ವಿಜಯನಗರದಲ್ಲಿ ಮತ್ತೆ ಕಾಣಿಸಿದ ಕರಡಿ ಹಾವಳಿ Vistara News

ವಿಜಯನಗರ

ವಿಜಯನಗರದಲ್ಲಿ ಮತ್ತೆ ಕಾಣಿಸಿದ ಕರಡಿ ಹಾವಳಿ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು ಕಂಡುಬಂದಿದೆ. ಈ ನಡುವೆ ಸ್ಥಳೀಯರು ಆತಂಕಗೊಂಡಿದ್ದು ಬೆಳೆ ನಾಶವಾಗದಂತೆ ತಡೆಯಲು ಹರಸಾಹಸ ಪಟ್ಟಿದ್ದಾರೆ.

VISTARANEWS.COM


on

beat attck
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಜಯನಗರ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು ಕಂಡುಬಂದಿದೆ. ಈವರೆಗೆ ರೈತರ ಜಮೀನಿಗೆ ದಾಳಿ ನಡೆಸಿ ಬೆಳೆ ನಾಶ ಮಾಡಿದ್ದು ಕಂಡಿತ್ತು ಆದರೆ ಇದೀಗ ಪೆಟ್ರೋಲ್‌ ಬಂಕ್‌ನಲ್ಲೂ ಕರಡಿ ಕಾಟ ಕಾಣಿಸಿದೆ. ಬೆಳಗಿನ ಜಾವ ಪೆಟರೋಲ್‌ ಬಂಕ್‌ ಒಂದರಲ್ಲಿ ಕರಡಿ ಓಡಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೆಲವು ದಿನಗಳಿಂದ ರೈತರ ಜಮೀನಿಗೆ ಕರಡಿ ದಾಳಿ ನಡೆಸಿ ಬೆಳೆಯನ್ನು ನಾಶ ಮಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟಿದ್ದರು. ಕಳೆದ 3-4 ದಿನಗಳಿಂದ ಕರಡಿಯನ್ನು ಓಡಿಸುವ ಕಾರ್ಯದಲ್ಲಿ ರೈತರು ನಿರತರಾಗಿದ್ದರು. ತಮ್ಮ ಜೀವದ ಹಂಗು ತೊರೆದು ಕರಡಿಯನ್ನು ಬೆನ್ನಟ್ಟಿ ಓಡಿಸಿದ್ದರು. ರೈತರ ಜಮೀನಿಗೆ ಕರಡಿ ದಾಳಿ ನಡೆಸಿದಾಗ ಕೋಲಿನಿಂದ ಬೆನ್ಣಟ್ಟಿ, ಕಲ್ಲು ಎಸೆದು ಆ ಕರಡಿಯನ್ನು ಸ್ಥಳೀಯರು ಓಡಿಸಿದ್ದಾರೆ. ಈ ಪ್ರಯತ್ನದಲ್ಲಿ ಯಾರಿಗೂ ಯಾವುದೇ ಹಾನಿ ಉಂಟಾಗಿಲ್ಲ ಎಂಬುದು ಸಮಾಧಾನಕರ ಸಂಗತಿ.

ಆದರೆ ಈಗ ಮತ್ತೆ ಕರಡಿ ಹಾವಳಿ ಕಾಣಿಸಿಕೊಂಡಿದ್ದು ಸ್ಥಳೀಯರಿಗೆ ಆತಂಕ ಹೆಚ್ಚಾಗಿದೆ. ಪೆಟ್ರೋಲ್‌ ಬಂಕ್‌ನ ಸಿಸಿ ಕ್ಯಾಮರೆದಲ್ಲಿ ಕರಡಿ ಓಡಾಡುವ ದೃಶ್ಯ ಸೆರೆಯಾಗಿದ್ದು, ಸ್ಥಳೀಯರು ಮತ್ತೊಮ್ಮೆ ಕರಡಿಯನ್ನು ಓಡಿಸುವ ಯತ್ನಕ್ಕೆ ಸಿದ್ಧರಾಗಿದ್ದಾರೆ.

