Site icon Vistara News

Basanagowda yatnal : ರಾಹುಲ್‌ ಗಾಂಧಿ ಒಬ್ಬ ಅರೆಹುಚ್ಚ, ಅಂಥವರನ್ನೆಲ್ಲ ಜಿ20ಗೆ ಕರೆಯೋಕೆ ಆಗುತ್ತಾ?; ಯತ್ನಾಳ್‌ ವ್ಯಂಗ್ಯ

Rahul Gandhi Yatnal

ವಿಜಯನಗರ: ʻಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ (Rahul Gandhi) ಒಬ್ಬ ಅರೆ ಹುಚ್ಚ (Half Mad). ಅಂಥವರನ್ನು ಜಿ20ಯಂಥ ಜಾಗತಿಕ (G20 Summit) ನಾಯಕರು ಬರುವ ಕಾರ್ಯಕ್ರಮಕ್ಕೆ ಆಹ್ವಾನ ಮಾಡಲು ಹೇಗೆ ಸಾಧ್ಯ?ʼ ಎಂದು ಪ್ರಶ್ನಿಸಿದ್ದಾರೆ ಬಿಜೆಪಿ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagowda pateel Yatnal).

ಹೊಸಪೇಟೆಗೆ ಆಗಮಿಸಿರುವ ಯತ್ನಾಳ್‌, ದಿಲ್ಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಭೆಗೆ ತನಗೆ ಆಹ್ವಾನವಿಲ್ಲ ಎಂಬ ರಾಹುಲ್‌ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ʻʻಅವನು ದೇಶದ ಹೊರಗೆ ಭಾರತದ ಬಗ್ಗೆ ಅಪಪ್ರಚಾರ ಮಾಡುತ್ತಾನೆ. ಅದೇ ರೀತಿ ಜಗತ್ತಿನ ಗಣ್ಯರ ಎದುರು ನಮ್ಮ ದೇಶ ಅತಂತ್ರ ಆಗಿದೆ ಅಂದ್ರೆ ಪರಿಸ್ಥಿತಿ ಏನಾಗುತ್ತೆ ಹೇಳಿ, ಅದಕ್ಕೇ ಆಹ್ವಾನ ಕೊಟ್ಟಿಲ್ಲʼʼ ಎಂದು ಹೇಳಿದರು.

ಉದಯನಿಧಿ ಏಡ್ಸ್‌ ಹತ್ತಿರೋರ ಥರ ಇದ್ದಾರೆ!

ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಅವಹೇಳನ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್‌, ʻʻಕೆಲವರು ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದ ಹಾಗೆ ಅಂದಿದ್ದಾರೆ. ನಾನು ಹೇಳ್ತೇನೇ ಅಂತ ಹೇಳಿಕೆ ಕೊಟ್ಟವರೇ ಡೆಂಗ್ಯೂ, ಮಲೇರಿಯಾ ಪೀಡಿತರ ಹಾಗೆ ಇದ್ದಾರೆ. ಕೆಲವರು ಏಡ್ಸ್ ಹತ್ತಿದೋರ ತರಹ ಇದ್ದಾರೆʼʼ ಎಂದರು.

ʻʻಮುಲಾಯಂ ಸಿಂಗ್ ಕುಟುಂಬ, ಮಮತಾ ಬ್ಯಾನರ್ಜಿ ಕುಟುಂಬ ಹಂಗೆ ಇದ್ದಾವೆ. ನಮ್ಮ ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಟುಂಬವೂ ಹಂಗೆ ಇದೆʼʼ ಎಂದು ಹೇಳಿದ ಅವರು ಮಲ್ಲಿಕಾರ್ಜುನ ಖರ್ಗೆ ಎಂದಾದರೂ ದಲಿತ ನಾಯಕರನ್ನು ಬೆಳೆಸಲು ನೋಡಿದ್ದಾರಾ? ತಮ್ಮ ಮಗನೇ ಮಂತ್ರಿ ಆಗಲಿ, ನನ್ನ ಮಗ ಅಷ್ಟೇ ಬೆಳೆಯಲಿ ಅಂತಾರೆ. ಇದನ್ನ ದಲಿತ ಸಮಾಜದವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಆಪರೇಷನ್‌ಗಿಂತ ಮೊದಲು ಬಿಜೆಪಿಯಿಂದ ಡೆಲಿವರಿ ಅಂದ ಯತ್ನಾಳ್‌

ಕಾಂಗ್ರೆಸ್ ನಾಯಕರು ಆಪರೇಷನ್‌ ಹಸ್ತ ಅಂತ ಓಡಾಡುತ್ತಿದ್ದಾರೆ. ಅವರು ಒಟ್ಟು 135 ಜನ ಶಾಸಕರಿದಾರೆ. ಐದು ಗ್ಯಾರಂಟಿ ಕೊಟ್ಟಿದ್ದಾರೆ ಕಾಂಗ್ರೆಸ್ ಅಪರೇಷನ್ ಮಾಡುವ ಅವಶ್ಯಕತೆ ಏನಿದೆ?ʼʼ ಎಂದು ಕೇಳಿದರು ಯತ್ನಾಳ್‌.

