ವಿಜಯನಗರ : ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ (Amrit Mahotsav) ಐತಿಹಾಸಿಕ ಹಂಪಿ ಸ್ಮಾರಕಗಳಿಗೆ ವಿದ್ಯುತ್ ದೀಪಾಲಂಕಾರ ಸೋಮವಾರ (ಆ.8) ಮಾಡಲಾಗಿದೆ. ವಿಜಯ ವಿಠ್ಠಲ ದೇಗುಲದ ಬಳಿ ಇರುವ ಕಲ್ಲಿನ ತೇರು ಹಾಗೂ ಸಪ್ತ ಸ್ವರ ಮಂಟಪ ಸೇರಿದಂತೆ ವಿವಿಧ ಸ್ಮಾರಕಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ತ್ರಿವರ್ಣ ಧ್ವಜದ ದೀಪಾಲಂಕಾರದಿಂದ ಸ್ಮಾರಕಗಳು ಕಂಗೊಳಿಸುತ್ತಿದ್ದು, ಆಗಸ್ಟ್ 5ರಿಂದ 15ರವರೆಗೆ ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಯ ದೇಗುಲಗಳಿಗೆ ಉಚಿತ ಪ್ರವೇಶ ನೀಡಲಾಗುತ್ತಿದೆ. ತ್ರಿವರ್ಣ ಧ್ವಜ ಕೇಸರಿ, ಬಿಳಿ, ಹಸಿರಿನಿಂದ ದೇವಾಲಯಗಳು ಕಂಗೊಳಿಸುತ್ತಿವೆ.
ಇದನ್ನೂ ಓದಿ | Amrit Mahotsav | ಕತಾರ್‌ನ ಇಂಡಿಯನ್ ಕಲ್ಚರಲ್ ಸೆಂಟರ್‌ನಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