ಅಲ್ಲದೆ, ಕರಡಿ ಹಾವಳಿಯಿಂದ ಸ್ಥಳೀರಯರಿಗೆ ತೊಂದರೆ ಆಗುವ ಸಾಧ್ಯತೆಯಿದೆ ಎಮದು ಆತಂಕಗೊಂಡಿದ್ದಾರೆ. ಹಾಗಾಗಿ ಈ ಬಗ್ಗೆ ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕರಡಿಗಳು ಕಾಡು ಬಿಟ್ಟು ನಾಡಿಗೆ ಬಾರದಂತೆ ಎಚ್ಚರವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: BJP ರಾಜ್ಯ ಕಾರ್ಯಕಾರಿಣಿಗೆ ಸಂತೋಷ್‌ ಆತ್ಮಹತ್ಯೆ ನೆರಳು: ಒಂದೇ ದಿನವಿರುವಂತೆ ಮಾಜಿಯಾಗುವ ಈಶ್ವರಪ್ಪ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿಜಯನಗರ

Vijayanagara News: ನಾಗರಕಟ್ಟೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ

Vijayanagara News: ಕೊಟ್ಟೂರು ತಾಲೂಕಿನ ನಾಗರಕಟ್ಟೆಯ ಪ್ರೌಢಶಾಲೆಯ ಆವರಣದಲ್ಲಿ ಬಿ.ನೀಲಪ್ಪ ತಂಡದ ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.

VISTARANEWS.COM


on

Sugama Sangeetha programme at Kottur
ಕೊಟ್ಟೂರು ತಾಲೂಕಿನ ನಾಗರಕಟ್ಟೆಯ ಪ್ರೌಢಶಾಲೆಯ ಆವರಣದಲ್ಲಿ ಬಿ.ನೀಲಪ್ಪ ತಂಡದ ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.
Koo

ಕೊಟ್ಟೂರು: ತಾಲೂಕಿನ ನಾಗರಕಟ್ಟೆಯ ಪ್ರೌಢಶಾಲೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯನಗರ ಹಾಗೂ ಶ್ರೀ ಸಿದ್ದರಾಮೇಶ್ವರ ಭೋವಿ ಯುವಕರ ಸಂಘದ ಸಹಯೋಗದಲ್ಲಿ ಬಿ.ನೀಲಪ್ಪ ತಂಡದ ವತಿಯಿಂದ ಸುಗಮ ಸಂಗೀತ (Sugama Sangeetha) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾಧ್ಯಾಯ ಸುಭಾಷ್, ಕೀ ಬೋರ್ಡ್ ನುಡಿಸುವುದರ ಮೂಲಕ ಉದ್ಘಾಟಿಸಿದರು.

ಇದನ್ನೂ ಓದಿ: IND vs SA: ದಕ್ಷಿಣ ಆಫ್ರಿಕಾ ತಲುಪಿದ ಯಂಗ್​ ಟೀಮ್​ ಇಂಡಿಯಾ; ಡಿ.10ರಿಂದ ಸರಣಿ ಆರಂಭ

ಬಳಿಕ ಮಾತನಾಡಿದ ಅವರು, ಸಂಗೀತ ಎನ್ನುವುದು ಮನಸ್ಸಿಗೆ ಮುದ ನೀಡುವ ದಿವ್ಯ ಔಷಧಿಯಂತಿದ್ದು, ಸಂಗೀತ ಆಲಿಸುವುದರ ಮೂಲಕ ಮಾನಸಿಕ ನೆಮ್ಮದಿ ಕಾಣಬಹುದಾಗಿದೆ ಹಾಗಾಗಿ ಸಂಗೀತ ಮತ್ತು ಕಲೆ ಉಳಿಯಬೇಕಾದರೆ ಇಂದಿನ ಮಕ್ಕಳು ಕೂಡ ಮೊಬೈಲ್ ಬಳಕೆಗೆ ಒಳಗಾಗದೆ ಸಂಗೀತದಲ್ಲಿ ಆಸಕ್ತಿ ತೋರಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Viral Video: ಗರಿಗರಿ ಬಿಸಿಬಿಸಿ ದೊಡ್ಡ ಜಿಲೇಬಿ! ಇದು ಸೂರ್ಯಕಾಂತಿ ಜಿಲೇಬಿ!

ಕಾರ್ಯಕ್ರಮದಲ್ಲಿ ತೂಲಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುನಿಲ್, ಕಲಾವಿದ ಸಿದ್ದಲಿಂಗಪ್ಪ, ಮುಖ್ಯ ಶಿಕ್ಷಕ ಅಜಯ್ ಕುಮಾರ್, ಮುಖಂಡರಾದ ಸೋಮಶೇಖರ್, ರಾಜಣ್ಣ, ಚೌಡೇಶ್ ಹಾಗೂ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ಸಂಗೀತ ಶಿಕ್ಷಕಿ ಕು.ಪ್ರಿಯಾಂಕ ಮತ್ತು ಗಾಯಕರಾದ ಶಿವಕುಮಾರ್, ಶಿವಕುಮಾರ್ ಟಿ., ವಸಂತ ಮೂರ್ತಿ ಮತ್ತು ಶಾಲೆಯ ಸಹ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Continue Reading

ಉಡುಪಿ

Karnataka Weather : ಮತ್ತೆ ಬದಲಾಯ್ತು ವಾತಾವರಣ; ಮಳೆ ಹೋಯ್ತು, ಬಿಸಿಲು ಬಂತು!

