Site icon Vistara News

Murder Case : ಜಮೀನಿಗಾಗಿ ಕಿತ್ತಾಟ; ತಮ್ಮನ ಎದೆಗೆ ಚೂರಿ ಹಾಕಿ ಕೊಂದ ಅಣ್ಣ

Murder Case in Vijayanagara

ವಿಜಯನಗರ: ಆಸ್ತಿ ವಿವಾದ ಹಿನ್ನೆಲೆ ಚೂರಿಯಿಂದ ಇರಿದು ಸಹೋದರನ ಕೊಲೆ (Murder case) ಮಾಡಲಾಗಿದೆ. ವಿಜಯನಗರದ ಹೂವಿನಹಡಗಲಿ ತಾಲೂಕು ನಂದಿಗಾವಿ ಗ್ರಾಮದಲ್ಲಿ ಘಟನೆ ನಡೆದಿದೆ. ರಮೇಶ ಹನುಮಂತಪ್ಪ ಕಿನ್ನೂರಿ (28) ಕೊಲೆಯದವರು.

ಅಣ್ಣ ಮಲ್ಲಪ್ಪನ ಜಮೀನನನ್ನು ಸಹೋದರರಿಬ್ಬರು ಹತ್ತು ವರ್ಷದ ಕರಾರಿಗೆ ಲಾವಣಿ ಹಾಕಿಕೊಂಡಿದ್ದರು. ಕರಾರು ಅವಧಿ ಮೂರು ವರ್ಷ ಇರುವಾಗಲೇ ಹೊಲ ಬಿಟ್ಟು ಕೊಡು ಎಂದು ಹಿರಿಯ ಸಹೋದರ ಮಲ್ಲಪ್ಪ ತನ್ನ ತಮ್ಮಂದಿರ ಜತೆ ಜಗಳ ಮಾಡಿದ್ದರು.

ಸಹೋದರರ ಜಗಳ ವಿಕೋಪಕ್ಕೆ ಹೋಗಿ ಅಣ್ಣ ಮಲ್ಲಪ್ಪ, ರಮೇಶನ ಎದೆ ಭಾಗಕ್ಕೆ ಚೂರಿಯಿಂದ ಇರಿದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವದಿಂದ ರಮೇಶ್ ಇದ್ದ ಜಾಗದಲ್ಲೇ ಕುಸಿದುಬಿದ್ದಾನೆ. ರಮೇಶನ ಜತೆಯಲ್ಲೆ ಇದ್ದ ಚಮನ ಸಾಬ್ ಎಂಬಾತ ಕೂಗಿ ಜನರನ್ನು ಸೇರಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ರಮೇಶ್‌ನನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆಸ್ಪತ್ರೆ ಸಮೀಪಿಸುತ್ತಿದ್ದ ರಮೇಶ ಉಸಿರು ಚೆಲ್ಲಿದ್ದಾನೆ.

ಕೊಲೆ ಮಾಡಿದ ಮಲ್ಲಪ್ಪನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆಯ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Child Death: ಆಟವಾಡುತ್ತ ಸಂಪ್‌ಗೆ ಬಿದ್ದು 2 ವರ್ಷದ ಕಂದಮ್ಮ ದುರ್ಮರಣ, ಮಳೆಗೆ ಮರ ಬಿದ್ದು ಮಹಿಳೆ ಸಾವು

ಅತ್ತಿಗೆಯಿಂದ ದೂರ ಇರು ಎಂದ ಮೈದುನನ ಬರ್ಬರವಾಗಿ ಹತ್ಯೆ ಮಾಡಿದ ಪ್ರಿಯಕರ

ಕಲಬುರಗಿ: ತನ್ನ ಅತ್ತಿಗೆಯ ಜೊತೆಗಿನ ಅನೈತಿಕ ಸಂಬಂಧದಿಂದ (Illegal Relationship) ದೂರ ಇರು ಎಂದು ಬುದ್ಧಿವಾದ ಹೇಳಿದ ಮೈದುನನನ್ನು ಅತ್ತಿಗೆಯ ಪ್ರಿಯಕರ ಬರ್ಬರವಾಗಿ ಕಲ್ಲಿನಿಂದ ಜಜ್ಜಿ ಹತ್ಯೆ (Stoned to death, murder case) ಮಾಡಿದ್ದಾನೆ. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮುನ್ನೊಳ್ಳಿ ಗ್ರಾಮದಲ್ಲಿ ಘಟನೆ (Kalaburagi crime news) ನಡೆದಿದೆ.

ಹೀರಾಲಾಲ್ ಲದಾಫ್ (35) ಎಂಬವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ. ಮುನ್ನೊಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿರುವ ಘಟನೆಯಿದು. ಕೊಲೆಯಾದ ಹೀರಾಲಾಲ್‌ನ ಅತ್ತಿಗೆ ಜೊತೆ ರವಿ ಎಂಬಾತ ಅಕ್ರಮ ಸಂಬಂಧ ಹೊಂದಿದ್ದ. ಹೀರಾಲಾಲ್ ಅಣ್ಣ ಬಾಬು ಲದಾಫ್, ತನ್ನ ಪತ್ನಿಯ ಅನೈತಿಕ ಸಂಬಂಧ ಕಂಡು ಅದರಿಂದ ದೂರ ಇರುವಂತೆ ಪತ್ನಿಗೆ ಹೇಳಿದ್ದ.

ಆದರೆ ಬಾಬು ಲದಾಫ್ ಹೆಂಡತಿ ತನ್ನ ಪ್ರಿಯಕರನ ಜೊತೆ ಸೇರಿ ಗಂಡನ ಮೇಲೆಯೇ ಹಲ್ಲೆ ಮಾಡಿಸಿದ್ದಳು. ಪತ್ನಿಯ ಅನೈತಿಕ ಸಂಬಂಧ ಹಾಗೂ ಹಲ್ಲೆಯಿಂದ ಮಾನಸಿಕವಾಗಿ ನೊಂದು ಬಾಬು ಲದಾಫ್‌ ಊರನ್ನೇ ಬಿಟ್ಟು ಹೋಗಿದ್ದ. ಅಣ್ಣನ ಸಂಸಾರವನ್ನು ಸರಿದಾರಿಗೆ ತರಲು ಯತ್ನಿಸಿದ್ದ ಹೀರಾಲಾಲ್, ಅನೈತಿಕ ಸಂಬಂಧ ಬಿಟ್ಟು ಬಿಡುವಂತೆ ರವಿಗೆ ಹೇಳಿದ್ದ. ಇದೇ ವಿಚಾರವಾಗಿ ಹೀರಾಲಾಲ್ ಹಾಗೂ ರವಿ ಮಧ್ಯೆ ಆಗಾಗ ಗಲಾಟೆ ಕೂಡ ಆಗಿತ್ತು.

ಮೊನ್ನೆ ಕುಡಿದ ನಶೆಯಲ್ಲಿ ಇವರಿಬ್ಬರೂ ಗಲಾಟೆ ಮಾಡಿಕೊಂಡಿದ್ದರು. ಬಳಿಕ ರವಿ ಹೀರಾಲಾಲ್‌ ಮೇಲೆ ಹಲ್ಲೆ ಮಾಡಿ ಕಲ್ಲಿನಿಂದ ಜಜ್ಜಿಹಾಕಿದ್ದಾನೆ. ಗಾಯಗೊಂಡು ಹೀರಾಲಾಲ್‌ನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ನಿನ್ನೆ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version