Site icon Vistara News

Love affair : ಡಿವೋರ್ಸ್‌ ಕೊಡೋವರ್ಗೂ ಕಾಪಾಡಿ ಪ್ಲೀಸ್!‌ ಒಲ್ಲದ ಗಂಡನ ಬಿಟ್ಟು, ನಲ್ಲನ ಜತೆ ಓಡಿ ಬಂದಳು

Couple in love holding hands

ವಿಜಯನಗರ: ಇಲ್ಲಿನ ಕೂಡ್ಲಿಗಿ ತಾಲೂಕಿನ ಚಿರತಗುಂಡ ಗ್ರಾಮದ ಪ್ರೇಮಿಗಳು ರಕ್ಷಣೆ (Love affair) ಕೋರಿ ಎಸ್‌ಪಿ ಕಚೇರಿಗೆ ಬಂದಿದ್ದರು. ಕೊಟ್ರೇಶ್ ಮತ್ತು ರಾಧಿಕ ಎಂಬುವವರು ನಮಗೆ ಜೀವ ಭಯವಿದೆ ಹೀಗಾಗಿ ರಕ್ಷಣೆ ಕೊಡಿ (Life threat) ಎಂದು ಮನವಿ ಮಾಡಿದರು.

ಅಂದಹಾಗೇ, ರಾಧಿಕ ಮನೆಯವರು ಇಷ್ಟವಿಲ್ಲದೆ ಇದ್ದರೂ ಬೇರೆ ಹುಡುಗನೊಂದಿಗೆ ಮದುವೆ ಮಾಡಿಸಿದ್ದಾರೆ. ಆತನೊಂದಿಗೆ ಕಾನೂನು ಪ್ರಕಾರ ಡಿವೋರ್ಸ್‌ ಆದ ಬಳಿಕ ನಾವಿಬ್ಬರು ವಿವಾಹವಾಹುತ್ತೇವೆ. ಅಲ್ಲಿಯವರೆಗೆ ನಮಗೆ ರಕ್ಷಣೆ ನೀಡಿ ಎಂದು ವಿಜಯನಗರ ಎಸ್‌ಪಿ ಶ್ರೀ ಹರಿಬಾಬು ಬಿ.ಎಲ್‌ಗೆ ಮನವಿ ಮಾಡಿದ್ದಾರೆ.

ಕೊಟ್ರೇಶ್‌ ಹಾಗೂ ರಾಧಿಕ

ಗ್ರಾಮದಲ್ಲಿ ಪ್ರೇಮಿಗಳ ಕೊಲೆ

ಈ ಹಿಂದೆಯೂ ಗ್ರಾಮದಲ್ಲಿ ಪ್ರೇಮಿಗಳ ಕೊಲೆಯಾಗಿದೆ. ಹೀಗಾಗಿ ನಮಗೆ ಪ್ರಾಣ ಭಯವಿದೆ. ನಾನು ಕೊಟ್ರೇಶ್‌ನನ್ನು ಪ್ರೀತಿಸುತ್ತಿದ್ದೇನೆ. ನಮ್ಮ ಮನೆಯಲ್ಲಿ ನನಗೆ ಇಷ್ಟವಿಲ್ಲದೇ ಮದುವೆ ಮಾಡಿದ್ದಾರೆ. ಕಾನೂನು ಪ್ರಕಾರ ವಿಚ್ಛೇಧನ ಪಡಿದ ಬಳಿಕ ಕೊಟ್ರೇಶ್‌ ಜತೆಗೆ ಮದುವೆ ಆಗುವುದಾಗಿ ರಾಧಿಕ ತಿಳಿಸಿದ್ದಾರೆ. ಸದ್ಯ ಪ್ರೇಮಿಗಳ ಮನವಿ ಸ್ವೀಕರಿಸಿರುವ ಎಸ್‌ಪಿ ಶ್ರೀಹರಿಬಾಬು, ಗ್ರಾಮಕ್ಕೆ ಪೊಲೀಸರೊಟ್ಟಿಗೆ ಪ್ರೇಮಿಗಳನ್ನು ಕಳಿಸಿದ್ದಾರೆ.

ಸಿನಿಮಾದಲ್ಲಿ ಚಾನ್ಸ್‌ ಕೊಡಿಸುವುದಾಗಿ ಯುವತಿಗೆ ವಂಚನೆ

ರಂಗಿನ ರಾಟೆ ಚಿತ್ರದ ನಿರ್ದೇಶಕ ಸಂತೋಷ್‌ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆ ಎಂದು ಯುವತಿಯೊಬ್ಬಳು ಆರೋಪಿಸಿದ್ದಾಳೆ. ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಹಂತ ಹಂತವಾಗಿ ಗೂಗಲ್‌ಪೇ, ಫೋನ್ ಪೇ ಮೂಲಕ ಹಣ ಕಳಿಸಿಕೊಂಡಿದ್ದಾರೆ. ಸದ್ಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version