ಮೈಸೂರು: ಚುನಾವಣೆಗೂ ಮೊದಲು ಕಾಂಗ್ರೆಸ್ ಘೋಷಣೆ ಮಾಡಿದ್ದ ಐದು ಗ್ಯಾರಂಟಿಯಲ್ಲಿ (Congress Guarantee) ಮೊದಲಿಗೆ ಜಾರಿಗೆ ಬಂದಿರುವ “ಶಕ್ತಿ” ಯೋಜನೆಗೆ (Shakti Scheme) ರಾಜ್ಯಾದ್ಯಂತ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಉಚಿತ ಬಸ್ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಕೋಟ್ಯಂತರ ಮಹಿಳೆಯರು ಇದರ ಲಾಭ ಪಡೆದಿದ್ದಾರೆ. ಹಾಗೇ ಈ ಶಕ್ತಿ ಯೋಜನೆಯ ಸೈಡ್ ಎಫೆಕ್ಟ್ ಸಹ ಕಾಣಲಾರಂಭಿಸಿದೆ. ನೂಕುನುಗ್ಗಲು, ಗಲಾಟೆಗಳು ಸಹ ನಡೆಯುತ್ತಿವೆ. ಈಗ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ (Chamundi Hill) ಹೋಗುವ ಮಾರ್ಗದಲ್ಲಿ ಹೋಗುವ ಬಸ್‌ನಲ್ಲಿ ಮಹಿಳೆಯರು ಬಡಿದಾಡಿಕೊಂಡಿದ್ದಾರೆ. ಅದೂ ಸೀಟ್‌ಗಾಗಿ ಎಂಬುದು ವಿಪರ್ಯಾಸವಾಗಿದೆ. ಈ ವಿಡಿಯೊ ಈಗ ವೈರಲ್ (Video Viral) ಆಗಿದೆ.
ಹಿಂದಿನ ವಾರಾಂತ್ಯದಲ್ಲಿ ಈ ಘಟನೆ ನಡೆದಿರಬಹುದು ಎಂದು ಹೇಳಲಾಗಿದೆ. ರಾಜ್ಯದ ಯಾವ ಮೂಲೆಗೆ ಹೋದರೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಕೆಲವು ಮಹಿಳೆಯರು ತಾಮುಂದು, ನಾ ಮುಂದು ಎಂಬಂತೆ ಟೂರ್ ಪ್ರಾರಂಭಿಸಿದ್ದಾರೆ. ಈ ನಡುವೆ ಪ್ರವಾಸಿ ತಾಣಗಳು, ಪುಣ್ಯ ಕ್ಷೇತ್ರಗಳಿಗೆ ಭರ್ಜರಿ ಪ್ರಮಾಣದಲ್ಲಿ ಭೇಟಿ ನೀಡುತ್ತಿದ್ದಾರೆ. ಹೀಗೆ ಭೇಟಿ ನೀಡುವ ಸಂದರ್ಭದಲ್ಲಿ ಕೆಲವು ಅವಾಂತರಗಳೂ ನಡೆಯುತ್ತಿವೆ.
ಇದನ್ನೂ ಓದಿ: Viral News: ಶ್ವಾನಕ್ಕೂ ಬಂತು ಗುಂಡಿ ಗಂಡಾಂತರ; ಏಣಿ ಹಾಕಿ ಮೇಲೆತ್ತಿದ ಮಾತೆಯರು
ಮೈಸೂರಿನ ಬಸ್ನಲ್ಲೂ ಶಕ್ತಿ ಪ್ರದರ್ಶನ
ಚಾಮುಂಡಿ ಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯೆಯ ಬಸ್‌ನಲ್ಲಿ ಮಹಿಳೆಯರು ಸೀಟ್ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಸೀಟ್‌ನಲ್ಲಿ ನಾನು ಕೂರುತ್ತೇನೆ. ನಾನು ಈ ಸೀಟನ್ನು ಕಾಯ್ದಿರಿಸಿದ್ದೇನೆ. ನಾನೇ ಮೊದಲು ಇಲ್ಲಿ ಬ್ಯಾಗ್ ಇಟ್ಟಿದ್ದೇನೆ. ಈ ಸೀಟ್ ನಂದೇ.. ಎಂದೆಲ್ಲಾ ಹೇಳಿಕೊಂಡು ಬಡಿದಾಡಿಕೊಂಡಿದ್ದಾರೆ.
ಬಸ್ ಒಳಗೆ ಮಹಿಳೆಯರ ಗಲಾಟೆ ಶುರುವಾಗುತ್ತಿದ್ದಂತೆ ಹಲವು ಮಹಿಳೆಯರು ಒಟ್ಟಾಗಿದ್ದಾರೆ. ಕೆಲವರು ಇವರನ್ನು ತಡೆಯಲು ನೋಡಿದ್ದಾರೆ. ಆದರೆ, ಯಾರೂ ಸಹ ತಮ್ಮ ಪಟ್ಟನ್ನು ಬಿಡಲು ಒಪ್ಪಲಿಲ್ಲ. ಕೊನೆಗೆ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಈ ವೇಳೆ ಸೀರೆ ಜಾರುತ್ತಿದ್ದರೂ ಬಿಡದೆ ಬಡಿದಾಡಿಕೊಂಡಿದ್ದಾರೆ. ಕೊನೆಗೆ ಇದಕ್ಕೆ ಪುರುಷರೂ ಮಧ್ಯ ಪ್ರವೇಶ ಮಾಡಿದ್ದು, ತಡೆಯಲು ನೋಡಿದ್ದಾರೆ. ಅವರನ್ನು ಬದಿಗೊತ್ತಿ ಮಹಿಳೆಯರಿಬ್ಬರು ಕೈ ಕೈ ಮಿಲಾಯಿಸಿಕೊಂಡೇ ಬಿಟ್ಟಿದ್ದಾರೆ.
ಇದನ್ನೂ ಓದಿ: Siddaramaiah: ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದ ಸಚಿವ ವೆಂಕಟೇಶ್; ಮುಗಿಯದ ಕೈ ಕಿತ್ತಾಟ!
ಆ ರಶ್ ಮಧ್ಯೆಯೂ ಅವರು ಜಾಗ ಮಾಡಿಕೊಂಡು ಬಡಿದಾಡಿಕೊಂಡಿದ್ದು, ಕೈ ಕೈಯನ್ನು ಹಿಡಿದು ಜಟ್ಟಿ ಯುದ್ಧದಂತೆ ಕಾಳಗದಲ್ಲಿ ತೊಗಿದ್ದರು. ಇದನ್ನು ಬಸ್‌ನಲ್ಲಿದ್ದ ಕೆಲವರು ವಿಡಿಯೊ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಸಖತ್ ವೈರಲ್ ಆಗಿದೆ.