ಬೆಂಗಳೂರು: ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲಿ ಹೆಚ್ಚಿನ ಟಿಕೆಟ್ ನೀಡುವಂತೆ ವೀರಶೈವ ಲಿಂಗಾಯತ ನಾಯಕರು ಒತ್ತಾಯ ಮುಂದುವರಿಸಿದ್ದಾರೆ. ಎರಡನೇ ಪಟ್ಟಿಯಲ್ಲಿ 33 ವೀರಶೈವ ಲಿಂಗಾಯತರಿಗೆ ಅವಕಾಶ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರನ್ನು ಒತ್ತಾಯ ಮಾಡಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಒಬ್ಬರಿಗೂ ಟಿಕೆಟ್ ನೀಡಿಲ್ಲ ಎಂದು ಈಗಾಗಲೆ ಸಮುದಾಯದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ರಾಜಾಜಿನಗರದಲ್ಲಿ ವೀರಶೈವ ಲಿಂಗಾಯತರ ಬದಲಿಗೆ ಒಕ್ಕಲಿಗರಾದ, ಅದರಲ್ಲೂ ಬಿಜೆಪಿಯಿಂದ ಆಗಮಿಸಿದ ಪುಟ್ಟಣ್ಣ ಅವರಿಗೆ ಟಿಕೆಟ್ ಘೊಷಣೆ ಮಾಡಲಾಗಿದೆ. ಈ ಹಿಂದಿನ ಕಾರಣಗಳಿಗಾಗಿ ಸಮುದಾಯದವರು ಕಾಂಗ್ರೆಸ್ ಕುರಿತು ಮುನಿಸಿಕೊಂಡಿದ್ದು, ಹೀಗೆ ಮಾಡಿದರೆ ಮತ್ತಷ್ಟು ಸಮಸ್ಯೆ ಆಗುತ್ತದೆ ಎಂದು ನಾಯಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಗೆಲ್ಲುವ ವಾತಾವರಣ ಇರುವ ಕಡೆ ಸಮುದಾಯಕ್ಕೆ ಟಿಕೆಟ್ ಕೊಡಿ ಎಂದು ಖಂಡ್ರೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಚುನಾವಣೆಯಲ್ಲಿ ಜಾತಿ ಸಮೀಕರಣ ಮಾಡಬೇಕಾಗಿರುತ್ತದೆ. ಇದರ ನಡುವೆಯೂ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ ಎಂದು ನಾಯಕರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Veerashaiva Lingayath: ಕಾಂಗ್ರೆಸ್‌ನಲ್ಲಿ 50-55 ವೀರಶೈವ ಲಿಂಗಾಯತರಿಗೆ ಟಿಕೆಟ್: ಶ್ಯಾಮನೂರು ಶಿವಶಂಕರಪ್ಪ