Karnataka Weather Forecast : ಮಿಚುಂಗ್‌ ಸೈಕ್ಲೋನ್‌ ಪ್ರಭಾವದಿಂದಾಗಿ ಕಳೆದೊಂದು ವಾರದಿಂದ ರಾಜ್ಯದ ಬಹುತೇಕ ಕಡೆ ಮೋಡ ಕವಿದ ವಾತಾವರಣ ಇತ್ತು. ಇದೀಗ ಪ್ರಭಾವ ಕಡಿಮೆ ಆಗಿದ್ದು, ರಾಜ್ಯಾದ್ಯಂತ ಇನ್ನೆರಡು ದಿನಗಳು ಶುಷ್ಕ ವಾತಾವರಣ (Dry weather) ಇರಲಿದ್ದು, ಮಳೆಗೆ (Rain News) ಬ್ರೇಕ್‌ ಬಿದ್ದಿದೆ.

VISTARANEWS.COM


on

By

dry weather karnataka weather Forecast
Koo

ಬೆಂಗಳೂರು: ರಾಜ್ಯದ ಹಲವೆಡೆ ಮತ್ತೆ ವಾತಾವರಣ ಬದಲಾಗಿದೆ. ಮಳೆಗೆ ಹೋಗಿ ಮತ್ತೆ ಬಿಸಿಲು ಆವರಿಸುತ್ತಿದೆ. ಇನ್ನೆರಡು ದಿನಗಳು ರಾಜ್ಯದಲ್ಲಿ ಒಣಹವೆ (Dry weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ಡಿ.7-8ರಂದು ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಗೆ ಯಾವುದೇ ಮಳೆ ಮುನ್ಸೂಚನೆಯಿಲ್ಲ. ಬದಲಿಗೆ ಒಣಹವೆಯೇ ಮೇಲುಗೈ ಸಾಧಿಸಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಹಾಗೂ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಶುಷ್ಕ ವಾತಾವರಣ ಇರಲಿದೆ.

ಇದನ್ನೂ ಓದಿ: Winter Cardigan Fashion: ಚಳಿಗಾಲದಲ್ಲಿ ಸ್ಟೈಲಿಶ್‌ ಆಗಿ ಕಾಣಿಸುವ ಕಾರ್ಡಿಗಾನ್‌ ಫ್ಯಾಷನ್‌

ಹಗುರ ಮಳೆಯಷ್ಟೇ!

ಇನ್ನೂ ದಕ್ಷಿಣ ಒಳನಾಡಿನ ಚಾಮರಾಜನಗರದಲ್ಲಿ ಮಾತ್ರ ಹಗುರದಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ. ಉಳಿದಂತೆ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಸೇರಿ ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಲ್ಲಿ ಒಣಹವೆ ಇರಲಿದೆ.

ಇತ್ತ ಮಲೆನಾಡಿನ ಹಾಸನ, ಕೊಡಗು, ಶಿವಮೊಗ್ಗ,ಚಿಕ್ಕಮಗಳೂರಲ್ಲೂ ಮಳೆ ಮುನ್ಸೂಚನೆ ಇಲ್ಲ. ಬಿಸಿಲಿನಿಂದ ಕೂಡಿರಲಿದೆ. ಇನ್ನು ಬೆಂಗಳೂರಲ್ಲಿ ಕೆಲವೆಡೆ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಉಷ್ಣಾಂಶ 29 ಹಾಗೂ ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 28 ಡಿ.ಸೆ -19 ಡಿ.ಸೆ
ಮಂಗಳೂರು: 33 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 29 ಡಿ.ಸೆ – 18 ಡಿ.ಸೆ
ಗದಗ: 30 ಡಿ.ಸೆ – 18 ಡಿ.ಸೆ
ಹೊನ್ನಾವರ: 34 ಡಿ.ಸೆ- 23 ಡಿ.ಸೆ
ಕಲಬುರಗಿ: 26 ಡಿ.ಸೆ – 21 ಡಿ.ಸೆ
ಬೆಳಗಾವಿ: 29 ಡಿ.ಸೆ – 17 ಡಿ.ಸೆ
ಕಾರವಾರ: 35 ಡಿ.ಸೆ – 23 ಡಿ.ಸೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading

ಕರ್ನಾಟಕ

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ತನ್ವೀರ್‌; NIA ತನಿಖೆಗೆ ವಹಿಸಲು ಶಾಗೆ ಯತ್ನಾಳ್‌ ಪತ್ರ!

