ಹೊಸಪೇಟೆ: ಚುನಾವಣೆ ಸಮಯದಲ್ಲಿ ಬಿಜೆಪಿಯಿಂದಲೇ ಅನೇಕರು ಸ್ಪರ್ಧೆಗೆ ಮುಂದಾಗಿ ಕೊನೆಗೆ ಬಂಡಾಐ ಏಳುವುದಕ್ಕೆ ಕಡಿವಾಣ ಹಾಕಲು ಸಿಎಂ ಬಸವರಾಜ ಬೊಮ್ಮಾಯಿ ಹೊಸ ಐಡಿಯಾ ಮಾಡಿದ್ದಾರೆ.
ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳನ್ನು ಒಟ್ಟಾಗಿ ನಿಲ್ಲಿಸಿ ಆಣೆ-ಪ್ರಮಾಣ ಮಾಡಿಸುವ ಹೊಸ ಸಂಪ್ರದಾಯಕ್ಕೆ ಹೂವಿನಹಡಗಲಿಯಲ್ಲಿ ಗುರುವಾರ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಚಾಲನೆ ನೀಡಿದ್ದಾರೆ.
ಒಂದೊಂದು ಕ್ಷೇತ್ರದಲ್ಲಿ ಇಬ್ಬರು-ಮೂವರು ಸ್ಪರ್ಧೆ ಮಾಡುವುದಾಗಿ ಮುಂದೆ ಬರುತ್ತಿದ್ದಾರೆ. ಈ ಕುರಿತು ವೇದಿಕೆಯಿಂದಲೇ ಆಕಾಂಕ್ಷಿಗಳಿಗೆ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದರು.
ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಕ್ಷೇತ್ರಗಳಲ್ಲಿರುವ ಬಿಜೆಪಿ ಆಕಾಂಕ್ಷಿಗಳ ಕುರಿತು ಸರ್ವೇ ಮಾಡಲಾಗುತ್ತಿದೆ. ಗೆಲ್ಲುವ ಕುದುರೆಗೆ ಟಿಕೆಟ್ ಕೊಡುತ್ತೇವೆ ಆಗ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಯಾರೂ ಬಂಡಾಯ ಏಳುವ ಹಾಗಿಲ್ಲ ಎಂದರು. ಕಳೆದ ಬಾರಿ ಬಂಡಾಯ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಕ್ಕೆ ಕೆಲವು ಕ್ಣೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಸೋತಿದ್ದಾರೆ.
ಹಡಗಲಿಯಲ್ಲಿ ಬಿಜೆಪಿ ಬಂಡಾಯ ಎದ್ದಿದ್ದರಿಂದ ಬಿಜೆಪಿ ಸೋಲನುಭವಿಸಿತು. ಬಿಜೆಪಿ ಬಂಡಾಯ ಅಭ್ಯರ್ಥಿ ಓದೋ ಗಂಗಪ್ಪ, ಬಿಜೆಪಿ ಅಧಿಕೃತ ಅಭ್ಯರ್ಥಿ ಚಂದ್ರನಾಯ್ಕ್ ಇಬ್ಬರೂ 70 ಸಾವಿರಕ್ಕೂ ಅಧಿಕ ಮತ ಪಡೆದರು. ಅದೇ ಕಾಂಗ್ರೆಸ್ ಅಭ್ಯರ್ಥಿ ಒಟ್ಟು 56 ಸಾವಿರ ಮತ ಪಡೆದು ಜಯಗಳಿಸಿದರು. ಇದರಿಂದ ಬಿಜೆಪಿಗೆ ನಷ್ಟವಾಯಿತು. ಪಕ್ಷ ಟಿಕೆಟ್ ಕೊಡುವವರಿಗೆ ಎಲ್ಲರೂ ಶ್ರಮಿಬೇಕು ಎಂದರು.
ಈ ಮಾತಿಗೆ ಎಲ್ಲರೂ ಬದ್ಧವಾಗಿರುತ್ತೇವೆ ಎಂದು ಆಕಾಂಕ್ಷಿಗಳಿಂದ ಜನ ಸಂಕಲ್ಪ ವೇದಿಕೆ ಮೇಳೆಯೇ ಭಾಷೆ ತೆಗೆದುಕೊಳ್ಳಲಾಯಿತು.
ಇದನ್ನೂ ಓದಿ | ಜನಸಂಕಲ್ಪ ಯಾತ್ರೆ | ಕಾಂಗ್ರೆಸ್‌ನದ್ದು 85% ಸರಕಾರ: ರಾಜೀವ್ ಗಾಂಧಿಯನ್ನು ಉದಾಹರಿಸಿದ ಬೊಮ್ಮಾಯಿ