Site icon Vistara News

Road Accident: ದಸರಾ ಆನೆ ಹೊತ್ತು ಸಾಗುತ್ತಿದ್ದ ವಾಹನ ಹರಿದು ಚಾಲಕ ಸಾವು

Road Accident

ಆನೇಕಲ್: ದಸರಾ ಆನೆ ಇದ್ದ ವಾಹನ ಅಪಘಾತಕ್ಕೀಡಾಗಿ, ಚಾಲಕ ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿರುವ ಘಟನೆ (Road Accident) ಬೆಂಗಳೂರು- ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನ ಇಳಿಜಾರಿನಲ್ಲಿ ಏಕಾಏಕಿ ಮುಂದೆ ಸಾಗಿದ್ದು, ಅದನ್ನು ನಿಲ್ಲಿಸಲು ಹೋದಾಗ ವಾಹನದಡಿ ಸಿಲುಕಿ ಚಾಲಕ ಮೃತಪಟ್ಟಿದ್ದಾನೆ.

ಆರೋಗ್ಯ ಸ್ವಾಮಿ (45) ಮೃತ ಚಾಲಕ. ಬನ್ನೇರುಘಟ್ಟದ ಶ್ರೀ ಚಂಪಕಧಾಮ ಸ್ವಾಮಿ ಅಂಬಾರಿ ಉತ್ಸವಕ್ಕಾಗಿ ತಮಿಳುನಾಡಿನ ತಿರುಚ್ಚಿಯಿಂದ ಆನೆಯನ್ನು ಕರೆತರಲಾಗಿತ್ತು. ಮಂಗಳವಾರ ರಾತ್ರಿ ಉತ್ಸವ ಮುಗಿದ ಬಳಿಕ ಆನೆಯನ್ನು ಐಷರ್‌ ವಾಹನದಲ್ಲಿ ವಾಪಸ್ ಕರೆದೊಯ್ಯಲಾಗುತ್ತಿತ್ತು. ಬೆಂಗಳೂರು- ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಾನಮಾವು ಸಮೀಪ ವಾಹನ ಅಪಘಾತಕ್ಕೀಡಾಗಿದ್ದು, ಈ ವೇಳೆ ಚಾಲಕ ಮೃತಪಟ್ಟಿದ್ದಾನೆ. ಆನೆ ಪ್ರಾಣಾಪಾಯದಿಂದ ಪಾರಾಗಿದೆ.

ಆನೆಯನ್ನು ಕರೆದೊಯ್ಯುತ್ತಿದ್ದ ಐಷರ್‌ ವಾಹನದಲ್ಲಿ ಆರು ಮಂದಿ ಇದ್ದರು. ಸಾನಮಾವು ಬಳಿ ಮೂತ್ರ ವಿಸರ್ಜನೆಗೆಂದು ಚಾಲಕ ವಾಹನ ನಿಲ್ಲಿಸಿದ್ದ. ಇಳಿಜಾರಿನಲ್ಲಿ ಅರಣ್ಯ ಪ್ರದೇಶದ ಒಳಗೆ ಏಕಾಏಕಿ ವಾಹನ ಚಲಿಸಿದೆ. ಅದನ್ನು ನಿಲ್ಲಿಸಲು ಮುಂದಾದಾಗ ವಾಹನದಡಿ ಸಿಲುಕಿ ಚಾಲಕ ಮೃತಪಟ್ಟಿದ್ದಾನೆ.