CM Siddaramaiah: ಭಯೋತ್ಪಾದನೆ ಪರ ಇರುವ ವ್ಯಕ್ತಿಯ ಹಿನ್ನೆಲೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿದಿದೆಯೇ? ತನ್ವೀರ್ ಪೀರಾ ಅವರ ಸೌದಿ ಮತ್ತು ಮಧ್ಯಪ್ರಾಚ್ಯ ಭೇಟಿ ಸೇರಿ ಎಲ್ಲವನ್ನೂ ನಾನು ಬಹಿರಂಗಪಡಿಸುತ್ತೇನೆ ಎಂದು ಟ್ವೀಟ್‌ ಮೂಲಕ ಕಿಡಿಕಾರಿದ್ದರು. ಈಗ ಎನ್ಐಎ ತನಿಖೆ ನಡೆಸುವಂತೆ ಅಮಿತ್‌ ಶಾಗೆ ಶಾಸಕ ಯತ್ನಾಳ್ ಪತ್ರ ಬರೆದು ಕೋರಿದ್ದಾರೆ.

VISTARANEWS.COM


on

Yatnal writes to Amit Shah
Koo

ಬೆಂಗಳೂರು: ಹುಬ್ಬಳ್ಳಿ‌ಯಲ್ಲಿ ಸೋಮವಾರ ನಡೆದಿದ್ದ‌ ಮುಸ್ಲಿಂ ಸಮಾವೇಶದಲ್ಲಿ (Muslim conference) ಸಿಎಂ‌ ಸಿದ್ದರಾಮಯ್ಯ ‌(CM Siddaramaiah) ಐಸಿಸ್‌ ಸಂಘಟನೆ (ISIS Terror) ಜತೆ ಸಂಪರ್ಕ ಹೊಂದಿರುವ ವ್ಯಕ್ತಿ ಜತೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದ ಮಾಜಿ ಸಚಿವ, ‌ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ (MLA Basanagouda Patil Yatnal) ಈಗ ಈ ಸಂಬಂಧ ಎನ್‌ಐಎ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದು ಕೋರಿದ್ದಾರೆ.

ಬುಧವಾರ ಬೆಳಗ್ಗೆಯಷ್ಟೇ ಸಿಎಂ ವಿರುದ್ಧ ಐಸಿಸಿ ಉಗ್ರ ಚಟುವಟಿಕೆಯನ್ನು ಬೆಂಬಲಿಸುವ ವ್ಯಕ್ತಿ ಜತೆ ವೇದಿಕೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರಿಗೆ ಅರಿವು ಇರಲಿಲ್ಲವೇ ಎಂದು ಆರೋಪವನ್ನು ಮಾಡಿದ್ದರು. ಅಲ್ಲದೆ, ಕೆಲವೇ ಗಂಟೆಗಳಲ್ಲಿ ಸರಣಿ ಫೋಟೊಗಳನ್ನು ಬಿಡುಗಡೆ ಮಾಡಿದ್ದರು. ಇಂಥ ಭಯೋತ್ಪಾದನೆ ಪರ ಇರುವ ವ್ಯಕ್ತಿಯ ಹಿನ್ನೆಲೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿದಿದೆಯೇ? ತನ್ವೀರ್ ಪೀರಾ ಅವರ ಸೌದಿ ಮತ್ತು ಮಧ್ಯಪ್ರಾಚ್ಯ ಭೇಟಿ ಸೇರಿ ಎಲ್ಲವನ್ನೂ ನಾನು ಬಹಿರಂಗಪಡಿಸುತ್ತೇನೆ ಎಂದು ಟ್ವೀಟ್‌ ಮೂಲಕ ಕಿಡಿಕಾರಿದ್ದರು. ಈಗ ಎನ್ಐಎ ತನಿಖೆ ನಡೆಸುವಂತೆ ಅಮಿತ್‌ ಶಾಗೆ ಶಾಸಕ ಯತ್ನಾಳ್ ಪತ್ರ ಬರೆದು ಕೋರಿದ್ದಾರೆ.

Yatnal writes to Amit Shah

ಇದನ್ನೂ ಓದಿ: Belagavi Winter Session: ವಿಧೇಯಕ ಮಂಡನೆ; ಆನ್‌ಲೈನ್‌ ಗೇಮಿಂಗ್‌ ಆಡ್ತೀರಾ? ಇನ್ಮುಂದೆ ತೆರಿಗೆ ಕಟ್ಟಿ!

