ವಿಜಯನಗರ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು ಕಂಡುಬಂದಿದೆ. ಈವರೆಗೆ ರೈತರ ಜಮೀನಿಗೆ ದಾಳಿ ನಡೆಸಿ ಬೆಳೆ ನಾಶ ಮಾಡಿದ್ದು ಕಂಡಿತ್ತು ಆದರೆ ಇದೀಗ ಪೆಟ್ರೋಲ್ ಬಂಕ್‌ನಲ್ಲೂ ಕರಡಿ ಕಾಟ ಕಾಣಿಸಿದೆ. ಬೆಳಗಿನ ಜಾವ ಪೆಟರೋಲ್ ಬಂಕ್ ಒಂದರಲ್ಲಿ ಕರಡಿ ಓಡಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೆಲವು ದಿನಗಳಿಂದ ರೈತರ ಜಮೀನಿಗೆ ಕರಡಿ ದಾಳಿ ನಡೆಸಿ ಬೆಳೆಯನ್ನು ನಾಶ ಮಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟಿದ್ದರು. ಕಳೆದ 3-4 ದಿನಗಳಿಂದ ಕರಡಿಯನ್ನು ಓಡಿಸುವ ಕಾರ್ಯದಲ್ಲಿ ರೈತರು ನಿರತರಾಗಿದ್ದರು. ತಮ್ಮ ಜೀವದ ಹಂಗು ತೊರೆದು ಕರಡಿಯನ್ನು ಬೆನ್ನಟ್ಟಿ ಓಡಿಸಿದ್ದರು. ರೈತರ ಜಮೀನಿಗೆ ಕರಡಿ ದಾಳಿ ನಡೆಸಿದಾಗ ಕೋಲಿನಿಂದ ಬೆನ್ಣಟ್ಟಿ, ಕಲ್ಲು ಎಸೆದು ಆ ಕರಡಿಯನ್ನು ಸ್ಥಳೀಯರು ಓಡಿಸಿದ್ದಾರೆ. ಈ ಪ್ರಯತ್ನದಲ್ಲಿ ಯಾರಿಗೂ ಯಾವುದೇ ಹಾನಿ ಉಂಟಾಗಿಲ್ಲ ಎಂಬುದು ಸಮಾಧಾನಕರ ಸಂಗತಿ.
ಆದರೆ ಈಗ ಮತ್ತೆ ಕರಡಿ ಹಾವಳಿ ಕಾಣಿಸಿಕೊಂಡಿದ್ದು ಸ್ಥಳೀಯರಿಗೆ ಆತಂಕ ಹೆಚ್ಚಾಗಿದೆ. ಪೆಟ್ರೋಲ್ ಬಂಕ್‌ನ ಸಿಸಿ ಕ್ಯಾಮರೆದಲ್ಲಿ ಕರಡಿ ಓಡಾಡುವ ದೃಶ್ಯ ಸೆರೆಯಾಗಿದ್ದು, ಸ್ಥಳೀಯರು ಮತ್ತೊಮ್ಮೆ ಕರಡಿಯನ್ನು ಓಡಿಸುವ ಯತ್ನಕ್ಕೆ ಸಿದ್ಧರಾಗಿದ್ದಾರೆ.
ಅಲ್ಲದೆ, ಕರಡಿ ಹಾವಳಿಯಿಂದ ಸ್ಥಳೀರಯರಿಗೆ ತೊಂದರೆ ಆಗುವ ಸಾಧ್ಯತೆಯಿದೆ ಎಮದು ಆತಂಕಗೊಂಡಿದ್ದಾರೆ. ಹಾಗಾಗಿ ಈ ಬಗ್ಗೆ ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕರಡಿಗಳು ಕಾಡು ಬಿಟ್ಟು ನಾಡಿಗೆ ಬಾರದಂತೆ ಎಚ್ಚರವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: BJP ರಾಜ್ಯ ಕಾರ್ಯಕಾರಿಣಿಗೆ ಸಂತೋಷ್ ಆತ್ಮಹತ್ಯೆ ನೆರಳು: ಒಂದೇ ದಿನವಿರುವಂತೆ ಮಾಜಿಯಾಗುವ ಈಶ್ವರಪ್ಪ