Site icon Vistara News

Lokayukta Raid | ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಜೆಸ್ಕಾಂ ಅಧಿಕಾರಿ

lokayuktha raid

ವಿಜಯನಗರ: ಇಲ್ಲಿನ ಹಗರಿಬೊಮ್ಮನಹಳ್ಳಿ ಪಟ್ಟಣದ ಜೆಸ್ಕಾಂ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದಾಗಲೇ (Lokayukta Raid) ಜೆಸ್ಕಾಂ ಸೆಕ್ಷನ್ ಅಧಿಕಾರಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಎಚ್.ಫಕ್ಕಿರಪ್ಪ ಎಂಬಾತ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ಬಂಡಿಹಳ್ಳಿ ಗ್ರಾಮದ ನಿವಾಸಿ ರೈತ ದಾದಾಪೀರ್ ಎಂಬುವರು ನೀಡಿದ ದೂರಿನ ಆಧಾರದಲ್ಲಿ ದಾಳಿ ನಡೆಸಲಾಗಿದೆ. ದಾದಾಪೀರ್‌ ಅವರ ಹೊಲದಲ್ಲಿದ್ದ ಪವರ್‌ ಟ್ರಾನ್ಸ್‌ಫಾರ್ಮರ್‌ ಸುಟ್ಟು ಹೋಗಿತ್ತು. ಈ ಕಾರಣಕ್ಕಾಗಿ ಅದರ ಬದಲಾವಣೆಗಾಗಿ ಜೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಈ ವೇಳೆ ಫಕ್ಕಿರಪ್ಪ, ಟಿಸಿ ಬದಲಾವಣೆಗೆ 15 ಸಾವಿರ ರೂ.ಗಳ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 2 ಸಾವಿರ ರೂ. ಗಳನ್ನು ರೈತ ದಾದಾಪೀರ್ ನೀಡಿದ್ದರು. ಶನಿವಾರ ಜೆಸ್ಕಾಂ ಎಇಇ ಕಚೇರಿಯಲ್ಲಿ 4 ಸಾವಿರ ರೂ. ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ | Appu Namana | ರೇಷ್ಮೆ ಸೀರೆಯಲ್ಲಿ ಮೂಡಿದ ಪುನೀತ್‌ ಭಾವಚಿತ್ರ; ಅಭಿಮಾನಿಗಳಿಂದ ಅಶ್ವಿನಿಗೆ ಉಡುಗೊರೆ

Exit mobile version