ತನ್ವೀರ್ ಪೀರಾ ಅನ್ನೋ ಐಸಿಸ್ ಉಗ್ರ ಸಂಘಟನೆಯ ಸಂಪರ್ಕ ಹೊಂದಿರುವ ವ್ಯಕ್ತಿ ಜತೆ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿರುವ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು. ಹೀಗಾಗಿ ಈ ಪ್ರಕರಣವನ್ನು ಎನ್‌ಐಗೆ ವಹಿಸುವುದು ಸೂಕ್ತ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಕಾರ್ಯಕ್ರಮದ ಭಾಗಿಯಾಗಿದ್ದ ತನ್ವೀರ್ ಪೀರಾಗೆ ಸಂಬಂಧಪಟ್ಟಂತೆ ಹಲವು ಫೋಟೊಗಳನ್ನು ಬಸನಗೌಡ ಪಾಟೀಲ್‌ ಯತ್ನಾಳ್‌ ಬಿಡುಗಡೆ ಮಾಡಿದ್ದರು. ಈ ಎಲ್ಲದರ ಆಧಾರದ ಮೇಲೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ತನ್ವೀರ್‌ ಪೀರಾ ಎಂಬ ವ್ಯಕ್ತಿ ಐಸಿಸ್ ನಾಯಕರನ್ನು ಭೇಟಿ ಮಾಡಿದ ಉದ್ದೇಶವನ್ನು ಕಂಡುಹಿಡಿಯಲು, ಅವರ ಪ್ರಯಾಣದ ಖರ್ಚು ವೆಚ್ಚಗಳ ಮೂಲಗಳನ್ನು ಕಂಡುಕೊಳ್ಳಲು, ಹಣಕಾಸು ನಿರ್ವಹಣೆಯಲ್ಲಿ ಆ ವ್ಯಕ್ತಿಯ ಪಾತ್ರ ಏನು ಎಂಬ ಬಗ್ಗೆ ತಿಳಿತಬೇಕಿದೆ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹಲವಾರು ಸಭೆಗಳಲ್ಲಿ ಪೀರಾ ಕಾಣಿಸಿಕೊಂಡಿದ್ದು, ಎಲ್ಲ ವಿಷಯಗಳ ಬಗ್ಗೆ ತನಿಖೆ ನಡೆಸಲು ಪ್ರಕರಣವನ್ನು ಎನ್ಐಎಗೆ ವಹಿಸಬೇಕು. ಈ ವಿಷಯವನ್ನು ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಮನವಿ ಮಾಡಿದ್ದಾರೆ.

ಮನವಿ ಪತ್ರದಲ್ಲೇನಿದೆ?

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಯೋತ್ಪಾದಕ ಸಂಘಟನೆ ಐಸಿಸ್‌ ಪರ ಇರುವ ತನ್ವೀರ್ ಪೀರಾ ಎಂಬ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಂಡ ಘಟನೆಯನ್ನು ನಾನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಪೀರಾ ಈ ಹಿಂದೆ ಮಧ್ಯಪ್ರಾಚ್ಯ ದೇಶಗಳಲ್ಲಿನ ತೀವ್ರಗಾಮಿ ಇಸ್ಲಾಮಿಕ್ ಸಂಘಟನೆಯ ನಾಯಕರನ್ನು ಭೇಟಿಯಾಗಿರುವ ಬಗ್ಗೆ ನನಗೆ ತಿಳಿದಿದೆ. ಇನ್ನೂ ಆತಂಕಕಾರಿ ಸಂಗತಿಯೆಂದರೆ, ಪೀರಾ ಸಿಎಂ ಅವರನ್ನು ಭೇಟಿಯಾಗುತ್ತಿರುವುದು ಇದೇ ಮೊದಲಲ್ಲ; ಅವರು ಈ ಹಿಂದೆ ಅನೇಕ ಭಾರಿ ಭೇಟಿಯಾಗಿದ್ದಾರೆ.

ನಮ್ಮ ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಉದ್ದೇಶದಿಂದ ಪೀರಾ ಮುಸ್ಲಿಂ ದೇಶಗಳಿಂದ ಹಣವನ್ನು ತರುತ್ತಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿಯೊಂದು ನನಗೆ ಸಿಕ್ಕಿದೆ. ಸಿಎಂ ತಮ್ಮ ವೈಯಕ್ತಿಕ ಭದ್ರತೆ ಮತ್ತು ಗುಪ್ತಚರ ಸಲಹೆಯನ್ನು ನಿರ್ಲಕ್ಷಿಸಿದ್ದಾರೆ. ಇಲ್ಲವೇ, ತಮ್ಮ ರಾಜಕೀಯ ಉದ್ದೇಶಕ್ಕಾಗಿ ಪೀರಾ ಅವರನ್ನು ಉದ್ದೇಶಪೂರ್ವಕವಾಗಿ ಭೇಟಿ ಮಾಡಲು ಅನುವು ಮಾಡಿಕೊಡುತ್ತಿರುವುದು ನಿಜವಾಗಿಯೂ ದುರದೃಷ್ಟಕರ.

