ಬೆಂಗಳೂರು: ವಿದೇಶಿ ಯೂಟ್ಯೂಬರ್ (Youtuber) ಚಿಕ್ಕಪೇಟೆಯಲ್ಲಿ ವ್ಲಾಗ್ (Chikpet) ಮಾಡುತ್ತಿದ್ದಾಗ, ಸ್ಥಳೀಯ ವ್ಯಾಪಾರಿಯೊಬ್ಬ ಹಲ್ಲೆ ಮಾಡಿ ಕಿರುಕುಳ (Assault case) ನೀಡಿರುವ ಘಟನೆ ನಡೆದಿತ್ತು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Video viral) ಆಗುತ್ತಿದ್ದಂತೆ, ಹಲವರು ಈ ಕೃತ್ಯವನ್ನು ಖಂಡಿಸಿದ್ದರು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಅರ್ಧ ಗಂಟೆಯಲ್ಲೇ ಆರೋಪಿಯನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ನವಾಬ್ ಬಂಧಿತ ಆರೋಪಿಯಾಗಿದ್ದಾನೆ.
ನೆದರ್ ಲ್ಯಾಂಡ್‌ನ ಪ್ರಜೆಯಾಗಿರುವ ಪೆಡ್ರೋಮೊಟಾ ಎಂಬಾತ ಚಿಕ್ಕಪೇಟೆಯಲ್ಲಿ ನಡೆಯುವ ಸಂಡೇ ಬಜಾರ್‌ಗೆ ಬಂದಿದ್ದರು. ಯೂಟ್ಯೂಬರ್ ಆಗಿರುವ ಕಾರಣ ತಮ್ಮ ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಂಡು ವ್ಲಾಗ್ ಮಾಡುತ್ತಿದ್ದರು. ಈ ದೊಡ್ಡ ಬಜಾರ್‌ನಲ್ಲಿ ಏನಾದರೂ ಖರೀದಿಸಬೇಕೆಂದು ಮಾತಾಡಿಕೊಂಡು ಬರುತ್ತಿದ್ದರು. ಈ ವೇಳೆ ಏಕಾಏಕಿ ನವಾಬ್ ಪೆಡ್ರೋಮೊಟಾನ ಕೈ ಹಿಡಿದು ಅಡ್ಡಗಟ್ಟಿದ್ದಾನೆ.
ಈ ವೇಳೆ ಪೆಡ್ರೋಮೊಟಾ ವಿನಯವಾಗಿಯೇ ʻನಮಸ್ಕಾರʼ ಎಂದಿದ್ದಾರೆ. ಆದರೆ ನವಾಬ್ ಏನು ನಮಸ್ಕಾರ? ಯಾಕಾಗಿ ವಿಡಿಯೊ ಮಾಡುತ್ತಿದ್ದೀಯಾ ಎಂದು ಏಕವಚನದಲ್ಲಿ ಮಾತಾಡಿ, ಮೊಬೈಲ್ ಕಸಿಯಲು ಮುಂದಾಗಿದ್ದಾನೆ. ಆಗ ಪೆಡ್ರೋಮೊಟಾ ಕೈ ಬಿಡಿಸಿಕೊಂಡು ಓಡಲು ಯತ್ನಿಸಿದ್ದಾರೆ. ಆದರೂ ಬಿಡದೆ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಈ ವೇಳೆ ವಿದೇಶಿ ಯೂಟ್ಯೂಬರ್ ಅವರಿಂದ ತಪ್ಪಿಸಿಕೊಂಡು ಪಾರಾಗಿದ್ದಾರೆ.
ಇದನ್ನೂ ಓದಿ: Alamatti Dam: ಆಲಮಟ್ಟಿ ಜಲಾಶಯದ ಒಡಲು ಬರಿದಾಗುವ ಆತಂಕ; ʻಮಹಾʼ ಮಳೆಗೆ ಕಾದುಕುಳಿತ ರೈತ
ಈ ಕೃತ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸ್ಥಳೀಯರು ಈ ಸಂಬಂಧ ಪಶ್ಚಿಮ ವಿಭಾಗದ ಡಿಸಿಪಿ ಗಮನಕ್ಕೆ ತಂದಿದ್ದಾರೆ. ಕೂಡಲೇ ಕಾಟನ್ ಪೇಟೆ ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡು, ಆರೋಪಿ ನವಾಬ್‌ನನ್ನು ಬಂಧಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