾಗ ಮೋದಿ ಅಷ್ಟು ದಿನ ಓಡಾಡಲು ಹೇಗೆ ಸಾಧ್ಯವಾಯಿತು?
ಒಂದು ವೇಳೆ ಅವರು ಅಷ್ಟು ಕಠಿಣವಾಗಿ ನಿಯಮಗಳನ್ನು ಪಾಲಿಸದೆ ಇದ್ದರೆ ಅವರು ಪ್ರಾಣಪ್ರತಿಷ್ಠೆ ಮಾಡಲು ಹೇಗೆ ಅರ್ಹರಾಗುತ್ತಾರೆ. ಎಂದು ಮೊಯ್ಲಿ ಅವರು ಪ್ರಶ್ನೆ ಮಾಡಿದರು. ಉಪವಾಸ ಮಾಡದೇ ಗರ್ಭಗುಡಿಗೆ ಹೋಗಿದ್ದರೆ ಅಪವಿತ್ರವಾಗುತ್ತದೆ, ಗರ್ಭಗುಡಿಗೆ ಹೋಗಿ ಪೂಜೆ ಮಾಡಿದ್ದರೆ ಆ ಸ್ಥಳ ಅಪವಿತ್ರವಾಗುತ್ತದೆ. ಅಪವಿತ್ರವಾಗಿ ಆ ಸ್ಥಳದಲ್ಲಿ ಯಾವುದೇ ಶಕ್ತಿ ಇರಲ್ಲ ಎಂದೂ ಮೊಯ್ಲಿ ಹೇಳಿದರು.
ರಾಮ ಮಂದಿರ ಅಪೂರ್ಣ ಮಂದಿರ. ಅಪೂರ್ಣ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ಸರಿಯಲ್ಲ. ಆದರೆ, ಕೇವಲ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಮಾಡಿದರೆ ಸಾಲದು. ಅಲ್ಲಿ ರಾಮ ಲಕ್ಷಣ, ಸೀತಾ ಹಾಗೂ ಆಂಜನೇಯನ ವಿಗ್ರಹಗಳು ಇರಬೇಕು. ಆಗಲೇ ರಾಮಮಂದಿರ ಪೂರ್ಣ ಆಗೋದು ಎಂದು ವೀರಪ್ಪ ಮೊಯ್ಲಿ ಅವರು ಹೇಳಿದರು.