ಇದನ್ನೂ ಓದಿ: Health Card: ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗೆ ಹೊಸ ರೂಪ; ಸಿಎಂ ಚಾಲನೆ

ದೇಶದ ಹಿತಾಸಕ್ತಿಯಿಂದ ಎನ್‌ಐಎ ತನಿಖೆ ಆಗಲಿ

ಭಯೋತ್ಪಾದನೆಯ ಪರವಾಗಿ ಇರುವ ವ್ಯಕ್ತಿಗಳು ಉನ್ನತ ಮಟ್ಟದ ರಾಜಕೀಯ ನಾಯಕರನ್ನು ಭೇಟಿಯಾಗಲು ಸಾಧ್ಯವಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಾಧ್ಯಮಗಳು ಮತ್ತು ನಾಗರಿಕರ ಸಮ್ಮುಖದಲ್ಲಿ ಈ ಭೇಟಿಗಳು ನಡೆಯುತ್ತವೆ. ಪೀರಾ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ನಮ್ಮ ಸ್ಥಳೀಯ ಪೊಲೀಸರು ಮುಂದಾಗುವುದಿಲ್ಲ. ಕಾರಣ, ಅವರು ರಾಜ್ಯ ಆಡಳಿತದೊಂದಿಗೆ ಶಾಮೀಲಾಗಿದ್ದಾರೆ ಎಂಬುದು ನನ್ನ ಅನುಮಾನವಾಗಿದೆ. ಹೀಗಾಗಿ ಪೀರಾ ಅವರನ್ನು ಕೇಂದ್ರ ಸಂಸ್ಥೆಗಳಿಂದ ಕೂಲಂಕಷವಾಗಿ ತನಿಖೆ ನಡೆಸುವುದು ನಮ್ಮ ದೇಶದ ಹಿತಾಸಕ್ತಿ ದೃಷ್ಟಿಯಿಂದ ಉತ್ತಮ ಎಂದು ನಾನು ದೃಢವಾಗಿ ನಂಬುತ್ತೇನೆ” ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಅಮಿತ್‌ ಶಾ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Continue Reading

ಕರ್ನಾಟಕ

Snake Bite : ವಿಜಯನಗರದಲ್ಲಿ ಹಾವು ಕಡಿತದಿಂದ ಮಹಿಳೆ ಸಾವು!

Snake Bite : ಮೆಕ್ಕೆ ಜೋಳ ಕಟಾವು ಮಾಡುತ್ತಿದ್ದ ಮಹಿಳೆಗೆ ಹಾವು ಕಚ್ಚಿದ್ದು, ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

VISTARANEWS.COM


on

By

snake bite in vijayanagar
Koo

ವಿಜಯನಗರ: ವಾರಕ್ಕೊಂದು ಹಾವು ಕಡಿತದಿಂದ (Snake Bite) ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿಜಯನಗರದ ಹರಪನಹಳ್ಳಿ ತಾಲೂಕಿನ ಬಸವಾನಾಳು ಗ್ರಾಮದಲ್ಲಿ ಹಾವು ಕಡಿತದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ರತ್ನಮ್ಮ (45) ಮೃತ ದುರ್ದೈವಿ.

ರತ್ನಮ್ಮ ಹೊಲದಲ್ಲಿ ಮೆಕ್ಕೆಜೋಳದ ಕಟಾವು ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಹಾವೊಂದು ರತ್ನಮ್ಮರ ಕಾಲಿಗೆ ಕಚ್ಚಿದೆ. ಕೂಡಲೇ ಅವರನ್ನು ಅಲ್ಲಿದ್ದವರು ಕೊಟ್ಟೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲು ಮುಂದಾಗಿದ್ದಾರೆ. ಆದರೆ ಆದಾಗಲೇ ಹಾವಿನ ವಿಷ ಮೈಗೆ ಆವರಿಸಿದ್ದರಿಂದ ಮಾರ್ಗಮಧ್ಯೆಯೇ ಉಸಿರು ಚೆಲ್ಲಿದ್ದಾರೆ.