ಇದನ್ನೂ ಓದಿ | Dead Body Found: ಸ್ನೇಹಿತರ ಜತೆ ಎಣ್ಣೆ ಪಾರ್ಟಿ ಮಾಡಲು ಹೋದವ ಶವವಾಗಿ ಪತ್ತೆ

ಸ್ಥಳಕ್ಕೆ ಹೊಸೂರಿನ ಅಡ್ಕೋ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕ್ರೇನ್ ಹಾಗೂ ಜೆಸಿಬಿ ಮೂಲಕ ಆನೆ ಇದ್ದ ವಾಹನವನ್ನು ಸಿಬ್ಬಂದಿ ಹೊರತೆಗೆದಿದ್ದಾರೆ. ಚಾಲಕ ಆರೋಗ್ಯ ಸ್ವಾಮಿಯ ಮೃತದೇಹವನ್ನು ಹೊಸೂರಿನ‌ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ | Tiger Nail : ಹುಲಿ ಉಗುರು ಪತ್ತೆಯಾದರೆ ಏನು ಮಾಡೋಣ? ಶಿಫಾರಸು ಮಾಡಲು ಸಮಿತಿ ರಚನೆ

ನೀರು ತುಂಬಲು ಕೆರೆಗೆ ಹೋಗಿದ್ದ ಬಾಲಕಿ ಕಾಲು ಜಾರಿ ಬಿದ್ದು ಸಾವು, ಸಿಡಿದ ಜನರು

ಗದಗ: ಕೆರೆಗೆ ನೀರು ತುಂಬಲು ಹೋಗಿದ್ದ ಬಾಲಕಿಯೊಬ್ಬಳು ಕಾಲು ಜಾರಿ ಮುಳುಗಿ ಸಾವನ್ನಪ್ಪಿದ ಘಟನೆ (Girl death) ಗದಗ ತಾಲೂಕಿನ (Gadaga News) ಬಳಗಾನೂರು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಕುಟುಂಬವೊಂದಕ್ಕೆ ಸೇರಿದ ಭುವನೇಶ್ವರಿ ಛಟ್ರಿ (12) ಮೃತ ಬಾಲಕಿ.

ಆಕೆ ಮನೆಯಿಂದ ನೀರು ತರಲೆಂದು ಕೆರೆ ಬಳಿ ಹೋಗಿದ್ದಳು. ಆದರೆ ಅಲ್ಲಿ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ. ಇದೀಗ ಜನರ ಸಿಟ್ಟು ಸ್ಥಳೀಯ ಆಡಳಿತದ ಮೇಲೆ ತಿರುಗಿದೆ. ಅವರು ಗ್ರಾಮ ಪಂಚಾಯಿತಿ ಮುಂದೆ ಬಾಲಕಿ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ಕೆರೆಗೆ ಯಾವುದೇ ರೀತಿಯ ಬೇಲಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಕಿಯ ಸಾವಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಯೇ ಕಾರಣ ಎನ್ನುವುದು ಜನರ ಆರೋಪ. ಈ ಕೆರೆಗೆ ಯಾವುದೇ ರೀತಿಯ ಭದ್ರತಾ ವ್ಯವಸ್ಥೆ ಮಾಡಲಾಗಿಲ್ಲ. ಕೆರೆ ಸುತ್ತ ಸಂಪೂರ್ಣವಾಗಿ ತಂತಿ ಬೇಲಿ ನಿರ್ಮಿಸಿಲ್ಲ, ಕೆರೆಗೆ ಇಳಿಲು ಮೆಟ್ಟಿಲು ನಿರ್ಮಾಣ ಮಾಡಿಲ್ಲ. ಇದರಿಂದಾಗಿಯೇ ಆಕೆಯ ಸಾವು ಸಂಭವಿಸಿದೆ. ಹೀಗಾಗಿ ದುರ್ಘಟನೆಗೆ ಪಂಚಾಯಿತಿ ಸಿಬ್ಬಂದಿ ನೇರ ಹೊಣೆ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ | Newborn Baby: ಬೆಂಗಳೂರಿನ ನಾಗವಾರಪಾಳ್ಯದಲ್ಲಿ ನವಜಾತ ಶಿಶು ಪತ್ತೆ

ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ನ್ಯಾಯ ಒದಗಿಸಬೇಕು, ಮೃತ ಬಾಲಕಿ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಗದಗ ಗ್ರಾಮೀಣ‌ ಪೊಲೀಸ್ ಠಾಣೆ‌ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version