ವಿಜಯನಗರ: ತಾಯಿಯ ಕೈತುತ್ತು ತಿಂದು ಆ ಬಾಲಕಿ ಖುಷಿ ಖುಷಿಯಿಂದ ಬ್ಯಾಗ್ ಏರಿಸಿಕೊಂಡು ಶಾಲೆಯತ್ತ ಹೆಜ್ಜೆ ಹಾಕಿದ್ದಳು. ಆದರೆ ಕ್ರೂರ ವಿಧಿಗೆ ಪ್ರಪಂಚ ನೋಡಬೇಕಾದ ಬಾಲಕಿ ಉಸಿರು ಚೆಲ್ಲಿದ್ದಾಳೆ. ಮುಂಜಾನೆ ಶಾಲೆಗೆ ಹೋದವಳು ಮನೆಗೆ ಹೆಣವಾಗಿ ಬಂದಿದ್ದಾಳೆ. ವಿದ್ಯುತ್ ಸ್ಪರ್ಶಿಸಿ (Electric shock) ಬಾಲಕಿ ದಾರುಣ ಅಂತ್ಯ ಕಂಡಿದ್ದಾಳೆ.
ವಿಜಯನಗರದ ಕೂಡ್ಲಿಗಿ ತಾಲೂಕಿನ ಕಾತ್ರಿಕಾಯನಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ತುಳಸಿ ಎಂಬಾಕೆ ಕರೆಂಟ್ ಶಾಕ್‌ನಿಂದ ಮೃತಪಟ್ಟವಳಿ. ತುಳಸಿ ಅದೇ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಳು.
ಬಾಲಕಿ ತುಳಸಿ ಕರೆಂಟ್ ಶಾಕ್‌ನಿಂದ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಮಡುಗಟ್ಟಿದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೂಡ್ಲಿಗಿ ಪಿಎಸ್‌ಐ ಎರಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಕ್ಕೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Mysuru Tragedy : ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಎಳೆನೀರು ತರಲು ಮರವೇರಿ ದಾರುಣ ಅಂತ್ಯ ಕಂಡ ಮಗ
ರಷ್ಯಾದಲ್ಲಿ ಘೋರ ದುರಂತ; ನದಿಯಲ್ಲಿ ಮುಳುಗಿ ನಾಲ್ವರು ಭಾರತೀಯ ವಿದ್ಯಾರ್ಥಿಗಳ ಸಾವು
ಮಾಸ್ಕೋ: ರಷ್ಯಾದಲ್ಲಿ ಘೋರ ದುರಂತವೊಂದು ನಡೆದಿದ್ದು, ನದಿಯಲ್ಲಿ ಮುಳುಗಿ ನಾಲ್ವರು ಭಾರತೀಯ ಮೂಲದ ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ (Drown In River). ಓರ್ವ ವಿದ್ಯಾರ್ಥಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೈಂಟ್ ಪೀಟರ್ಸ್‌ಬರ್ಗ್ (St. Petersburg) ಬಳಿ ನದಿಯಲ್ಲಿ ಈ ಅವಘಡ ಸಂಭವಿಸಿದೆ ಎಂದು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಶುಕ್ರವಾರ ದೃಢಪಡಿಸಿದೆ. ಶವಗಳನ್ನು ಆದಷ್ಟು ಬೇಗ ಭಾರತಕ್ಕೆ ಕಳುಹಿಸಲು ರಷ್ಯಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದೆ.
ʼʼಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ವಿದ್ಯಾರ್ಥಿನಿಯ ಮೃತಪಟ್ಟಿದ್ದು, ಇವರ ವಯಸ್ಸು ಅಂದಾಜು 18-20 ವರ್ಷ. ಇವರು ವೆಲಿಕಿ ನೊವ್ಗೊರೊಡ್ ನಗರದ ಸಮೀಪದಲ್ಲಿರುವ ನೊವ್ಗೊರೊಡ್ ಸ್ಟೇಟ್ ಯೂನಿವರ್ಸಿಟಿ(Novgorod State University)ಯಲ್ಲಿ ಅಧ್ಯಯನ ಮಾಡುತ್ತಿದ್ದರುʼʼ ಎಂದು ಮೂಲಗಳು ವರದಿ ಮಾಡಿವೆ.
ದುರಂತ ನಡೆದಿದ್ದು ಹೇಗೆ?
ವೋಲ್ಖೋವ್ ನದಿಗೆ ಬಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸಲು ಆಕೆಯ ನಾಲ್ವರು ಸ್ನೇಹಿತರು ಯತ್ನಿಸಿದ ವೇಳೆ ಈ ದುರಂತ ನಡೆದಿದೆ. ಈ ಪೈಕಿ ಓರ್ವನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಷ್ಯಾದ ಮಾಧ್ಯಮಗಳು ಹೇಳಿವೆ. “ಸಾಧ್ಯವಾದಷ್ಟು ಬೇಗ ಶವಗಳನ್ನು ಸಂಬಂಧಿಕರಿಗೆ ಕಳುಹಿಸಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಅಪಾಯದಿಂದ ಪಾರಾದ ವಿದ್ಯಾರ್ಥಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಮಾಸ್ಕೋದಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಅಮೆರಿಕದಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳ ಸಾವು
ಕೆಲವು ದಿನಗಳ ಹಿಂದೆ ಅಮೆರಿಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂವರು ಭಾರತೀಯ ಮೂಲದ ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಜಾರ್ಜಿಯಾದ ಆಲ್ಫಾರೆಟ್ಟಾ ಬಳಿ ನಡೆದ ಕಾರು ಅಪಘಾತದಲ್ಲಿ ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದರು.