ಕೊಟ್ಟೂರು ತಾಲೂಕು ಆರೋಗ್ಯಾಧಿಕಾರಿ ಡಾ. ಬಸವೇಶ್ವರ ಅವರು ಮೃತಪಟ್ಟಿದ್ದಾಗಿ ಖಚಿತಪಡಿಸಿದ್ದಾರೆ. ಕೊಟ್ಟರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಹಾವು ಕಡಿತಕ್ಕೆ ಬಲಿಯಾಗಿದ್ದ ಮಕ್ಕಳು

ರಾಜ್ಯದಲ್ಲಿ ಹಾವು ಕಡಿತಕ್ಕೆ (Snake Bite) ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಧಾರವಾಡದಲ್ಲಿ ನ.27ರಂದು ಹಾವು ಕಡಿತದಿಂದ ಬಾಲಕ ಮೃತಪಟ್ಟಿದ್ದ. ಈ ಘಟನೆ ಮಾಸುವ ಮುನ್ನವೇ ಬಾಲಕಿಯೊಬ್ಬಳು ಸಹ ಹಾವಿನ ಕಡಿತದಿಂದ ಮೃತಪಟ್ಟಿದ್ದಳು.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಿಲ್ವಾಡ್ (ಬಿ) ಗ್ರಾಮದಲ್ಲಿ ಸೋನಿಕಾ ಪಾಟೀಲ್ (10) ಎಂಬಾಕೆ ಹಾವು ಕಡಿದು ಮೃತಪಟ್ಟಿದ್ದಳು. ಸೋನಿಕಾ ಬಿಲ್ವಾಡ್ (ಬಿ) ಗ್ರಾಮದ ಸರ್ಕಾರಿ‌ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿ ಓದುತ್ತಿದ್ದಳು. ಶಾಲೆ ಮುಗಿಸಿ ಮನೆಗೆ ಬರುತ್ತಿದ್ದಾಗ ಹಾವು ಕಡಿದಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಸೋನಿಕಾ ಮೃತಪಟ್ಟಿದ್ದಾಳೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಧಾರವಾಡ: ಧಾರವಾಡದ ಹೆಬ್ಬಳ್ಳಿ ಗ್ರಾಮದಲ್ಲಿ ಹಾವು ಕಡಿತದಿಂದ ಅರುಣ್ ಬಡಿಗೇರ್ (9) ಎಂಬ ಬಾಲಕ ಮೃತಪಟ್ಟಿದ್ದ. ಅರುಣ್‌ ಮನೆಯ ಪಕ್ಕದಲ್ಲೇ ಆಟವಾಡಲು ಹೋಗಿದ್ದಾಗ ಹಾವು ಕಚ್ಚಿತ್ತು. ಕೂಡಲೇ ಚಿಕಿತ್ಸೆಗೆ ಆಸ್ಪತ್ರೆಗೆ ಕರೆತಂದರೂ ಫಲಕಾರಿಯಾಗಲಿಲ್ಲ.

ಇತ್ತ ಹಾವು ಕಡಿತದಿಂದ ಮಹಿಳೆ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೌರಗಾನಹಳ್ಳಿಯಲ್ಲಿ ನಡೆದಿತ್ತು. ನ. 13 ಸೋಮವಾರ ಸಂಜೆ ತೋಟದಲ್ಲಿ ಬೆಳೆದಿದ್ದ ಹೂಗಳನ್ನ ಕೊಯ್ಯಲು ಹೋಗಿದ್ದಾಗ ಮಹಿಳೆಗೆ ಹಾವು ಕಚ್ಚಿತ್ತು. ಶಾರದಮ್ಮ (42) ಮೃತ ದುರ್ದೈವಿ. ಹಾವು ಕಚ್ಚಿದ ಕೂಡಲೇ ಅವರನ್ನು ಕೊರಟಗೆರೆ ತಾಲೂಕು ಆಸ್ಪತ್ರೆಗೆ ಕರೆದೊಯ್ಯತ್ತಿದ್ದಾಗ ಮಾರ್ಗ ಮಧ್ಯೆ ಮಹಿಳೆ ಮೃತಪಟ್ಟಿದ್ದರು.

