Site icon Vistara News

ಕಾರಿಗೆ ದಾರಿ ಬಿಡಲಿಲ್ಲವೆಂದು ಎಂಎಲ್‌ಎ ಆಪ್ತನಿಂದ ಮಾರಣಾಂತಿಕ ಹಲ್ಲೆ

assault

ವಿಜಯನಗರ: ಶಾಸಕನ ಆಪ್ತನೊಬ್ಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ವರದಿಯಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಘಟನೆ ನಡೆದಿದೆ.

ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರ ಆಪ್ತನಾಗಿರುವ ಮಲ್ಲಿಕಾರ್ಜುನ ಗೌಡ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಕುರಿತ ಸಿಸಿ ಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ.

ನಾಗರಾಜ್ ನಿರ್ಕಲಪ್ಪನವರ್ ಎಂಬ ಯುವಕ ಹಲ್ಲೆಗೊಳಗಾಗಿದ್ದಾನೆ. ಈತ ಅಮೇಜಾನ್ ಗೋದಾಮಿನಲ್ಲಿ ಸರಕು ಇಳಿಸಲು ಗೂಡ್ಸ್‌ ವಾಹನ ನಿಲ್ಲಿಸಿದ್ದ. ಈ ವೇಳೆ ಅದೇ ರಸ್ತೆಯಲ್ಲಿ ಮಲ್ಲಿಕಾರ್ಜುನ ಗೌಡನ ಕಾರ್ ಬಂದಿದೆ. ಗೂಡ್ಸ್‌ನಲ್ಲಿದ್ದ ಸರಕು ಇಳಿಸುತ್ತಿದ್ದ ನಾಗರಾಜ್, ಸರಕು ಇಳಿಸುವವರೆಗೂ ವಾಹನ ತೆಗೆದಿಲ್ಲ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಯುವಕನಿಗೆ ಮಾರಣಾತಿಂಕ ಹಲ್ಲೆ ನಡೆಸಲಾಗಿದೆ.

ಇದನ್ನೂ ಓದಿ | Bulls Death | ವಿಜಯನಗರದಲ್ಲಿ ಏಕಾಏಕಿ ಕುಸಿದು ಜೀವಬಿಡುತ್ತಿರುವ ಎತ್ತುಗಳು; ದಡಾರ ಕಾಯಿಲೆ ಶಂಕೆ

Exit mobile version