ʻʻಲೋಕಸಭಾ ಎಲೆಕ್ಷನ್ ಆಗಿ ನಾಲ್ಕು ಕೇವಲ ತಿಂಗಳು ಕಳೆಯಲಿ. ಗೋವಾ, ಮಹಾರಾಷ್ಟ್ರದಲ್ಲಿ ಏನಾಯಿತು ಅನ್ನೋದನ್ನ ನೆನಪಿಸಿಕೊಳ್ಳಿ. ಕಾಂಗ್ರೆಸ್ ನವರು ಆಪರೇಷನ್ ಮಾಡೋದು, ತಾನೇ ಡಿಲಿವರಿ ಆಗುತ್ತದೆ. ಅದೇ ರೀತಿ ಮುಂದೆ ರಾಜ್ಯದಲ್ಲಿ ಆಗಬಹುದುʼʼ ಎಂದು ಬಿಜೆಪಿ ಶಾಸಕ ಬಾಂಬ್ ಹಾಕಿದರು.

ಕಾಂಗ್ರೆಸ್‌ ಸರ್ಕಾರಕ್ಕೆ ಸುರಕ್ಷತೆ ಇಲ್ಲ

ಕಾಂಗ್ರೆಸ್‌ ಸರ್ಕಾರದಲ್ಲಿ 135 ಶಾಸಕರು ಇದ್ದರೂ ಅಭದ್ರತೆಯ ಭಯ ಕಾಡುತ್ತಿದೆ. ಒಂದು ಕಡೆ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್, ಆಳಂದ ಶಾಸಕ ಬಿ.ಆರ್ ಪಾಟೀಲ ನೇರವಾಗಿ ಸರ್ಕಾರದ ವಿರುಧ್ದ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಅಸಮಾಧಾನ ಮರೆಮಾಚಲು ಬಿಜೆಪಿಯ ಸಾಕಷ್ಟು ಜನ ಕಾಂಗ್ರೆಸ್ ಗೆ ಬರ್ತಾರೆ ಅಂತ ಸುದ್ದಿ ಹಬ್ಬಿಸಿದ್ದಾರೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದವರಿಗೆ ಬ್ಲಾಕ್ ಮೇಲ್‌ ಮಾಡಲಾಗುತ್ತಿದೆʼʼ ಎಂದು ಆರೋಪಿಸಿದರು.

ಇದನ್ನೂ ಓದಿ: Basanagowda pateel yatnal : ಕಾಂಗ್ರೆಸ್‌ನಲ್ಲಿ 135 ಶಾಸಕರಿದ್ರೂ ದಮ್‌ ಇಲ್ಲ, ಬಿಜೆಪಿಯವರ ವೀರ್ಯಾಣು ಬೇಕಂತೆ; ಯತ್ನಾಳ್‌ ಹೇಳಿಕೆ

ಕರೆಯದೆಯೇ ಬಿಜೆಪಿ ಶಾಸಕಿಯರ ಮನೆಗೆ ಹೋಗ್ತಿದಾರೆ!

ಕಾಂಗ್ರೆಸ್‌ ನಾಯಕರನ್ನು ಯಾರೂ ತಮ್ಮ ಮನೆಗೆ ಕರೆಯುವುದಿಲ್ಲ. ಆದರೆ, ಯಾರೂ ಕರೆಯದೆ ಇದ್ದರೂ ಅಕ್ಕ ಕರೆದಿದದ್ದಾರೆ, ತಂಗಿ ಕರೆದಿದ್ದಾರೆ ಅಂತ ಕಾಂಗ್ರೆಸಿಗರು ಬಿಜೆಪಿಯ ಶಾಸಕಿಯರ ಮನೆಗೆ ಹೋಗ್ತಿದಾರೆ. ಬಿಜೆಪಿ ಪಾಳಯದಲ್ಲಿ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ವ್ಯಂಗ್ಯವಾಡಿದರು.

Exit mobile version