ವಿಜಯನಗರ: ಹಂಪಿ ಉತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಗಾಯಕ ಕೈಲಾಶ್ ಕೇರ್ ಮೇಲೆ ಕಿಡಿಗೇಡಿಗಳು ಬಾಟಲಿ ಎಸೆದಿದ್ದಾರೆ.
ಉತ್ಸವದ ಸಮಾರೋಪ ಸಮಾರಂಭದಲ್ಲಿ ಬಾಟಲಿ ಎಸೆದ ಕಿಡಿಗೇಡಿಗಳನ್ನು ಆರೆಸ್ಟ್ ಮಾಡಲಾಗಿದ್ದು, ಕನ್ನಡ ಹಾಡುಗಳನ್ನು ಹಾಡಲಿಲ್ಲವೆಂದು ಬಾಟಲಿ ಎಸೆದರು ಎಂದು ತಿಳಿದುಬಂದಿದೆ.
ಹಂಪಿ ಉತ್ಸವ ಸಮಾರೋಪ ಸಮಾರಂಭದ ಗಾಯತ್ರಿ ಪೀಠ ವೇದಿಕೆಯಲ್ಲಿ ಘಟನೆ ನಡೆದಿದೆ. ಪ್ರದ್ಮಶ್ರೀ ಪುರಸ್ಕೃತ ಹಿಂದಿ ಹಾಡುಗಾರ ಕೈಲಾಶ್ ಕೇರ್ ಮೇಲೆ ಪೇಕ್ಷಕರ ಗ್ಯಾಲರಿಯಿಂದ ನೀರಿನ ಬಾಟಲಿ ಎಸೆದು ಅವಮಾನ ಮಾಡಲಾಯಿತು. ಇದರಿಂದ ವಿಚಲಿತರಾಗದ ಕೈಲಾಶ್ ಖೇರ್ ಗಾಯನ ಮುಂದುವರಿಸಿದರು. ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಂಪಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Hampi Utsav 2023: ಹಂಪಿ ಉತ್ಸವದಲ್ಲಿ ವಿಜಯ್ ಪ್ರಕಾಶ್ ಗಾನ ಲಹರಿಗೆ ತಲೆದೂಗಿದ ಜನ