ಘಟಿಕೋತ್ಸವದಲ್ಲಿ ಪದವಿ ಪಡೆದ ಕೇರಳ ಮೂಲದ ವಿದ್ಯಾರ್ಥಿಗೆ ಹಾವು ಕಡಿದು ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿತ್ತು. ಜಿ.ಪರಮೇಶ್ವರ್ ಒಡೆತನದ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಘಟಿಕೋತ್ಸವ ನಡೆದಿತ್ತು. ಇದರಲ್ಲಿ ಕೇರಳ ಮೂಲದ ಅದಿತ್ ಬಾಲಕೃಷ್ಣನ್ ಎಂಬಿಬಿಎಸ್ ಪದವಿ ಪಡೆದಿದ್ದ. ಪದವಿ ಪಡೆದು ಪಾರ್ಕ್‌ನಲ್ಲಿ ನಿಂತಿದ್ದವನಿಗೆ ಹಾವು ಕಡಿದಿರುವ ಶಂಕೆ ವ್ಯಕ್ತವಾಗಿದೆ. ಹಾವು ಕಡಿತ ಗಮನಿಸದೇ ಮನೆಗೆ ಬಂದಾಗ ಕುಸಿದು ಬಿದ್ದು ಮೃತಪಟ್ಟಿದ್ದ. ಮೃತದೇಹವನ್ನು ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ರವಾನೆ ಮಾಡಲಾಗಿತ್ತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading
Advertisement
Krishna Byregowda Central assistance
ಕರ್ನಾಟಕ11 mins ago

Assembly Session : ಕೇಂದ್ರ ಅನುದಾನ ವರ್ಷದಿಂದ ವರ್ಷಕ್ಕೆ ಇಳಿಕೆ; ಪೈಸೆ ಪೈಸೆ ಲೆಕ್ಕ ಕೊಟ್ಟ ಕೃಷ್ಣ ಬೈರೇಗೌಡ

Karnataka Drought
ಕರ್ನಾಟಕ21 mins ago

Karnataka Drought: ಮುಂದಿನ ವಾರ ಡಿಬಿಟಿ ಮೂಲಕ ರೈತರಿಗೆ ಬರ ಪರಿಹಾರ; 2 ಸಾವಿರ ರೂ.ವರೆಗೆ ಜಮೆ

IT raids on liquor traders across Odisha and Jharkhand
ದೇಶ23 mins ago

ತೆರಿಗೆಗಳ್ಳರ ಮೇಲೆ ಐಟಿ ದಾಳಿ; ನೋಟು ಎಣಿಸಿ ಎಣಿಸಿ ಕೌಂಟಿಂಗ್ ಮೆಷಿನ್‌ಗೆ ಸುಸ್ತು!

Attendance Araga Jnanendra UT Khader Araga jnanendra
ಕರ್ನಾಟಕ44 mins ago

Belagavi Winter Session : ನಾವೂ ಟೈಮಿಗೆ ಸರಿಯಾಗಿ ಬಂದಿದ್ದೀವಿ; ಸ್ಪೀಕರ್‌ ಜತೆ ಶಾಸಕರ ಜಗಳ!

Madhu Bangarappa in Belagavi Winter Session
ಕರ್ನಾಟಕ1 hour ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Pressmeet for Demand for construction of bypass road in Yallapur
ಉತ್ತರ ಕನ್ನಡ1 hour ago

Uttara Kannada News: ಯಲ್ಲಾಪುರ ಪಟ್ಟಣದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಒತ್ತಾಯ

Israel
ಪ್ರಮುಖ ಸುದ್ದಿ1 hour ago

Israel Palestine War: ಅರ್ಧದಷ್ಟು ಹಮಾಸ್ ಕಮಾಂಡರ್‌ಗಳು ಫಿನಿಷ್! ಇಸ್ರೇಲ್ ಹೇಳಿಕೆ

bengaluru bulls kiccha sudeep
ಕ್ರೀಡೆ1 hour ago

ಬೆಂಗಳೂರು ಬುಲ್ಸ್​ಗೆ ಫುಲ್ ಚಾರ್ಜ್​ ಮಾಡಲು ಬರಲಿದ್ದಾರೆ ಕಿಚ್ಚ ಸುದೀಪ್

self harming by wadi Acc cement Depute Director
ಕರ್ನಾಟಕ1 hour ago

Self Harming : ಅದಾನಿ ಗ್ರೂಪ್‌ ಕಾರ್ಖಾನೆಯ ಡೆಪ್ಯೂಟಿ ಮ್ಯಾನೇಜರ್ ಸೂಸೈಡ್‌!

A girl shoots her classmate and herself with shotgun
ವಿದೇಶ1 hour ago

viral video: ಸಹಪಾಠಿಗೆ ಗುಂಡು ಹೊಡೆದು ತಾನೂ ಸತ್ತ 14 ವರ್ಷದ ವಿದ್ಯಾರ್ಥಿನಿ!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Madhu Bangarappa in Belagavi Winter Session
ಕರ್ನಾಟಕ1 hour ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ2 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ7 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ15 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ23 hours ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ1 day ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ1 day ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ1 day ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ1 day ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ1 day ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

ಟ್ರೆಂಡಿಂಗ್‌