Site icon Vistara News

Fraud Case : ಗ್ಯಾಸ್‌ ಡೀಲರ್‌ಷಿಪ್‌ ಹೆಸರಲ್ಲಿ ನಿವೃತ್ತ ಪ್ರಿನ್ಸಿಪಾಲ್‌ಗೆ 45 ಲಕ್ಷ ರೂ. ವಂಚನೆ

Gas Dealership fraud

ವಿಜಯನಗರ: ಅಧಿಕೃತ ವ್ಯವಸ್ಥೆಯನ್ನು ಹೊರತುಪಡಿಸಿ ಬೇರೆ ಎಲ್ಲೂ ವ್ಯವಹಾರ ಮಾಡಬೇಡಿ ಎಂದು ಪದೇಪದೆ ಹೇಳುತ್ತಿದ್ದರೂ ಕೆಲವು ಮಂದಿ ಇನ್ನೂ ಆನ್‌ಲೈನ್‌ನ ಮೋಸದ ಜಾಲಗಳಲ್ಲಿ (Online Fraudsters) ಸಿಲುಕುತ್ತಲೇ ಇರುತ್ತಾರೆ. ಹೀಗೆ ವಿಜಯ ನಗರ ಜಿಲ್ಲೆಯ ನಿವೃತ್ತ ಪ್ರಿನ್ಸಿಪಾಲ್‌ ಒಬ್ಬರು ಗ್ಯಾಸ್‌ ಡೀಲರ್‌ಷಿಪ್‌ (Gas Dealership) ಹೆಸರಿನಲ್ಲಿ ವಂಚನೆಗೆ (Fraud Case) ಒಳಗಾಗಿದ್ದಾರೆ.

ವಿಜಯನಗರ ಜಿಲ್ಲೆಯ ಕೊಟ್ಟೂರು ಸರ್ಕಾರಿ ITI ಕಾಲೇಜು ನಿವೃತ್ತ ಪ್ರಾಂಶುಪಾಲ (Retired Principal) ನಾಗೇಂದ್ರಪ್ಪ ಅವರೇ ವಂಚನೆಗೆ ಒಳಗಾದವರು. ಅವರಿಗೆ ಗ್ಯಾಸ್ ಡೀಲರ್‌ಷಿಪ್‌ ಹೆಸರಿನಲ್ಲಿ ಬರೋಬ್ಬರಿ ₹45 ಲಕ್ಷ ಪಂಗನಾಮ ಹಾಕಲಾಗಿದೆ. ಮುಂಬೈ ಮೂಲಕ ಶಶಿಕಾಂತ್ ತಿವಾರಿ ಎಂಬಾತನೇ ಮೋಸಗಾರ.

ಕೊಟ್ಟೂರಿನ ಬಸವೇಶ್ವರ ಬಡಾವಣೆಯಲ್ಲಿ ವಾಸವಾಗಿರುವ ನಾಗೇಂದ್ರಪ್ಪ ಅವರನ್ನು ಆನ್‌ಲೈನ್‌ ಮೂಲಕವೇ ಶಶಿಕಾಂತ್‌ ತಿವಾರಿ ಪರಿಚಯ ಮಾಡಿಕೊಂಡಿದ್ದ.

ನಾನು ಗೋ ಗ್ಯಾಸ್ ಪ್ರತಿನಿಧಿ ಅಂತ ಪರಿಚಯ ಮಾಡಿಕೊಂಡಿದ್ದ ಶಶಿಕಾಂತ್ ತಿವಾರಿ ಡೀಲರ್‌ಷಿಪ್‌ ತೆಗೆದುಕೊಳ್ಳುವಂತೆ ನಾಗೇಂದ್ರಪ್ಪ ಅವರಲ್ಲಿ ವಿನಂತಿ ಮಾಡಿದ್ದ. ಕಂಪನಿಯ ಬಗ್ಗೆ, ಡೀಲರ್‌ಷಿಪ್‌ ಪಡೆದರೆ ಅಗುವ ಲಾಭಗಳ ಬಗ್ಗೆ ವಿವರಣೆ ನೀಡಿದ್ದ.

ಈ ಆಫರ್‌ ಎಲ್ಲರಿಗೂ ಸಿಗುವುದಿಲ್ಲ ಎಂದೆಲ್ಲ ತಲೆ ತುಂಬಿದ್ದ. ಡೀಲರ್‌ಷಿಪ್‌ ಬೇಕು ಅಂದ್ರೆ ₹45 ಲಕ್ಷ ಹಣ ಕಟ್ಟಬೇಕಾಗುತ್ತದೆ ಎಂದು ವಿವರಿಸಿದ್ದ. ಈ ಹಣವನ್ನು ಕೆಲವೇ ವರ್ಷದಲ್ಲಿ ಮರಳಿ ಪಡೆಯಬಹುದು ಎಂದು ವಿವರಿಸಿದ್ದ.

ಇದನ್ನೂ ಓದಿ: Fraud Case : ಕೈ ಕೊಟ್ಟು ಕಾಲ್ಕಿತ್ತ ಸೆಕೆಂಡ್‌ ಹ್ಯಾಂಡ್‌ ವೈಫ್‌!

ಇದರಿಂದ ಪುಳಕಿತರಾದ ನಾಗೇಂದ್ರ ಅವರು ವಂಚಕ ಹೇಳಿದಂತೆ ಹಂತ ಹಂತವಾಗಿ ₹45 ಲಕ್ಷ ಹಣವನ್ನು ಟ್ರಾನ್ಸಫರ್ ಮಾಡಿದ್ದಾರೆ. INDIAN BANK, HDFC ಬ್ಯಾಂಕ್ ಮೂಲಕ ₹45,80,300 ರೂ. ಜಮಾ ಮಾಡಲಾಗಿದೆ.

ಇಷ್ಟೆಲ್ಲ ಹಣ ಜಮೆಯಾದ ಬಳಿಕ ಶಶಿಕಾಂತ್‌ ತಿವಾರಿ ನಾಪತ್ತೆಯಾಗಿ ಬಿಟ್ಟಿದ್ದಾನೆ. ಈ ಕಡೆ ಹಣವೂ ಇಲ್ಲ, ಇನ್ನೊಂದು ಕಡೆ ಡೀಲರ್‌ಷಿಪ್‌ ಕೂಡಾ ಇಲ್ಲದೆ ನಾಗೇಂದ್ರಪ್ಪ ಅವರು ಕಂಗಾಲಾಗಿದ್ದಾರೆ. ಅವರು ಈಗ ಕೊಟ್ಟೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Exit mobile version