ಆರ್ಯನ್ ಜೋಷಿ, ಶ್ರಿಯಾ ಅವಸರಲ ಮತ್ತು ಅನ್ವಿ ಶರ್ಮಾ ಮೃತ ವಿದ್ಯಾರ್ಥಿಗಳು. ಈ ಪೈಕಿ ಆರ್ಯನ್ ಜೋಷಿ, ಶ್ರೀಯಾ ಅವಸರಳ ಸ್ಥಳದಲ್ಲೇ ಅಸುನೀಗಿದ್ದರೆ, ಅನ್ವಿ ಶರ್ಮಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಗಾಯಯೊಂಡವರನ್ನು ಋತ್ವಿಕ್ ಸೋಮೆಪಳ್ಳಿ ಹಾಗೂ ಮೊಹಮ್ಮದ್ ಲಿಯಾಕತ್ ಎಂದು ಗುರುತಿಸಲಾಗಿತ್ತು.
ಈ ಐವರು ಆಲ್ಫಾರೆಟ್ಟಾ ಹೈಸ್ಕೂಲ್ ಮತ್ತು ಜಾರ್ಜಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು. ಇವರಿದ್ದ ಕಾರು ಅತಿ ವೇಗದಲ್ಲಿ ಸಂಚರಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದರು. ಚಾಲಕನ ನಿಯಂತ್ರಣಕ್ಕೆ ಸಿಗದೆ ಮೇ 14ರಂದು ಕಾರು ಆಲ್ಫಾರೆಟ್ಟಾ ಬಳಿ ಅಪಘಾತಕ್ಕೀಡಾಗಿತ್ತು. ʼʼಚಾಲಕನ ನಿಯಂತ್ರಣ ತಪ್ಪಿದ ನಂತರ ವೇಗವಾಗಿ ಚಲಿಸುತ್ತಿದ್ದ ಕಾರು ಪಲ್ಟಿಯಾಗಿ ತಲೆಕೆಳಗಾಗಿ ನಿಂತಿತ್ತುʼʼ ಎಂದಯ ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯ ತೀವ್ರತೆಯನ್ನು ವಿವರಿಸಿದ್ದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳು
ಇವರೆಲ್ಲ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದರು. ಶ್ರೀಯಾ ಅವಸರಳ ಯುಜಿಎ ಶಿಕಾರಿ (UGA Shikaari) ಡ್ಯಾನ್ಸ್ ತಂಡದ ಸದಸ್ಯೆಯಾಗಿದ್ದರು. ಇನ್ನು ಅನ್ವಿ ಶರ್ಮಾ ಯುಜಿಎ ಕಲಾಕಾರ್ (UGA Kalakaar) ಮತ್ತು ಕ್ಯಾಪೆಲ್ಲ ಗ್ರೂಪ್ (Capella Group)ನ ಗಾಯಕಿಯಾಗಿ ಗುರುತಿಸಿಕೊಂಡಿದ್ದರು. ನೀವೊಮ್ಮ ಅದ್ಭುತ ಡ್ಯಾನ್ಸರ್. ನಿಮ್ಮ ಕಣ್ಮರೆಯ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲʼʼ ಎಂದು ಶಿಕಾರಿ ತಂಡ ಆಘಾತ ಸೂಚಿಸಿತ್ತು. ಕಲಾಕಾರ್ ಗ್ರೂಪ್ ಕೂಡ ಅನ್ವಿ ಶರ್ಮಾಗೆ ಶ್ರದ್ಧಾಂಜಲಿ ಸಲ್ಲಿಸಿತ್ತು.
ಆರ್ಯನ್ ಜೋಷಿ ಪದವಿ ಪಡೆಯಲು ಸಿದ್ಧತೆ ನಡೆಸಿಕೊಂಡಿದ್ದರು. ಆಲ್ಫಾರೆಟ್ಟಾ ಹೈ ಕ್ರಿಕೆಟ್ ಟೀಮ್ (Alpharetta High cricket team) ತನ್ನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಆರ್ಯನ್ ಜೋಷಿ ನಿಧನಕ್ಕೆ ನೋವು ತೋಡಿಕೊಂಡು, ʼʼಆರ್ಯನ್ ಜೋಷಿ ನಮ್ಮ ಬಹು ದೊಡ್ಡ ಬೆಂಬಲಿಗರಾಗಿದ್ದರು ಮತ್ತು ತಮ್ಮ ತಂಡದ ಬೆನ್ನೆಲುಬಾಗಿದ್ದರು. ನಮ್ಮ ತಂಡದ ಗೆಲುವಿನಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದು. ಅವರ ಅಗಲಿಕೆ ನಮ್ಮ ಪಾಲಿಗೆ ತುಂಬಲಾರದ ನಷ್ಟʼʼ ಎಂದು ಬರೆದುಕೊಂಡಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